ಬ್ರೇಕಿಂಗ್ ನ್ಯೂಸ್
07-03-21 10:07 pm Headline Karnataka News Network ಕರ್ನಾಟಕ
ಭಟ್ಕಳ, ಮಾ.7 : ಕೈಗೆ ಕಟ್ಟಿದ್ದ ವಾಚ್ ನಲ್ಲಿ ಚಿನ್ನ ಅಡಗಿಸಿಟ್ಟಿದ್ದಾನೆಂದು ನಂಬಿ ಭಟ್ಕಳ ಮೂಲದ ವ್ಯಕ್ತಿಯನ್ನು ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು, ಆತನ ದುಬಾರಿ ಬೆಲೆಯ ಕೈಗಡಿಯಾರವನ್ನು ಪುಡಿಗಟ್ಟಿ ಚಿನ್ನಕ್ಕಾಗಿ ಹುಡುಕಾಡಿದ ಘಟನೆ ಕೇರಳದ ಕ್ಯಾಲಿಕಟ್ನಲ್ಲಿ ನಡೆದಿದೆ.
ಭಟ್ಕಳ ಕಾರಗದ್ದೆ ನಿವಾಸಿ ಮಹ್ಮದ್ ಇಸ್ಮಾಯಿಲ್ ಅವರ ಸಹೋದರ ದುಬೈನಲ್ಲಿ ವ್ಯಾಪಾರ ವಹಿವಾಟು ಹೊಂದಿದ್ದು, ಇಸ್ಮಾಯಿಲ್ ವಿಸಿಟಿಂಗ್ ವೀಸಾ ಪಡೆದು ಸಹೋದರನ ಬಳಿ ತೆರಳಿದ್ದರು. ಇವರು ಊರಿಗೆ ವಾಪಸ್ಸಾಗುತ್ತಿದ್ದಾಗ ಮಾ.3 ರಂದು ಕೇರಳದ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಕಸ್ಟಮ್ಸ್ ಅಧಿಕಾರಿಗಳು ಇಸ್ಮಾಯಿಲ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಕೈಯಲ್ಲಿದ್ದ ಕೈಗಡಿಯಾರದ ಬಗ್ಗೆ ಸಂಶಯಗೊಂಡು ಅಧಿಕಾರಿಗಳು ವಶಕ್ಕೆ ಪಡೆದು ಅದನ್ನು ಒಡೆದು ಹಾಕಿದ್ದಾರೆ. ಗಡಿಯಾರದಲ್ಲಿ ಚಿನ್ನ ಇಲ್ಲದಿರುವುದನ್ನು ತಿಳಿದು ಪುಡಿಯಾದ ಗಡಿಯಾರವನ್ನು ಟ್ರೇನಲ್ಲಿ ಇಟ್ಟು ಇಸ್ಮಾಯಿಲ್ ಅವರಿಗೆ ಹಿಂದಿರುಗಿಸಿದ್ದಾರೆ. ಒಡೆದ ಗಡಿಯಾರ ಕಂಡು ಕಂಗಾಲಾದ ಇಸ್ಮಾಯಿಲ್, ತನ್ನ ಗಡಿಯಾರವನ್ನು ತನಗೆ ವಾಪಸ್ಸು ನೀಡುವಂತೆ ಪಟ್ಟು ಹಿಡಿದಿದ್ದಾರೆ. ಗಡಿಯಾರದ ಮೌಲ್ಯವನ್ನು ಕೇಳಿಸಿಕೊಂಡ ಕಸ್ಟಮ್ಸ್ ಅಧಿಕಾರಿಗಳೂ ತಬ್ಬಿಬ್ಬಾಗಿದ್ದಾರೆ. ಈ ಕುರಿತು ಇಸ್ಮಾಯಿಲ್ ಕ್ಯಾಲಿಕಟ್ ಪೊಲೀಸ್ ಠಾಣೆಯಲ್ಲಿ ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಅರಬ್ ರಾಷ್ಟ್ರ ದುಬೈನಲ್ಲಿ ದುಬಾರಿ ಬೆಲೆಯ ಹಳೆಯ ಕೈ ಗಡಿಯಾರಗಳ ಮಾರಾಟ ಮಳಿಗೆಯೊಂದಿದೆ. ಆ ಮಳಿಗೆಯಲ್ಲಿ ಪ್ರಖ್ಯಾತ ಆಡಿಮೂವರ್ಸ್ ಪಿಗುಯೆಟ್ ಕಂಪೆನಿಯ ಸರಿಸುಮಾರು 60 ಲಕ್ಷ ರೂ. ಮೌಲ್ಯದ ಬಳಸಲಾದ ಕೈಗಡಿಯಾರವನ್ನು, ಇಸ್ಮಾಯಿಲ್ ಸಹೋದರ 48 ಲಕ್ಷ ರೂ. ನೀಡಿ 2017ರಲ್ಲಿ ಖರೀದಿಸಿದ್ದರು.
ಕೈಯಲ್ಲಿ ಕಟ್ಟಿಕೊಂಡು ಓಡಾಡಿದ್ದ ಆತ, ಕಳೆದ ತಿಂಗಳಷ್ಟೇ ದುಬೈಗೆ ಬಂದ ತನ್ನ ಸಹೋದರನಿಗೆ ನೀಡಿದ್ದರು. ದುಬಾರಿ ಬೆಲೆಯ ಕೈಗಡಿಯಾರದೊಂದಿಗೆ ಇಸ್ಮಾಯಿಲ್ ಭಾರತಕ್ಕೆ ವಾಪಸ್ಸಾಗಿದ್ದು, ಗಡಿಯಾರದ ಮೌಲ್ಯವರಿಯದ ಕಸ್ಟಮ್ಸ್ ಅಧಿಕಾರಿಗಳು ಅದನ್ನು ಒಡೆದು ಚಿನ್ನಕ್ಕಾಗಿ ತಲಾಶೆ ನಡೆಸಿದ್ದಾರೆ.
Custom officers of Kerala break 60 lakhs worth watch of a Bhatkal Man suspecting that the person was carrying God inside the Watch.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm