ಬ್ರೇಕಿಂಗ್ ನ್ಯೂಸ್
13-02-21 01:14 pm Headline Karnataka News Network ಕರ್ನಾಟಕ
ಹಾಸನ, ಫೆ.13: ಕಾರೊಂದು ನಿಲ್ಲಿಸಿದ್ದ ಕಂಟೈನರ್ ಗೆ ಢಿಕ್ಕಿ ಹೊಡೆದ ಪರಿಣಾಮ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ತೆರಳುತ್ತಿದ್ದ ಅಬಕಾರಿ ಅಧಿಕಾರಿ ಸೇರಿದಂತೆ ಕಾರಿನಲ್ಲಿದ್ದ ನಾಲ್ವರು ಯುವಕರು ಮೃತಪಟ್ಟ ಘಟನೆ ಇಂದು ಮುಂಜಾನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿರುವುದು ವರದಿಯಾಗಿದೆ.
ಮೃತರನ್ನು ಬೆಂಗಳೂರು ಮೂಲದ ಅಭಿಷೇಕ್, ಮಂಜುನಾಥ್, ವಿಕ್ರಂ ಹಾಗೂ ಚೇತನ್ ಎಂದು ಗುರುತಿಸಲಾಗಿದೆ. ಮೃತಪಟ್ಟವರೆಲ್ಲರೂ 25ರಿಂದ 30ರ ವಯಸ್ಸಿನೊಳಗಿನವರಾಗಿದ್ದಾರೆ.
ಮೃತರ ಪೈಕಿ ಚೇತನ್ ಅಬಕಾರಿ ಸಬ್ ಇನ್ ಸ್ಪೆಕ್ಟರ್ ಆಗಿ ಇತ್ತೀಚೆಗೆ ನೇಮಕಗೊಂಡಿದ್ದರು. ಅಭಿಷೇಕ್, ಮಂಜುನಾಥ್, ವಿಕ್ರಂ ಐಟಿ ಉದ್ಯೋಗಿಗಳಾಗಿದ್ದರು.
ಚೇತನ್ ಡ್ಯೂಟಿ ರಿಪೋರ್ಟ್ ಮಾಡಲೆಂದು ಉಳಿದ ಮೂವರು ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಇವರು ಸಂಚರಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ್ದ ಕಂಟೈನರ್ ಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದೆಯೆನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಚನ್ನರಾಯಪಟ್ಟಣ ಸರಕಾರಿ ಶವಾಗಾರದಲ್ಲಿರಿಸಲಾಗಿದೆ.
ಈ ಬಗ್ಗೆ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಹಿನ್ನೆಲೆ ಚನ್ನರಾಯಪಟ್ಟಣ ಸರಕಾರಿ ಶವಾಗಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಭೇಟಿ ನೀಡಿದರು.
Four youngsters died after the car in which they were travelling rammed into a stationary container at Channarayapatna in the district in the early hours on Saturday, February 13.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
15-07-26 10:44 pm
HK News Staffer
ಪ್ರಧಾನಿ ಮೋದಿ ನೇಮಿಸಿದ್ದ ಚೌಕಿದಾರರೇ ರಾಮನ ದೇಣಿಗೆ...
15-07-26 10:03 pm
ಬಾಂಗ್ಲಾನ್ನರು ಅನ್ನುವ ಶಂಕೆಯಿದ್ದರೆ ಪೊಲೀಸರಿಗೆ ತಿಳ...
15-07-26 09:03 pm
ಮಂಗಳೂರಿನಲ್ಲಿ ಯಾವ ಮಾಲ್ನಲ್ಲಿ ಎಷ್ಟೆಷ್ಟು ಬಾಂಗ್ಲಾದ...
15-07-26 05:32 pm
ಮುಸ್ಲಿಮೇತರ ಮಹಿಳೆಯನ್ನು ಮದುವೆಯಾಗುವುದು ಶರಿಯಾಕ್ಕೆ...
15-07-26 10:59 am
15-07-26 07:40 pm
HK News Staffer
ಉಡುಪಿ ; ಹೆದ್ದಾರಿ ಮಧ್ಯದಲ್ಲೇ ಟೇಬಲ್ ಹಾಕಿ ಟಿವಿ, ಮ...
15-07-26 07:02 pm
ಮುಕ್ಕ ಶ್ರೀನಿವಾಸ್ ಕಾಲೇಜು ಎಂಬಿಬಿಎಸ್ ವಿದ್ಯಾರ್ಥಿನ...
15-07-26 01:17 pm
Kasaragod car Accident: ಕಾಸರಗೋಡಿನಲ್ಲಿ ಡೆಡ್ಲಿ...
15-07-26 12:40 pm
ಟ್ರಾಫಿಕ್ ದಂಡ ಕಟ್ಟಲು ಎಪಿಕೆ ಫೈಲ್ ಡೌನ್ಲೋಡ್ ಮಾಡಲು...
14-07-26 09:13 pm