ಬ್ರೇಕಿಂಗ್ ನ್ಯೂಸ್
27-05-26 01:41 pm HK News Staffer ಕರ್ನಾಟಕ
ಬೆಂಗಳೂರು, ಮೇ 27: ಅಧಿಕಾರ ರಾಜಕಾರಣ ಅನ್ನುವುದೇ ಹಾಗೆ. ಎಲ್ಲಿ ಪವರ್ ಇರುತ್ತೋ ಅಲ್ಲಿಗೆ ಎಲ್ಲವೂ ಮುತ್ತಿಕೊಳ್ಳುತ್ತದೆ. ಇಡೀ ರಾಜ್ಯದಲ್ಲಿ ಮಾಸ್ ಲೀಡರ್ ಆಗಿ ಇನ್ಯಾರೂ ಅಷ್ಟರ ಮಟ್ಟಿಗಿನ ವರ್ಚಸ್ಸು ಹೊಂದಿಲ್ಲ ಅನ್ನುವ ಭಾವನೆ ಇದ್ದರೂ, ಅವರಿಗಿರುವಷ್ಟು ಶಾಸಕರ ಬೆಂಬಲ ಬೇರೆ ಯಾರಿಗೂ ಇಲ್ಲದಿದ್ದರೂ ಸಿದ್ದರಾಮಯ್ಯ ಜೊತೆಗಿದ್ದ ಪಟಾಲಂ ಸದ್ದಿಲ್ಲದೆ ಮಗ್ಗುಲು ಬದಲಿಸಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಗಾದಿಗೆ ಹತ್ತಿರವಾಗುತ್ತಿದ್ದಾರೆ ಎಂದು ತಿಳಿಯುತ್ತಲೇ ಹೆಚ್ಚಿನ ಶಾಸಕರು ಅವರದೇ ಕ್ಯಾಂಪು ಸೇರಿಕೊಂಡಿದ್ದಾರೆ.
ಸದ್ಯಕ್ಕೆ ತಿಳಿದ ಮಾಹಿತಿ ಪ್ರಕಾರ, ಸಿದ್ದರಾಮಯ್ಯ ಪರವಾಗಿ 30ರಷ್ಟು ಹಿರಿಯ ಶಾಸಕರು, ಸಚಿವರು ಮಾತ್ರ ಇದ್ದಾರೆ. ಡಿಕೆಶಿ ಪರವಾಗಿ ಶಾಸಕರ ಸಂಖ್ಯೆ 105ಕ್ಕೇರಿದೆಯಂತೆ. ಇದಕ್ಕೆ ಕಾರಣವಾಗಿರೋದು ಹೈಕಮಾಂಡ್ ಡಿಕೆಶಿ ಕಡೆಗೆ ತಿರುಗಿರುವುದು ಮತ್ತು ಮುಖ್ಯಮಂತ್ರಿ ಬದಲಾವಣೆ ಜೊತೆಗೆ ಹೆಚ್ಚಿನ ಹೊಸಬರಿಗೆ ಸಚಿವ ಸ್ಥಾನ ಕೊಡುವಂತೆ ಸೂಚನೆ ಕೊಟ್ಟಿರುವುದು. ಇದು ತಿಳಿಯುತ್ತಲೇ ಸಕ್ಕರೆ ಇರುವಲ್ಲಿಗೆ ಇರುವೆ ಹೋಗುವಂತೆ ಈವರೆಗೂ ಸಿದ್ದರಾಮಯ್ಯ ಜೊತೆಗಿದ್ದವರು ಸಚಿವ ಸ್ಥಾನದ ಆಸೆಯಲ್ಲಿ ಡಿಕೆ ಬಣ ಸೇರಿಕೊಂಡಿದ್ದಾರೆ.
ಸಂಪುಟದಲ್ಲಿ ಬಹುತೇಕ ಹೊಸಬರಿಗೆ ಅವಕಾಶ
ಡಿಕೆ ಶಿವಕುಮಾರ್ ಸಂಪುಟದಲ್ಲಿ ಹೆಚ್ಚಿನ ಹೊಸಬರಿಗೆ ಅವಕಾಶ ನೀಡುವಂತೆ ರಾಹುಲ್ ಗಾಂಧಿ ಸೂಚನೆ ಕೊಟ್ಟಿರುವುದು ದೊಡ್ಡ ಬೆಳವಣಿಗೆ. ಇದಲ್ಲದೆ, ಮೂರು ಅಥವಾ ನಾಲ್ಕು ಮಂದಿಗೆ ಡಿಸಿಎಂ ಸ್ಥಾನ ಕೊಡುವುದಕ್ಕೂ ಹೈಕಮಾಂಡ್ ನಾಯಕರು ಒಪ್ಪಿಗೆ ನೀಡಿದ್ದಾರೆ. ಇದೇ ಖರೆಯಾದ್ರೆ, ಲಿಂಗಾಯತ, ದಲಿತ ಮತ್ತು ಮೈನಾರಿಟಿ ಕೋಟಾದಲ್ಲಿ ಡಿಸಿಎಂ ಸ್ಥಾನ ಹಂಚಿಕೆಯಾಗಲಿದೆ.
ಯಾರಿಗೆಲ್ಲ ಸಿಗಬಹುದು ಡಿಸಿಎಂ
ಲಿಂಗಾಯತ ಕೋಟಾದಲ್ಲಿ ಹಾಲಿ ಇರುವ ಪ್ರಭಾವಿ ಸಚಿವರನ್ನೇ ಡಿಸಿಎಂ ಮಾಡಿದರೆ ಎಂ.ಬಿ ಪಾಟೀಲ್ ಆ ಸ್ಥಾನಕ್ಕೆ ಬರಬಹುದು. ದಲಿತ ಕೋಟಾದಲ್ಲಿ ಪರಮೇಶ್ವರ್ ಅಥವಾ ಮಹದೇವಪ್ಪಗೆ ಸ್ಥಾನ ಸಿಗಬಹುದು. ಅಲ್ಪಸಂಖ್ಯಾತ ಕೋಟಾದಲ್ಲಿ ಜಮೀರ್ ಅಹ್ಮದ್ ಖಾನ್ ಅಥವಾ ಯುಟಿ ಖಾದರ್ ಲಕ್ ಹೊಡೆಯಬಹುದು ಎನ್ನುವ ಲೆಕ್ಕಾಚಾರ ಇದೆ. ಇದೇ ವೇಳೆ, ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಡಿಸಿಎಂ ಸ್ಥಾನದ ಆಫರ್ ಇದೆಯೆಂದು ಕೇಳಿಬರುತ್ತಿದ್ದರೂ, ಸಚಿವನಾಗಿ ಅನುಭವ ಇಲ್ಲದ ಕಾರಣ ನಿರಾಕರಣೆ ಆಗಬಹುದು. ಆದರೆ ಕುರುಬರ ಕೋಟಾದಲ್ಲಿ ಯತೀಂದ್ರ ಸಚಿವನಾಗುವ ಸಾಧ್ಯತೆ ಹೆಚ್ಚಿದೆ.



ಹಿರಿಯ ಸಚಿವರಿಗೆ ಕೊಕ್ ನೀಡೋದು ಪಕ್ಕಾ ಆದರೆ, ಎಚ್.ಎಸ್ ಮಹದೇವಪ್ಪ, ಕೆ.ಎಚ್ ಮುನಿಯಪ್ಪ, ಆರ್.ಬಿ ತಿಮ್ಮಾಪುರ್, ಎಚ್.ಕೆ ಪಾಟೀಲ್, ಕೆಜೆ ಜಾರ್ಜ್, ಶಿವಾನಂದ ಪಾಟೀಲ್, ದಿನೇಶ್ ಗುಂಡೂರಾವ್, ಮಧು ಬಂಗಾರಪ್ಪ ಆದಿಯಾಗಿ ಹೆಚ್ಚಿನ ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ. ಇವರ ಬದಲಿಗೆ, ಆಯಾ ಭಾಗದಿಂದ ಬೇರೆ ಶಾಸಕರಿಗೆ ಸಚಿವ ಸ್ಥಾನ ದೊರೆಯಬಹುದು. ಹಿರಿಯ ದಲಿತ ನಾಯಕ ಮುನಿಯಪ್ಪ ಬದಲಿಗೆ ಅವರನ್ನು ಸಂತೈಸುವ ಸಲುವಾಗಿ ಪುತ್ರಿಗೆ ಸಚಿವ ಸ್ಥಾನ ಕೊಡಬಹುದು. ದಿನೇಶ್ ಗುಂಡೂರಾವ್ ಅವರನ್ನು ಸ್ಪೀಕರ್ ಸ್ಥಾನಕ್ಕೆ ಕೂರಿಸಿ, ಯುಟಿ ಖಾದರ್ ಅವರನ್ನು ಸಚಿವರನ್ನಾಗಿ ಮಾಡಬಹುದು.
ಇದರ ಜೊತೆಗೆ, ಅನುಭವಿಗಳಾಗಿ ಬಿಕೆ ಹರಿಪ್ರಸಾದ್ ಸಂಪುಟ ಸೇರುವ ಸಾಧ್ಯತೆಯೂ ಇದೆ. ಒಂದಷ್ಟು ಹೊಸಬರನ್ನು ಸಂಪುಟಕ್ಕೆ ಸೇರಿಸಿ ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜಾಗಿಸುವುದು ಹೈಕಮಾಂಡ್ ಲೆಕ್ಕಾಚಾರ. ಇದಲ್ಲದೆ, ಡಿಕೆಶಿ ಕೈಯಲ್ಲಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ವಾಲ್ಮೀಕಿ ಜನಾಂಗದ ಸತೀಶ್ ಜಾರಕಿಹೊಳಿಗೆ ಕೊಟ್ಟು ಪಕ್ಷ ಬಲಪಡಿಸಲು ಚಿಂತನೆ ಹಾಕಲಾಗಿದೆ. ಸಚಿವ ಸ್ಥಾನದ ಜೊತೆಗೆ ಪಕ್ಷದ ಸಾರಥ್ಯಕ್ಕೆ ಜಾರಕಿಹೊಳಿ ಒಪ್ಪಿದ್ದು, ಆಮೂಲಕ ಸಿದ್ದರಾಮಯ್ಯ ಬಣದ ಬೆಂಬಲಿಗರಾಗಿದ್ದ ಇವರನ್ನು ಡಿಕೆಶಿ ತಮ್ಮೊಂದಿಗೆ ಸೇರಿಕೊಳ್ಳುವಂತೆ ಮಾಡಿದ್ದಾರೆ.
ಈಗಾಗಲೇ ಸಂಪುಟ ಪುನಾರಚನೆಯಾದರೆ ಒಂದಷ್ಟು ಹಿರಿಯ ಸಚಿವರ ವಿಕೆಟ್ ಉರುಳುವ ಲೆಕ್ಕಾಚಾರ ಇತ್ತು. ಅಂಥವರ ಜೊತೆಗೆ ಕನಿಷ್ಠ 20 ಮಂದಿ ಹೊಸಬರಿಗೆ ಅವಕಾಶ ಕೊಟ್ಟರೂ ಪಕ್ಷದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಇದೇ ವೇಳೆ, ಸಿದ್ದರಾಮಯ್ಯ ಅವರನ್ನು ರಾಜ್ಯಸಭೆಗೆ ಕಳುಹಿಸಿ ಪ್ರಧಾನಿ ಮೋದಿ ವಿರುದ್ಧ ಮತ್ತೊಬ್ಬ ದಲಿತ ಮುಖಂಡನನ್ನು ರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವುದು ಕಾಂಗ್ರೆಸ್ ಪ್ಲಾನ್ ಇದೆ. ಕೇಂದ್ರದಲ್ಲಿ ಮೋದಿ- ಅಮಿತ್ ಷಾಗೆ ಇದಿರಾಡುವಂಥ ಗಟ್ಟಿ ತಲೆ ಕಾಂಗ್ರೆಸಿನಲ್ಲಿ ಇಲ್ಲ. ಸಿದ್ದರಾಮಯ್ಯ ಒಪ್ಪಿದರೆ ಆ ಜಾಗವನ್ನು ತುಂಬಬಲ್ಲರು ಅನ್ನೋದು ಪಕ್ಷದ ನಾಯಕರ ಲೆಕ್ಕಾಚಾರ. ಆದರೆ ಸಿದ್ದರಾಮಯ್ಯ ಇದ್ಯಾವುದಕ್ಕೂ ಹೂಂಗುಟ್ಟದೆ ಮುಂದಿನ ನಡೆಯನ್ನು ತಿಳಿಸುವುದಾಗಿ ಹೇಳಿ ದೆಹಲಿಯಿಂದ ನಡೆದು ಬಂದಿದ್ದಾರೆ.

ಕಾಂಗ್ರೆಸಿನ ‘ಚಾಣಾಕ್-ಷಾ’ ಡಿಕೆಶಿ
ಡಿಕೆ ಶಿವಕುಮಾರ್ ಕರ್ನಾಟಕದಲ್ಲಿ ಮಾತ್ರ ಅಲ್ಲ, ಕಾಂಗ್ರೆಸ್ ಪಾಲಿಗೆ ಟ್ರಬಲ್ ಶೂಟರ್ ಆಗಿ ಹಲವು ರಾಜ್ಯಗಳಲ್ಲಿ ತನ್ನ ವರ್ಚಸ್ಸು ತೋರಿಸಿದ್ದಾರೆ. ಹಣಬಲ, ತೋಳ್ಬಲದ ಮೂಲಕ ಪಕ್ಷದ ಕಷ್ಟದ ಸಮಯದಲ್ಲಿ ನೆರವಿಗೆ ಬಂದಿದ್ದಾರೆ. ತೆಲಂಗಾಣ, ಕೇರಳ, ರಾಜಸ್ಥಾನ, ಜಾರ್ಖಂಡಿನಲ್ಲಿ ತನ್ನ ಛಾಪು ಮೂಡಿಸಿದ್ದಾರೆ. ಹೀಗಾಗಿ ಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವ ಡಿಕೆ ಶಿವಕುಮಾರ್, ಒಂದ್ವೇಳೆ ಪಟ್ಟ ಸಿಗದ ನೋವಿನಲ್ಲಿ ಅಡ್ಡದಾರಿ ಹಿಡಿದರೆ ಪಕ್ಷಕ್ಕೆ ದೊಡ್ಡ ನಷ್ಟವಾಗುತ್ತದೆ. ಬಿಜೆಪಿಗೆ ಅಮಿತ್ ಷಾ ಯಾವ ರೀತಿಯ ಚಾಣಕ್ಯನೋ, ಕಾಂಗ್ರೆಸ್ ಪಾಲಿಗೆ ಅದೇ ಮಾದರಿಯ ಚಾಣಕ್-ಷಾ ಡಿಕೆಶಿ ಎನ್ನುವುದನ್ನು ದೆಹಲಿ ನಾಯಕರು ಮನಗಂಡಿದ್ದಾರೆ. ಇದೇ ಕಾರಣಕ್ಕೆ ಹೊಸ ಜನರೇಶನ್ನಿನ ಹೊಸ ನಾಯಕನೆಂದು ಬಿಂಬಿಸಲು ಡಿಕೆಶಿಗೆ ಪಟ್ಟ ಕಟ್ಟಲು ಹೈಕಮಾಂಡ್ ಮುಂದಾಗಿದ…
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 10:57 am
HK News Staffer
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm