ಬ್ರೇಕಿಂಗ್ ನ್ಯೂಸ್
04-05-26 04:14 pm HK News Staffer ಕರ್ನಾಟಕ
ಕಾಸರಗೋಡು, ಮೇ 4: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಕಾಸರಗೋಡು ವಿಧಾನಸಭೆ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಮುಸ್ಲಿಂ ಲೀಗಿನ ಮಾಹಿನ್ ಹಾಜಿ ಗೆಲವು ಸಾಧಿಸಿದ್ದಾರೆ.
ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಎನ್ ಡಿಎ ಮತ್ತು ಯುಡಿಎಫ್ ಮಧ್ಯೆ ತೀವ್ರ ಸ್ಪರ್ಧೆ ಕಂಡುಬಂದಿತ್ತು. ಬಿಜೆಪಿ ಅಭ್ಯರ್ಥಿ ಅಶ್ವಿನಿ ಎಂಎಲ್ 8ನೇ ಹಂತದ ಮತ ಎಣಿಕೆಯ ನಂತರ ಒಂದಷ್ಟು ಮತಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು. ಬಳಿಕ ಮುಸ್ಲಿಂ ಲೀಗ್ ಕಲ್ಲಟ್ರ ಮಾಹೀನ್ ಹಾಜಿ ಮುನ್ನಡೆ ಸಾಧಿಸಿ ಸ್ಪಷ್ಟ ಗೆಲುವಿನತ್ತ ಸಾಗಿದ್ದಾರೆ.
ಮುಸ್ಲಿಂ ಲೀಗ್ ಕಲ್ಲಟ್ರ ಮಾಹೀನ್ ಹಾಜಿ ಅವರು 76,396 ಮತಗಳನ್ನು ಪಡೆದರೆ, ನಿಕಟ ಪ್ರತಿಸ್ಪರ್ಧಿ ಎನ್ ಡಿಎ ಅಭ್ಯರ್ಥಿ ಅಶ್ವಿನಿ ಎಂಎಲ್ 53,698 ಮತಗಳನ್ನು ಪಡೆದಿದ್ದಾರೆ. ಯುಡಿಎಫ್ ಅಭ್ಯರ್ಥಿ ಮಾಹಿನ್ ಹಾಜಿ ಬರೋಬ್ಬರಿ 22,698 ಮತಗಳಿಂದ ಗೆಲವನ್ನು ಸಾಧಿಸಿದ್ದಾರೆ. ಸಿಪಿಎಂ ಅಭ್ಯರ್ಥಿಯಾಗಿದ್ದ ಶಾನವಾಸ್ ಪಾದೂರು(36,678) ಹೆಚ್ಚು ಮತಗಳನ್ನು ಪಡೆದರೆ ಬಿಜೆಪಿ ಗೆಲ್ಲಬಹುದೆಂಬ ನಿರೀಕ್ಷೆ ಇತ್ತು.
ಕೇರಳದಲ್ಲಿ ಬಿಜೆಪಿ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಕ್ಷೇತ್ರಗಳಲ್ಲಿ ಕಾಸರಗೋಡು ಕೂಡ ಒಂದು. ಅಶ್ವಿನಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಏಕೈಕ ಹಿಂದು ಮಹಿಳೆಯಾಗಿದ್ದು ಮಹಿಳೆಯರ ಮತದ ನಿರೀಕ್ಷೆಯಲ್ಲಿದ್ದರು. ಆದರೆ ಮಹಿಳೆಯರ ಮತಗಳನ್ನು ಪರಿವರ್ತಿಸಿಕೊಳ್ಳಲು ಸಾಧ್ಯವಾಗಿಲ್ಲ. ಮುಸ್ಲಿಂ ಮತಗಳ ಧ್ರುವೀಕರಣ ಆಗಿರುವುದು, ಸಿಪಿಎಂ ಅಭ್ಯರ್ಥಿ ಶಾನವಾಸ್ ನಿರೀಕ್ಷೆಯಷ್ಟು ಮತ ಪಡೆಯಲು ಸೋತಿದ್ದು ಲೀಗ್ ಅಭ್ಯರ್ಥಿ ಗೆಲುವನ್ನು ಸುಲಭವಾಗಿಸಿದೆ.
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 10:57 am
HK News Staffer
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm