ಬ್ರೇಕಿಂಗ್ ನ್ಯೂಸ್
24-02-26 03:51 pm HK News Staffer ಕರ್ನಾಟಕ
ಬೆಂಗಳೂರು, ಫೆ.23: ರಾಜ್ಯದ ಮಾರುಕಟ್ಟೆಗೆ ಬರುವ ಬಹುತೇಕ ತರಕಾರಿಗಳಲ್ಲಿ ಸೀಸ ಮತ್ತು ಇನ್ನಿತರ ಮಾರಕ ರಾಸಾಯನಿಕ ಪ್ರಮಾಣ ಹೇರಳವಾಗಿ ಕಂಡುಬಂದಿದ್ದು, ಆತಂಕ ಮೂಡಿಸಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯಾದ್ಯಂತ 70ಕ್ಕೂ ಹೆಚ್ಚು ತರಕಾರಿ ಸ್ಯಾಂಪಲ್ಗಳನ್ನು ತಂದು ಪರಿಶೀಲಿಸಿದಾಗ 19 ಮಾದರಿಗಳಲ್ಲಿ ಅತಿಯಾದ ಸೀಸದ ಪ್ರಮಾಣ ಇರುವುದು ಪತ್ತೆಯಾಗಿದೆ.
ಕೆಲವು ವರ್ಷಗಳ ಹಿಂದೆಯೂ ತರಕಾರಿಗಳಲ್ಲಿ ಭಾರಿ ಲೋಹಗಳ ಅಂಶ ಪತ್ತೆಯಾಗಿದೆ ಎಂದು ಅಧ್ಯಯನ ವರದಿ ಪ್ರಕಟವಾಗಿತ್ತು. 2023ರ ಅಕ್ಟೋಬರ್ 25ರಂದು ಇಎಂಪಿಇ ಸಂಸ್ಥೆ 400 ಮಾದರಿಗಳ ಪರಿಶೀಲನೆ ನಡೆಸಿ, ಸೀಸ ಸೇರಿದಂತೆ ಭಾರೀ ಲೋಹಗಳು ಮಣ್ಣಿನಲ್ಲೇ ಅಸ್ತಿತ್ವವಿದೆ ಎಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ, CPCBಗೆ ಸ್ಥಳ ಪರಿಶೀಲನೆ ನಡೆಸುವಂತೆ ಸೂಚಿಸಿತ್ತು. ಆದರೀಗ ಮತ್ತೊಮ್ಮೆ ಮಾಡಿದ ಅಧ್ಯಯನದಿಂದ ರಾಜ್ಯದ ವಿವಿಧ ಭಾಗದ ತರಕಾರಿಗಳಲ್ಲಿ ಸೀಸದ ಪ್ರಮಾಣ ಹೆಚ್ಚಿರುವುದು ಕಂಡುಬಂದಿದೆ.
ನೆಲಮಂಗಲ, ರಾಜಾಜಿನಗರ, ಕೋಲಾರ ಮಾರುಕಟ್ಟೆಗಳಿಂದ 53 ಮಾದರಿಗಳು ಹಾಗೂ ನೆಲಮಂಗಲ, ಕೋಲಾರ, ಚಿಕ್ಕಬಳ್ಳಾಪುರ ಕೃಷಿ ಕ್ಷೇತ್ರಗಳಿಂದ ಉಳಿದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದ್ದು, ಸೀಸ ಹಾಗೂ ಕೀಟನಾಶಕಗಳ ಅಂಶ ಪತ್ತೆಯಾಗಿದೆ. ತರಕಾರಿ ಮಾದರಿಗಳಲ್ಲಿ 19 ಮಾದರಿಗಳು ಮಾನದಂಡಕ್ಕಿಂತ ಹೆಚ್ಚು ಸೀಸದ ಅಂಶ ಹೊಂದಿರುವುದು ಪ್ರಯೋಗಾಲಯ ಪರೀಕ್ಷೆಯಲ್ಲಿ ಪತ್ತೆಯಾಗಿದೆ.
ಆರ್ಗ್ಯಾನಿಕ್ ಎಂದು ಮಾರಾಟವಾಗಿದ್ದ ಬದನೆಕಾಯಿಯಲ್ಲಿ 1.953 ಮಿ.ಗ್ರಾಂ/ಕೆಜಿ ಸೀಸ ಪತ್ತೆಯಾಗಿದ್ದು, ಇದು ನಿಗದಿತ 0.1 ಮಿ.ಗ್ರಾಂ ಮಿತಿಗಿಂತ 20 ಪಟ್ಟು ಹೆಚ್ಚಾಗಿದೆ. ತೊಂಡೆಕಾಯಿ, ಅವರೆಕಾಯಿ, ಸೊಪ್ಪು, ಕೋಸು ಸೇರಿದಂತೆ ಹಲವು ತರಕಾರಿಗಳಲ್ಲೂ ಮಿತಿಗಿಂತ ಹಲವು ಪಟ್ಟು ಅಧಿಕ ಸೀಸ ಕಂಡುಬಂದಿದೆ. ಸೌತೆಕಾಯಿ, ಹೀರೇಕಾಯಿ, ಕ್ಯಾಪ್ಸಿಕಂ, ಬೀಟ್ರೂಟ್, ಹಾಗಲಕಾಯಿ, ಶಲಗಂ, ಸ್ಕ್ವಾಶ್ ಮತ್ತು ಮೆಣಸಿನಕಾಯಿ ಮಾದರಿಗಳಲ್ಲೂ ಅತಿಯಾದ ರಾಸಾಯನಿಕ ಪತ್ತೆಯಾಗಿದೆ.
ಭಾರೀ ವಿಷಕಾರಿ ಕೀಟನಾಶಕವಾದ ಮೊನೋಕ್ರೋಟೊಫೋಸ್ ಕೂಡ ಪತ್ತೆಯಾಗಿದೆ. ದೇಶದಲ್ಲಿ 2023ರಲ್ಲಿ ಈ ಕೀಟನಾಶಕ ಬಳಕೆಯನ್ನು ನಿಷೇಧಿಸಿದ್ದರೂ ತರಕಾರಿಗಳಲ್ಲಿ ನಿಷೇಧಿತ ರಾಸಾಯನಿಕ ಪತ್ತೆಯಾಗಿದೆ. ಮೆಣಸಿನಕಾಯಿ ಮಾದರಿಗಳಲ್ಲಿ ನಿಗದಿತ 0.2 ಮಿ.ಗ್ರಾಂ/ಕೆಜಿ ಮಿತಿಗಿಂತ ಎರಡು ಪಟ್ಟು ಹೆಚ್ಚು ಮೊನೋಕ್ರೋಟೊಫೋಸ್ ಕಂಡುಬಂದಿದೆ.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
14-10-26 04:36 pm
HK News Staffer
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm