ಬ್ರೇಕಿಂಗ್ ನ್ಯೂಸ್
09-02-26 01:30 pm HK News Desk ಕರ್ನಾಟಕ
ಶಿವಮೊಗ್ಗ, ಫೆ.9 : ಕಮಿಷನ್ ಆಮಿಷವೊಡ್ಡಿ ಸಾರ್ವಜನಿಕರ ಬ್ಯಾಂಕ್ ಖಾತೆ ವಿವರಗಳನ್ನು ಸಂಗ್ರಹಿಸಿ ಸೈಬರ್ ವಂಚಕರಿಗೆ ಪೂರೈಸುತ್ತಿದ್ದ ಆರೋಪದಡಿ ಶಿವಮೊಗ್ಗದ ತುಂಗಾ ನಗರ ನಿವಾಸಿ, ಕಾರು ಚಾಲಕ ಕೆ. ಶರತ್ ಕುಮಾರ್ ಅಲಿಯಾಸ್ ಗುಂಡಾ ಎಂಬಾತನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಶರತ್ ಕುಮಾರ್ ತನ್ನ ಸ್ನೇಹಿತ, ಟೀ ಅಂಗಡಿ ನಡೆಸುತ್ತಿದ್ದ ಅಮಿತ್ ಎಂಬುವರ ಬ್ಯಾಂಕ್ ಖಾತೆ ವಿವರಗಳನ್ನು ಪಡೆದು, ಪಾಸ್ಬುಕ್, ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆಯನ್ನು ಸಹ ಪಡೆದಿದ್ದ. ಖಾತೆಗೆ ನಡೆಯುವ ಹಣದ ವಹಿವಾಟಿನ ಆಧಾರದಲ್ಲಿ ಪ್ರತಿ 15 ದಿನಕ್ಕೊಮ್ಮೆ ಕಮಿಷನ್ ನೀಡುವುದಾಗಿ ನಂಬಿಸಿ ಈ ವಿವರಗಳನ್ನು ಸಂಗ್ರಹಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ನಂತರ ಅಮಿತ್ ಅವರ ಬ್ಯಾಂಕ್ ಖಾತೆ ಫ್ರೀಜ್ ಆಗಿದೆ ಎಂದು ಶರತ್ ಕುಮಾರ್ ಹೇಳಿದ್ದಾನೆ. ಇದರಿಂದ ಅನುಮಾನಗೊಂಡ ಅಮಿತ್ ಇಂಡಿಯನ್ ಓವರ್ಸೀಸ್ ಬ್ಯಾಂಕ್ಗೆ ತೆರಳಿ ವಿಚಾರಿಸಿದಾಗ, ತಮ್ಮ ಖಾತೆಯ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ 51 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿರುವುದಾಗಿ ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ. ಇದರಿಂದ ಆತಂಕಗೊಂಡ ಅಮಿತ್ ಪೊಲೀಸರಿಗೆ ದೂರು ನೀಡಿದ್ದಾರೆ.
₹55 ಕೋಟಿ ವಂಚನೆ ಪ್ರಕರಣ
ಶಿವಮೊಗ್ಗ ಸಿಇಎನ್ ಠಾಣೆ ಡಿವೈಎಸ್ಪಿ ಕೃಷ್ಣಮೂರ್ತಿ ಹಾಗೂ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಶರತ್ ಕುಮಾರ್ನನ್ನು ಬಂಧಿಸಿ, ಆತನಿಂದ 18 ಪಾಸ್ಬುಕ್ಗಳು, 25 ಎಟಿಎಂ ಕಾರ್ಡ್ಗಳು, 7 ಚೆಕ್ ಬುಕ್ಗಳು, 2 ಮೊಬೈಲ್ ಫೋನ್ಗಳು ಹಾಗೂ 2 ಕ್ಯೂಆರ್ ಕೋಡ್ಗಳನ್ನು ವಶಕ್ಕೆ ಪಡೆದಿದ್ದಾರೆ. ಶರತ್ ಕುಮಾರ್ ಬಳಿಯಿದ್ದ 19 ಬಾಡಿಗೆ ಬ್ಯಾಂಕ್ ಖಾತೆಗಳ ವಿರುದ್ಧ ದೇಶಾದ್ಯಂತ 96ಕ್ಕೂ ಹೆಚ್ಚು ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಈ ಖಾತೆಗಳನ್ನು ಬಳಸಿ ಸಾರ್ವಜನಿಕರಿಗೆ ಸುಮಾರು ₹55.43 ಕೋಟಿ ಮೊತ್ತದ ವಂಚನೆ ಮಾಡಿರುವುದು ಹಾಗೂ 19 ಖಾತೆಗಳ ಮೂಲಕ ₹11.48 ಕೋಟಿ ಹಣ ವರ್ಗಾವಣೆಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
1 ಲಕ್ಷಕ್ಕೆ 3–5 ಸಾವಿರ ಕಮಿಷನ್
ಖಾತೆದಾರರಿಗೆ ಪ್ರತಿ ₹1 ಲಕ್ಷ ಹಣ ವರ್ಗಾವಣೆಗೆ ₹3,000 ರಿಂದ ₹5,000 ವರೆಗೆ ಕಮಿಷನ್ ನೀಡಲಾಗುತ್ತಿತ್ತು. ಕೆಲವರು ಇದನ್ನೇ ಲಾಭದಾಯಕ ವೃತ್ತಿಯನ್ನಾಗಿ ಮಾಡಿಕೊಂಡು, ವ್ಯವಸ್ಥಿತವಾಗಿ ಸೈಬರ್ ವಂಚನೆ ದಂಧೆಗೆ ಸಹಕರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
A car driver from Shivamogga has been arrested for allegedly supplying 19 rented bank accounts to cyber fraudsters, enabling scams worth ₹55 crore. Police seized multiple passbooks, ATM cards, cheque books, and mobile phones during the operation. Account holders were reportedly paid ₹3,000–₹5,000 commission for every ₹1 lakh transaction, with over 96 cybercrime cases linked to the accounts across India.
09-02-26 01:30 pm
HK News Desk
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರ...
09-02-26 12:29 pm
Gadag, No phone, Tv: ಎಸ್ಸೆಸ್ಸೆಲ್ಸಿ ಮಕ್ಕಳ ಭವಿಷ...
07-02-26 05:09 pm
ಸಿದ್ದರಾಮಯ್ಯರೇ ಐದು ವರ್ಷ ಸಿಎಂ ; ಪುತ್ರ ಯತೀಂದ್ರ ಪ...
07-02-26 02:58 pm
Sanjana Bus Fire Accident, Nelamangala: ಮತ್ತೊ...
06-02-26 12:30 pm
09-02-26 12:27 pm
HK News Desk
ಬಿಜೆಪಿಯಿಂದ ನಮಗೆ ಅಚ್ಛೇ ದಿನ್ ಬಂದಿಲ್ಲ, ಸ್ವಯಂಸೇವಕ...
08-02-26 10:18 pm
25 ವರ್ಷಗಳ ಬಳಿಕ ಮುಂಬೈ ಪಾಲಿಕೆ ಬಿಜೆಪಿ ತೆಕ್ಕೆಗೆ ;...
07-02-26 10:53 pm
ಕಣ್ಣೆದುರೇ ನಡೆದ ಅಚ್ಚರಿ ; 1 ಲಕ್ಷ ರೂ. ಮೌಲ್ಯದ ಚಿನ...
06-02-26 10:58 pm
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
09-02-26 02:50 pm
Mangalore Correspondent
ಸೌಜನ್ಯಾ ಕೊಲೆ ಪ್ರಕರಣ ; ದೋಷಪೂರಿತ ತನಿಖೆ ನಡೆಸಿದ ಅ...
08-02-26 11:17 pm
ಜಾಗತಿಕ ಪ್ರವಾಸಿ ತಾಣಗಳ ಅಭಿವೃದ್ಧಿ ; ಕೋಡಿ- ಕನ್ಯಾನ...
08-02-26 10:10 pm
ಬೈಂದೂರು ಕ್ಷೇತ್ರದ ಮಾಜಿ ಶಾಸಕ, ಜನತಾ ಪರಿವಾರದ ಹಿರಿ...
07-02-26 12:55 pm
DK Shivakumar, Puttur: ಪಕ್ಷ ಏನು ಹೇಳುತ್ತೋ ಅದೇ...
07-02-26 11:53 am
09-02-26 02:04 pm
HK News Desk
ಬೆಳ್ತಂಗಡಿ ; ಕಾಲೇಜು ತೆರಳುತ್ತಿದ್ದ ಅಪ್ರಾಪ್ತ ಯುವತ...
09-02-26 11:26 am
Mangalore Jail Raid: ಮಂಗಳೂರು ಜೈಲಿನಲ್ಲಿ ಬರ್ಕೆ...
08-02-26 02:07 pm
MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಪೊಲೀಸ್ ದಾ...
08-02-26 12:59 pm
Mangalore Robbery, Crime: ಕಳವಾರಿಗೆ ಮೆಹಂದಿ ಹೋಗ...
08-02-26 12:37 pm