ಬ್ರೇಕಿಂಗ್ ನ್ಯೂಸ್
03-02-26 11:53 am Bangalore Correspondent ಕರ್ನಾಟಕ
ಬೆಂಗಳೂರು, ಫೆ.3 : ಕಾನ್ಫಿಡೆಂಟ್ ಗ್ರೂಪ್ ಕಂಪನಿ ಮುಖ್ಯಸ್ಥ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ.ರಾಯ್ (57) ಆತ್ಮಹತ್ಯೆ ಪ್ರಕರಣ ಸಂಬಂಧಿಸಿ ವಿಶೇಷ ತನಿಖಾ ತಂಡದ(ಎಸ್‌ಐಟಿ) ಪೊಲೀಸರು ಮೂರು ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ರಾಯ್ ಅವರ ವೈಯಕ್ತಿಕ ಬದುಕು, ರಿಯಲ್ ಎಸ್ಟೇಟ್ ವ್ಯವಹಾರ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯ ಒತ್ತಡದ ವಿಚಾರದಲ್ಲಿ ತನಿಖೆ ಮುಂದುವರಿಸಿದ್ದು, ಹಲವು ಮಹತ್ವದ ಮಾಹಿತಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಯಾವ ಕಾರಣಕ್ಕೆ ಕಾನ್ಫಿಡೆಂಟ್ ಗ್ರೂಪ್ ಕಂಪನಿ ಕಚೇರಿ ಮೇಲೆ ದಾಳಿ ಮಾಡಿ ರಾಯ್ ಅವರ ವಿಚಾರಣೆ ನಡೆಸಿದ್ದರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ದಾಳಿ ಸಂಬಂಧ ಕೇರಳದ ಐಟಿ ಅಧಿಕಾರಿಗಳಾದ ಕೃಷ್ಣಪ್ರಸಾದ್ ಹಾಗೂ ನಿತಿನ್ ಎಂಬವರ ವಿಚಾರಣೆ ನಡೆಸಿದ್ದು ಮಾಹಿತಿ ಸಂಗ್ರಹಿಸಿದ್ದಾರೆ. ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ಪಶ್ಚಿಮ ವಲಯದ ಜಂಟಿ ಪೊಲೀಸ್ ಆಯುಕ್ತ ಸಿ.ವಂಶಿಕೃಷ್ಣ ನೇತೃತ್ವದಲ್ಲಿ ಎಸ್‌ಐಟಿ ರಚಿಸಿದ್ದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ.
ಕಾನ್ಫಿಡೆಂಟ್ ಗ್ರೂಪ್ ಕಂಪನಿಯ ಹಣಕಾಸು ವ್ಯವಹಾರ ಹಾಗೂ ಆದಾಯ ತೆರಿಗೆ ಪಾವತಿಗೆ ಸಂಬಂಧಿಸಿದ ದಾಖಲೆಗಳನ್ನು ಆಧರಿಸಿ ರಾಯ್ ಅವರ ಹೇಳಿಕೆ ದಾಖಲಿಸಿಕೊಳ್ಳಲು ಕಚೇರಿಗೆ ಹೋಗಿದ್ದಾಗಿ ಐಟಿ ಅಧಿಕಾರಿಗಳು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ. ಇದೇ ವೇಳೆ, ಕಾನ್ಫಿಡೆಂಟ್ ಗ್ರೂಪ್ ಕಚೇರಿಯ ರಾಯ್ ಕ್ಯಾಬಿನ್‌ನಲ್ಲಿ 2026ರ ಡೈರಿಯೊಂದು ಸಿಕ್ಕಿದ್ದು, ಅದನ್ನು ಜಪ್ತಿ ಮಾಡಲಾಗಿದೆ. ರಾಯ್, ಆ ಡೈರಿಯಲ್ಲಿ ಉದ್ಯಮಕ್ಕೆ ಸಂಬಂಧಿಸಿದ ಕೆಲವರ ಹೆಸರು ಬರೆದಿದ್ದಾರೆ. 2025ನೇ ಸಾಲಿನ ಡೈರಿ ಸಿಕ್ಕಿಲ್ಲ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ. ರಾಯ್ ಪುತ್ರ, ಪತ್ನಿ ಮತ್ತು ಸಹೋದರ ಸಿ.ಜೆ.ಬಾಬು ಅವರ ಪ್ರಾಥಮಿಕ ಹೇಳಿಕೆಯನ್ನು ದಾಖಲಿಸಲಾಗಿದೆ. ಜತೆಗೆ, ರಾಯ್ ಆಪ್ತರು ಹಾಗೂ ಕಾನ್ಫಿಡೆಂಟ್ ಗ್ರೂಪ್ ಕಚೇರಿ ಸಿಬ್ಬಂದಿಯ ವಿಚಾರಣೆಯನ್ನೂ ನಡೆಸಲಾಗುತ್ತಿದೆ.
ಸಾವಿನ ದಿನವೇ ಮನೋವೈದ್ಯರ ಭೇಟಿ
ಕೆಲವು ದಿನಗಳ ಐಟಿ ದಾಳಿಯಿಂದಾಗಿ ಸಿಜೆ ರಾಯ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಹೀಗಾಗಿ, ಅವರು ಮನೋವೈದ್ಯರನ್ನು ಭೇಟಿಯಾಗಿ ಒತ್ತಡ ನಿವಾರಣೆಗೆ ಸಲಹೆ ಪಡೆಯುತ್ತಿದ್ದರು. ಆತ್ಮಹತ್ಯೆ ಮಾಡಿಕೊಂಡ ಜ.30ರಂದು ಸಹ ಅವರು ಜಯನಗರದ ಎಂಟನೇ ಬ್ಲಾಕ್‌ನ ಆಸ್ಪತ್ರೆ ಒಂದಕ್ಕೆ ಹೋಗಿ ಮನೋವೈದ್ಯರನ್ನು ಭೇಟಿಯಾಗಿ ಕೌನ್ಸೆಲಿಂಗ್ ಪಡೆದಿದ್ದರು. ಈ ವೇಳೆ, ಮನೋವೈದ್ಯರ ಬಳಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. ಹಾಗಾಗಿ ವೈದ್ಯರನ್ನು ವಿಚಾರಣೆ ನಡೆಸಲು ಪೊಲೀಸ್ ತಂಡ ನಿರ್ಧರಿಸಿದೆ.
ಸೌಂಡ್ ಪ್ರೂಫ್ ಕ್ಯಾಬಿನ್ ಇತ್ತು
ಲ್ಯಾಂಗ್‌ಫೋರ್ಡ್ ರಸ್ತೆಯ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ರಾಯ್, ಜ.30ರಂದು ಮಧ್ಯಾಹ್ನ 3.15ರ ಸುಮಾರಿಗೆ ಪಿಸ್ತೂಲ್ ನಿಂದ ಎದೆಗೆ ಗುಂಡು ಹೊಡೆದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ನಡೆದು 20 ನಿಮಿಷ ಕಳೆದರೂ ಕಚೇರಿಯ ಸಿಬ್ಬಂದಿ ಹಾಗೂ ಆಗ ಅಲ್ಲೇ ಇದ್ದ ಐಟಿ ಅಧಿಕಾರಿಗಳಿಗೆ ಆತ್ಮಹತ್ಯೆ ವಿಚಾರ ಗಮನಕ್ಕೆ ಬಂದಿರಲಿಲ್ಲ. ರಾಯ್ ಅವರ ಕ್ಯಾಬಿನ್‌ಗೆ ಸೌಂಡ್ ಪೂಫ್ ವ್ಯವಸ್ಥೆ ಇತ್ತು. ಹೀಗಾಗಿ, ಪಿಸ್ತೂಲ್‌ನಿಂದ ಗುಂಡು ಹಾರಿದ ಶಬ್ದ ಹೊರಕ್ಕೆ ಕೇಳಿಸಿರಲಿಲ್ಲ. ಸ್ವಲ್ಪ ಸಮಯದ ನಂತರ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಟಿ.ಎ.ಜೋಸೆಫ್, ರಾಯ್ ಅವರ ಕ್ಯಾಬಿನ್ ಬಳಿ ಹೋಗಿ ಬಾಗಿಲು ತಟ್ಟಿದ್ದರು. ಆದರೆ, ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಬಾಗಿಲು ಒಡೆದು ನೋಡಿದಾಗ ಕುರ್ಚಿಯಲ್ಲಿ ಕುಳಿತ ಸ್ಥಿತಿಯಲ್ಲಿದ್ದ ರಾಯ್ ಅವರ ದೇಹದಿಂದ ರಕ್ತ ಸುರಿಯುತ್ತಿರುವುದು ಕಂಡುಬಂದಿತ್ತು ಎಂದು ಎಸ್‌ಐಟಿ ಮೂಲಗಳು ಹೇಳಿವೆ.
ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ವಾಪಸ್
ಕಾನ್ಸಿಡೆಂಟ್ ಕಂಪನಿ ಮುಖ್ಯಸ್ಥ ಸಿ.ಜೆ.ರಾಯ್ ತಮ್ಮ ಕಂಪನಿಯ ಶೋಧನೆ ಹಾಗೂ ಜಪ್ತಿಗೆ ಸಂಬಂಧಿಸಿ ಕೊಚ್ಚಿಯ ಆದಾಯ ತೆರಿಗೆ ಹೊರಡಿಸಿದ್ದ ಆದೇಶ ರದ್ದು ಕೋರಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿ ಎರಡೇ ದಿನದಲ್ಲಿ ಹಿಂಪಡೆದಿರುವ ವಿಚಾರ ಬೆಳಕಿಗೆ ಬಂದಿದೆ. ಕಾನ್ಫಿಡೆಂಟ್ ಪ್ರಾಜೆಕ್ಟ್ ಕಾನ್ಫಿಡೆಂಟ್ ಏರ್ಲೈನ್ಸ್, ಕಾನ್ಫಿಡೆಂಟ್ ರೆಸಾರ್ಟ್ಸ್, ಕಾನ್ಫಿಡೆಂಟ್ ಎಂಟರ್ ಟೈನ್ಮೆಂಟ್ ಸೇರಿ ಎಂಟು ಕಂಪನಿಗಳ ಶೋಧ ಮತ್ತು ಜಪ್ತಿಗೆ ಕೇರಳದ ಕೊಚ್ಚಿಯಲ್ಲಿರುವ ಆದಾಯ ತೆರಿಗೆ ಇಲಾಖೆಯ ಪ್ರಧಾನ ನಿರ್ದೇಶಕರು 2025ರ ನವೆಂಬರ್ 25ರಂದು ಆದೇಶ ಹೊರಡಿಸಿದ್ದರು. ಡಿ.3ರಂದು ಪಂಚನಾಮೆ ನಡೆಸಿದ್ದರು. ಆದರೆ ಈ ರೀತಿಯ ಆದೇಶ ಮತ್ತು ಪಂಚನಾಮೆ ಅಕ್ರಮವಾಗಿದ್ದು ರದ್ದುಪಡಿಸಬೇಕೆಂದು ಕೋರಿ ಡಿ.16ರಂದು ಹೈಕೊರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
The Special Investigation Team (SIT) is probing multiple angles in the alleged suicide of Confident Group Chairman C.J. Roy, including personal matters, business dealings, and the impact of recent Income Tax raids. Roy had reportedly met a psychiatrist on the day of his death. Investigators also found a 2026 diary in his soundproof office cabin, where he allegedly shot himself.
14-04-26 02:04 pm
HK News Staffer
ಸುಳ್ಯದಲ್ಲಿ ಪಾಳು ಬಾವಿಗೆ ಬಿದ್ದ ಕಾಡಾನೆ; ಅಡ್ಡಲಾಗಿ...
13-04-26 09:49 pm
ಕುಂದಾಪುರದ 111 ವರ್ಷಗಳ ಸರ್ಕಾರಿ ಶಾಲೆಗೆ ಬಂತು ಎಐ ರ...
13-04-26 08:19 pm
ದಾವಣಗೆರೆ ದಕ್ಷಿಣದಲ್ಲಿ ಪ್ರಚಾರದಿಂದ ದೂರ; ಸಿಎಂ ರಾಜ...
13-04-26 04:20 pm
ಪಿಗ್ಮಿ ಏಜೆಂಟರು ಮಧ್ಯವರ್ತಿಗಳಲ್ಲ, ಬ್ಯಾಂಕುಗಳ ನೌಕರ...
12-04-26 07:58 pm
14-04-26 10:48 pm
HK News Staffer
ಕ್ಯಾಥೋಲಿಕ್ ಪೋಪ್ ಲಿಯೋ ಒಬ್ಬ ದುರ್ಬಲ ವ್ಯಕ್ತಿ, ರಾಜ...
14-04-26 01:46 pm
ಟಿಸಿಎಸ್ ಕಂಪನಿಯಲ್ಲಿ ಹೈಫೈ ಜಿಹಾದ್; ಸೆಕ್ಸ್ ದಂಧೆ,...
13-04-26 10:35 pm
ಬಾಂಗ್ಲಾದಲ್ಲಿ ಮುಸ್ಲಿಂ ಯುವಕರಿಂದಲೇ ಇಬ್ಬರು ಧರ್ಮಗು...
13-04-26 09:07 pm
ಅಮೆರಿಕ- ಇರಾನ್ ಸಂಧಾನ ಯಶಸ್ವಿಯಾಗ್ತಿತ್ತು, ನೆತನ್ಯ...
13-04-26 01:27 pm
13-04-26 11:39 pm
Mangalore Correspondent
ಮದುವೆ ಸಮಾರಂಭಕ್ಕೆ ಬಂದಿದ್ದ ವಾಹನಗಳು ಹೆದ್ದಾರಿಯಲ್ಲ...
13-04-26 12:53 pm
Mangalore Live Accident Nantoor: ಓವರ್ ಸ್ಪೀಡ್...
12-04-26 09:05 pm
ಬಂಟ್ವಾಳ ; ಮದರಂಗಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ...
11-04-26 05:05 pm
Fr Melvin J Pinto Death: ಸೈಂಟ್ ಅಲೋಶಿಯಸ್ ಶಿಕ್ಷ...
10-04-26 10:12 pm
14-04-26 11:16 pm
HK News Desk
ಆರಿಫ್ ಕೊಲೆ ಪ್ರಕರಣ ; ಮತ್ತೆ ಮೂವರು ಆರೋಪಿಗಳ ಬಂಧನ,...
14-04-26 11:52 am
ನಂತೂರು ಭೀಕರ ಅಪಘಾತ ; ಬೈಕ್ ಸವಾರನ ಧಾವಂತಕ್ಕೆ ರಸ್ತ...
14-04-26 11:14 am
ಸುದೀಪ್ ರೈ ಆತ್ಮಹತ್ಯೆ ಪ್ರಕರಣ ; ಪತ್ನಿ ಸೌಮ್ಯಾ ಶೆಟ...
11-04-26 11:14 pm
ಕಾಲೇಜು ಗೆಳತಿಯ ಪ್ರೀತಿ ಹುಚ್ಚಾಟ ; ಮಜಾ ಉಡಾಯಿಸಿದ ಬ...
11-04-26 03:09 pm