ಬ್ರೇಕಿಂಗ್ ನ್ಯೂಸ್
19-01-26 03:33 pm HK News Desk ಕರ್ನಾಟಕ
ಗದಗ, ಜ.19 : ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಪುರಾತತ್ವ ಇಲಾಖೆ ಉತ್ಖನನ ನಡೆಸುತ್ತಿದ್ದು ಇದೇ ವೇಳೆ, ಸ್ಥಳಕ್ಕೆ ಆಗಮಿಸಿದ ಸ್ವಾಮೀಜಿಯೊಬ್ಬರು 'ಇಲ್ಲಿ ಸಾವಿರ ಕೆಜಿ ಚಿನ್ನದ ಶಿವಲಿಂಗವಿದೆ' ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಅವರ ವಂಶಸ್ಥನೆಂದು ಹೇಳಿಕೊಂಡು ಬಂದಿದ್ದ ಸ್ವಾಮೀಜಿ ಮಾತು ಜನರಲ್ಲಿ ಕುತೂಹಲ ಮೂಡಿಸಿದೆ.
ಉತ್ಖನನ ನಡೆಯುವ ಸ್ಥಳಕ್ಕೆ ಬಂದ ವ್ಯಕ್ತಿ ಒಂದೇ ಕಾಲಿನಲ್ಲಿ ವಿಚಿತ್ರವಾಗಿ ವರ್ತಿಸಲು ಶುರು ಮಾಡಿದ್ದಾರೆ. ಉತ್ಖನನ ಮಾಡುತ್ತಿರುವ ಜಾಗದಲ್ಲಿ ಏನೂ ಇಲ್ಲ, ಅದರ ಪಕ್ಕದಲ್ಲೇ ಸಾವಿರ ಕೆಜಿ ತೂಕದ ಚಿನ್ನದ ಶಿವಲಿಂಗ ಮತ್ತು ಕ್ವಿಂಟಲ್ ತೂಕದ ಚಿನ್ನದ ದೇವಿಯ ಮೂರ್ತಿ ಇದೆ' ಎಂದು ಹೇಳಿಕೆ ನೀಡಿದ್ದಾರೆ.
ಅಷ್ಟಕ್ಕೇ ನಿಲ್ಲದ ಈ ವ್ಯಕ್ತಿ, 'ಒಂದು ವೇಳೆ ಆ ಮೂರ್ತಿಯನ್ನು ಸ್ಥಳಾಂತರಿಸಿದರೆ ಜಗತ್ತಿನಲ್ಲಿ ಮಳೆಯೇ ಆಗುವುದಿಲ್ಲ' ಎಂದು ಭವಿಷ್ಯ ನುಡಿದಿದ್ದಾರೆ. ಆದರೆ, ಈ ವ್ಯಕ್ತಿ ಪಾನಮತ್ತನಾಗಿರುವುದು ಕಂಡಿದ್ದು ಗ್ರಾಮಸ್ಥರು ಬಳಿಕ ತೀವ್ರ ತರಾಟೆಗೆ ತೆಗೆದುಕೊಂಡು ಸ್ವಾಮಿಯನ್ನು ಓಡಿಸಿದ್ದಾರೆ.
ಶಿಲಾಯುಗದ ಆಯುಧ ಪತ್ತೆ
ಸೋಮವಾರ 4ನೇ ದಿನದ ಉತ್ಖನನ ಕಾರ್ಯ ನಡೆದಿದ್ದು, ಲಕ್ಕುಂಡಿಯ ಬಗ್ಗೆ ನಾನಾ ರೀತಿಯ ವಿಸ್ಮಯದ ಮಾತುಗಳು ಕೇಳಿಬರುತ್ತಿವೆ. ಈವರೆಗಿನ ಕಾರ್ಯಾಚರಣೆಯಲ್ಲಿ ಶಿಲಾಯುಗದ ಕಾಲದಲ್ಲಿ ಬಳಕೆಯಾಗುತ್ತಿದ್ದ ಕಲ್ಲಿನ ಆಯುಧವೊಂದು ಪತ್ತೆಯಾಗಿದೆ. ಈ ವಸ್ತು ಅಂಡಾಕಾರದಲ್ಲಿದ್ದು, ಒಂದು ಭಾಗವು ಮೊನಚಾಗಿದೆ. ಇದು ಅಂದಿನ ಕಾಲದ ಮಾನವರು ಬೇಟೆ ಅಥವಾ ದೈನಂದಿನ ಕೆಲಸಕ್ಕೆ ಬಳಸುತ್ತಿದ್ದ ಆಯುಧವಿರಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ ಗಂಟೆಯೊಂದು ಲಭ್ಯವಾಗಿದೆ. ಭಾನುವಾರ ಚಿಕ್ಕದೊಂದು ಶಿವಲಿಂಗ, ಶಿವನ ವಿಗ್ರಹದ ಕಳಶದ ಶಿಲಾ ಭಾಗವೊಂದು ಫತ್ತೆಯಾಗಿತ್ತು. ಇಡೀ ಗ್ರಾಮದಲ್ಲಿ ಎರಡು ತಿಂಗಳ ಕಾಲ ಉತ್ಖನನ ನಡೆಸಲು ಪ್ರಾಚ್ಯವಸ್ತು ಇಲಾಖೆ ಮುಂದಾಗಿದ್ದು ಜನರ ಕುತೂಹಲ ಇಮ್ಮಡಿಯಾಗಿದೆ.
ಎರಡು ವಾರಗಳ ಹಿಂದೆ ಲಕ್ಕುಂಡಿ ಗ್ರಾಮದಲ್ಲಿ ಮನೆಯನ್ನು ನಿರ್ಮಿಸಲು ಭೂಮಿ ಅಗೆಯುವಾಗ ಬಂಗಾರದ ನಿಧಿ ಪತ್ತೆಯಾಗಿತ್ತು. ಈ ನಿಧಿಯನ್ನು ಕುಟುಂಬಸ್ಥರು ಸರ್ಕಾರಕ್ಕೆ ಒಪ್ಪಿಸಿದ್ದರು. ಚಿನ್ನದ ನಿಧಿಯ ಮೌಲ್ಯ 65 ಲಕ್ಷ ರೂ. ಎಂದು ತಿಳಿಸಲಾಗಿತ್ತು. ಇದರಲ್ಲಿ ಶೇ.20ರಷ್ಟು ಹಣವನ್ನು ಅಂದರೆ 13 ಲಕ್ಷ ರೂ. ನಷ್ಟು ಹಣವನ್ನು ಆ ಕುಟುಂಬಕ್ಕೆ ನೀಡಲಾಗಿತ್ತು.
A self-styled swami created a stir at the ongoing Archaeological Department excavation in Lakkundi, Gadag district, claiming the presence of a 1,000-kg gold Shivling and a gold goddess idol nearby. Villagers later chased him away after noticing erratic behavior. Meanwhile, archaeologists have uncovered Stone Age tools and artifacts, adding to the growing curiosity around the historic site, especially after a gold treasure was found in the village weeks earlier.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
14-10-26 08:40 pm
HK News Desk
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm