ಬ್ರೇಕಿಂಗ್ ನ್ಯೂಸ್
28-10-25 10:03 pm Bangalore Correspondent ಕರ್ನಾಟಕ
ಬೆಂಗಳೂರು, ಅ.28 : ರಾಜ್ಯ ಪೊಲೀಸ್ ಸಿಬ್ಬಂದಿಗೆ ದೇವರಾಜ ಅರಸು ಕಾಲದಲ್ಲಿ ನೀಡಲಾಗಿದ್ದ ಸ್ಲೋಚ್ ಮಾದರಿ ಕ್ಯಾಪ್ ಗಳನ್ನು ಬದಲಿಸಲಾಗಿದ್ದು ತೆಲಂಗಾಣ ಮಾದರಿಯಲ್ಲಿ ಬ್ಲೂ ಕ್ಯಾಪ್ ಗಳನ್ನು ವಿತರಣೆ ನೀಡಲಾಗಿದೆ. ವಿಧಾನಸೌಧ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಹೊಸ ಕ್ಯಾಪ್ಗಳ ವಿತರಣೆ ಮಾಡಿದರು.
ಕಳೆದ ಜೂನ್ ತಿಂಗಳಲ್ಲಿ ಪೊಲೀಸ್ ಅಧಿಕಾರಿಗಳ ಸಮಾವೇಶ ನಡೆದಿತ್ತು. ಸಮಾವೇಶದಲ್ಲಿ ಹೊಸ ಕ್ಯಾಪ್ ವಿತರಣೆಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಬಳಿಕ ಹಲವು ರಾಜ್ಯಗಳಲ್ಲಿ ಪೊಲೀಸ್ ಸಿಬ್ಬಂದಿಗೆ ಇರುವ ಕ್ಯಾಪ್ ಪರಿಶೀಲನೆ ನಡೆಸಲಾಗಿತ್ತು. ಕೊನೆಗೆ ತೆಲಂಗಾಣ ಪೊಲೀಸರು ಧರಿಸುತ್ತಿರುವ ತೆಳುವಾದ ಬ್ಲೂ ಪೀಕ್ ಕ್ಯಾಪ್ ಅನ್ನು ಆಯ್ಕೆ ಮಾಡಿದ್ದು ಇದೀಗ ವಿತರಣೆ ಮಾಡಲಾಗಿದೆ.






ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್, ಇವತ್ತು ಪೊಲೀಸ್ ಇಲಾಖೆಯಲ್ಲಿ ಹೊಸ ಹೆಜ್ಜೆ ಇಡುತ್ತಿದ್ದೇವೆ. ಬ್ರಿಟಿಷರ ಕಾಲದಲ್ಲಿ ಪೊಲೀಸರಿಗೆ ನೀಡುತ್ತಿದ್ದ ಸಮವಸ್ತ್ರ ಮತ್ತು ಕ್ಯಾಪ್ ಗಳನ್ನು ಬದಲಾವಣೆ ಮಾಡಲಾಗಿದೆ. ಬ್ರಿಟಿಷ್ ಕಾಲದಲ್ಲಿ ಸ್ಲೋಪ್ ಟೋಪಿಗಳನ್ನು ಪೊಲೀಸ್ ಸಿಬ್ಬಂದಿ ಹಾಕುತ್ತಿದ್ದರು. ದೇವರಾಜ್ ಅರಸು ಸಿಎಂ ಆಗಿದ್ದಾಗ ನಮ್ಮ ಪೊಲೀಸ್ ಸಿಬ್ಬಂದಿಗೆ ಖಾಕಿ ಕ್ಯಾಪ್ ಹಾಕಿಸಿದ್ದರು. ಅಲ್ಲಿಂದ ಇಲ್ಲಿವರೆಗೆ ಅದನ್ನು ಹಾಕಿಕೊಳ್ಳುತ್ತಾ ಬಂದಿದ್ದಾರೆ. ಹಲವಾರು ಸಂದರ್ಭದಲ್ಲಿ ಇದನ್ನು ಬದಲಾಯಿಸಲು ಇಲಾಖೆಯಿಂದ ಬೇಡಿಕೆ ಬಂದಿತ್ತು.
ಮಳೆಯಲ್ಲಿ ನೆನೆದರೆ ಖಾಕಿ ಕ್ಯಾಪ್ ಹೆಚ್ಚು ತೂಗುವುದರ ಜೊತೆಗೆ ಧರಿಸಲು ಕಷ್ಟ ಆಗುತ್ತದೆ. ನೋಡೋದಕ್ಕೂ ಚೆನ್ನಾಗಿಲ್ಲ ಎಂಬ ಒತ್ತಾಯವಿತ್ತು. ಹಿಂದೆ ಗೃಹ ಸಚಿವನಾಗಿದ್ದಾಗ ಕ್ಯಾಪ್ ಬದಲಾವಣೆ ಮಾಡುವ ಚಿಂತನೆ ಮಾಡಲಾಗಿತ್ತು. ಕೆಲವು ಕಾರಣಗಳಿಂದ ಬದಲಾವಣೆ ಮಾಡೋಕೆ ಆಗಿರಲಿಲ್ಲ. ಈಗ ಸಿಎಂ ಅವರೇ ಬ್ಲೂ ಕ್ಯಾಪ್ ಆಯ್ಕೆ ಮಾಡಿದ್ದು ಇಡೀ ರಾಜ್ಯದಲ್ಲಿ ವಿತರಣೆಗೆ ಅನುಮತಿ ನೀಡಿದ್ದಾರೆ ಎಂದರು.
The slouch-style caps introduced during the tenure of Devaraj Urs have now been replaced, and new blue caps, modeled after those worn by Telangana police, have been distributed to Karnataka police personnel.
13-01-26 10:13 pm
HK News Desk
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
13-01-26 10:30 pm
Mangalore Correspondent
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm