ಬ್ರೇಕಿಂಗ್ ನ್ಯೂಸ್
22-10-25 08:12 pm HK News Desk ಕರ್ನಾಟಕ
ಬೆಳಗಾವಿ, ಅ.22 : ರಾಜ್ಯ ಸರ್ಕಾರದ ಹಿರಿಯ ಸಚಿವ ಸತೀಶ್ ಜಾರಕಿಹೊಳಿಯವರೇ ಮುಂದಿನ ಸಿಎಂ ಆಗುತ್ತಾರೆಯೇ? ಈ ರೀತಿಯ ಅನುಮಾನದ ಪ್ರಶ್ನೆ ಮೂಡಲು ಕಾರಣವಾಗಿದ್ದು ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ನೀಡಿರುವ ಹೇಳಿಕೆ.
‘ನಮ್ಮ ತಂದೆಯವರು ತಮ್ಮ ರಾಜಕೀಯ ಕೊನೆಗಾಲದಲ್ಲಿದ್ದಾರೆ. ವೈಚಾರಿಕವಾಗಿ ಪ್ರಗತಿಪರ ತತ್ವ ಸಿದ್ಧಾಂತದ ನಾಯಕರು ಸಿಎಂ ಸ್ಥಾನಕ್ಕೆ ಬರಬೇಕಾಗಿದೆ. ಸತೀಶ ಜಾರಕಿಹೊಳಿಯವರು ಈ ಜವಾಬ್ದಾರಿ ನಿಭಾಯಿಸ್ತಾರೆ ಎಂಬ ವಿಶ್ವಾಸ ಇದೆ. ಜಾರಕಿಹೊಳಿ ಅವರು ಮಾದರಿಯಾಗಿ ನಮ್ಮನ್ನು ಮುನ್ನಡೆಸುತ್ತಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಅವರು ರಾಯಬಾಗ ತಾಲೂಕಿನ ಕಪ್ಪಲಗುದ್ದಿಯಲ್ಲಿ ಹೇಳಿದ್ದು ರಾಜಕೀಯ ವಲಯದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ. ರಾಯಬಾಗದಲ್ಲಿ ಸಂತ ಕನಕದಾಸರ ಮೂರ್ತಿ ಲೋಕಾರ್ಪಣೆ ವೇಳೆ ಯತೀಂದ್ರ ಈ ಹೇಳಿಕೆ ನೀಡಿದ್ದಾರೆ.
ನವೆಂಬರ್ ಕ್ರಾಂತಿ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಜೋರಾಗಿರುವಾಗಲೇ, ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಹೇಳುತ್ತಲೇ ಬಂದಿದ್ದ ಪುತ್ರ ಯತೀಂದ್ರ ದಿಢೀರ್ ಆಗಿ ಮಾತು ಬದಲಿಸಿದ್ದಾರೆ. ನವೆಂಬರ್ ಕ್ರಾಂತಿ ಬಗ್ಗೆ ಮುನ್ಸೂಚನೆ ನೀಡುವ ರೀತಿ ಮಾತನಾಡಿದ್ದು ಸಿದ್ದರಾಮಯ್ಯ ಅವರಿಗೆ ವಯಸ್ಸಾಗಿದೆ, ವೈಚಾರಿಕ ನಿಲುವಿನ ಮತ್ತೊಬ್ಬ ನಾಯಕನ ಅಗತ್ಯವಿದೆ, ಆ ಜಾಗಕ್ಕೆ ಸತೀಶ್ ಜಾರಕಿಹೊಳಿ ಸೂಕ್ತ ವ್ಯಕ್ತಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಜಾರಕಿಹೊಳಿ ಮುಂದಿನ ಸಿಎಂ ಸ್ಥಾನಕ್ಕೆ ಅರ್ಹತೆ ಹೊಂದಿದ್ದಾರೆ ಎಂದು ವಾದ ಮುಂದಿಟ್ಟಿದ್ದಾರೆ.
ಮೊನ್ನೆಯಷ್ಟೇ ಬೆಳಗಾವಿ ಡಿಸಿಸಿ ಬ್ಯಾಂಕ್ ಚುಕ್ಕಾಣಿಯನ್ನು ಭಾರೀ ಪೈಪೋಟಿ ಇದ್ದರೂ ಸತೀಶ್ ಜಾರಕಿಹೊಳಿ ಬಣ ಬಗಲಿಗೆ ಹಾಕಿಕೊಂಡಿತ್ತು. ಡಿಸಿಸಿ ಚುನಾವಣೆ ವಿಷಯದಲ್ಲಿ ಜಾರಕಿಹೊಳಿ ಕುಟುಂಬವೂ ಒಂದಾಗಿತ್ತು. ಇದೀಗ ಸಿಎಂ ಸ್ಥಾನಕ್ಕು ಜಾರಕಿಹೊಳಿ ಕುಟುಂಬವೇ ಟವೆಲ್ ಹಾಕುತ್ತಾ ಎನ್ನುವ ಅನುಮಾನ ಮೂಡಿದೆ. ಡಿಕೆಶಿ ಸಿಎಂ ಆಗುತ್ತಾರೆಂದು ಅವರ ಪರವಾಗಿರುವ ಶಾಸಕರು ಹೇಳುತ್ತ ಬಂದರೂ ಹಿರಿಯ ಸಚಿವರು ವಿರೋಧ ನಿಲುವು ಹೊಂದಿದ್ದಾರೆ. ಇದರ ನಡುವಲ್ಲೇ ಜಾರಕಿಹೊಳಿ ಸಿಎಂ ಸ್ಥಾನಕ್ಕೆ ಅರ್ಹ ವ್ಯಕ್ತಿಯೆಂದು ಸಿಎಂ ಸಿದ್ದರಾಮಯ್ಯ ಅವರ ಪುತ್ರನೇ ಬ್ಯಾಟಿಂಗ್ ಮಾಡಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
In a statement that has sparked major political speculation, Karnataka CM Siddaramaiah’s son, Yathindra Siddaramaiah, has said that senior minister Satish Jarkiholi is a suitable and deserving candidate for the Chief Minister’s post.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
15-07-26 10:44 pm
HK News Staffer
ಪ್ರಧಾನಿ ಮೋದಿ ನೇಮಿಸಿದ್ದ ಚೌಕಿದಾರರೇ ರಾಮನ ದೇಣಿಗೆ...
15-07-26 10:03 pm
ಬಾಂಗ್ಲಾನ್ನರು ಅನ್ನುವ ಶಂಕೆಯಿದ್ದರೆ ಪೊಲೀಸರಿಗೆ ತಿಳ...
15-07-26 09:03 pm
ಮಂಗಳೂರಿನಲ್ಲಿ ಯಾವ ಮಾಲ್ನಲ್ಲಿ ಎಷ್ಟೆಷ್ಟು ಬಾಂಗ್ಲಾದ...
15-07-26 05:32 pm
ಮುಸ್ಲಿಮೇತರ ಮಹಿಳೆಯನ್ನು ಮದುವೆಯಾಗುವುದು ಶರಿಯಾಕ್ಕೆ...
15-07-26 10:59 am
15-07-26 07:40 pm
HK News Staffer
ಉಡುಪಿ ; ಹೆದ್ದಾರಿ ಮಧ್ಯದಲ್ಲೇ ಟೇಬಲ್ ಹಾಕಿ ಟಿವಿ, ಮ...
15-07-26 07:02 pm
ಮುಕ್ಕ ಶ್ರೀನಿವಾಸ್ ಕಾಲೇಜು ಎಂಬಿಬಿಎಸ್ ವಿದ್ಯಾರ್ಥಿನ...
15-07-26 01:17 pm
Kasaragod car Accident: ಕಾಸರಗೋಡಿನಲ್ಲಿ ಡೆಡ್ಲಿ...
15-07-26 12:40 pm
ಟ್ರಾಫಿಕ್ ದಂಡ ಕಟ್ಟಲು ಎಪಿಕೆ ಫೈಲ್ ಡೌನ್ಲೋಡ್ ಮಾಡಲು...
14-07-26 09:13 pm