ಬ್ರೇಕಿಂಗ್ ನ್ಯೂಸ್
20-10-25 02:56 pm HK News Desk ಕರ್ನಾಟಕ
ಕಲಬುರಗಿ, ಅ 20 : ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹಲವು ಗ್ರಾಮಗಳಲ್ಲಿ ಸೋಮವಾರ ಬೆಳಿಗ್ಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಆತಂಕದಿಂದ ಮನೆಯಿಂದ ಹೊರಗೋಡಿ ಬಂದ ಘಟನೆ ನಡೆದಿದೆ.
ಬೆಳಿಗ್ಗೆ ಸುಮಾರು 8:15ರ ಸುಮಾರಿಗೆ ತಾಲೂಕಿನ ಗಡಿಕೇಶ್ವರ, ಕುಪನೂರ, ಹುಡಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುಮಾರು 3 ರಿಂದ 4 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಭೂಮಿಯ ಒಳಗಿನಿಂದ ಭಾರಿ ಸದ್ದು ಕೇಳಿಬಂದಿದ್ದು, ಮನೆಯಲ್ಲಿದ್ದ ಪಾತ್ರೆ ಪಗಡೆಗಳು ಅಲುಗಾಡಿವೆ. ಇದರಿಂದ ಗಾಬರಿಗೊಂಡ ಗ್ರಾಮಸ್ಥರು, ಮಕ್ಕಳು ಮತ್ತು ವೃದ್ಧರೊಂದಿಗೆ ಮನೆಯಿಂದ ಹೊರಗೆ ಬಂದು ಸುರಕ್ಷಿತ ಸ್ಥಳಗಳಿಗೆ ಓಡಿ ಹೋಗಿ ಆಶ್ರಯ ಪಡೆದರು ಎನ್ನಲಾಗಿದೆ.
2.5 ತೀವ್ರತೆ ದಾಖಲು
ಚಿಂಚೋಳಿ ತಾಲೂಕಿನಲ್ಲಿ ಭೂಕಂಪಿಸಿದ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ದೃಢಪಡಿಸಿದೆ. ಇದು ರಿಕ್ಟರ್ ಮಾಪಕದಲ್ಲಿ 2.5 ತೀವ್ರತೆಯಲ್ಲಿ ದಾಖಲಾಗಿದೆ ಎಂದು ತಿಳಿಸಿದೆ. ಭೂಕಂಪದ ಕೇಂದ್ರಬಿಂದು ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದ ಬಳಿ ಪತ್ತೆಯಾಗಿದೆ.
ಪದೇ ಪದೆ ಭೂಕಂಪನ ಭೀತಿಯಲ್ಲಿ ಜನರು:
ಈ ಭಾಗದಲ್ಲಿ ಕಳೆದ ಕೆಲವು ವರ್ಷಗಳಿಂದ ಆಗಾಗ ಲಘು ಭೂಕಂಪನಗಳು ಸಂಭವಿಸುತ್ತಲೇ ಇದೆ. ಸೆಪ್ಟೆಂಬರ್ನಲ್ಲಿ ಭೂಕಂಪನದ ಅನುಭವವಾಗಿತ್ತು. ಇಂತಹ ಘಟನೆಗಳು ಪದೇ ಪದೇ ಸಂಭವಿಸುತ್ತಿರುವ ಹಿನ್ನೆಲೆ, ಇದು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಅದೃಷ್ಟವಶಾತ್, ಇಂದಿನ ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.
ಸೆಪ್ಟೆಂಬರ್ನಲ್ಲಿ ಭೂ ಕಂಪನ
ಸೆಪ್ಟೆಂಂಬರ್ನಲ್ಲಿ ಕಲಬುರಗಿಯಲ್ಲಿ ಲಘು ಭೂಕಂಪನದಿಂದ ಜನರ ನೆಮ್ಮದಿ ಕಸಿದಿತ್ತು. ಆಳಂದ ತಾಲೂಕಿನ ಚಿಂಚನಸೂರು ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಸೆಪ್ಟೆಂಬರ್ 11 ಗುರುವಾರ ಬೆಳಗ್ಗೆ ಲಘು ಭೂಕಂಪವಾಗಿದ್ದು, ರಿಕ್ಟರ್ ಮಾಪಕದಲ್ಲಿ 2.3ರಷ್ಟು ತೀವ್ರತೆ ದಾಖಲಾಗಿತ್ತು. ಬೆಳಗ್ಗೆ 8.18ರ ವೇಳೆ ಭೂಮಿ ಸಣ್ಣಗೆ ಕಂಪಿಸಿತ್ತು. ಚಿಂಚನಸೂರ , ಜವಳಗಾ(ಬಿ), ಲಾಡಮುಗಳಿ, ಹೊಡಲ್, ಲಿಂಗಯನವಾಡಿ, ಕೆರೆ ಅಂಬಲಗಾ , ಶ್ರೀಚಂದ ಗ್ರಾಮಗಳಲ್ಲಿ ಭೂಮಿ ನಡುಗಿದ ಅನುಭವವಾಗಿದ್ದರಿಂದ ಜನರು ಹೆದರಿ ಮನೆಯಿಂದ ಹೊರಕ್ಕೆ ಬಂದಿದ್ದರು.
On Monday morning, mild tremors were felt in several villages of Chincholi taluk in Kalaburagi district, causing panic among residents who rushed out of their homes. The quake, recorded at 2.5 magnitude on the Richter scale, lasted for about 3–4 seconds around 8:15 AM.
28-02-26 11:49 am
HK News Desk
ರಾಜ್ಯದಲ್ಲಿ ಆಸ್ತಿ ಖರೀದಿದಾರರಿಗೆ ಮತ್ತೊಂದು ಶಾಕ್ !...
27-02-26 10:17 pm
ಧಾರವಾಡ ಪ್ರತಿಭಟನೆ ಎಫೆಕ್ಟ್ ; ರಾಜ್ಯದಲ್ಲಿ 60 ಸಾವಿ...
26-02-26 10:01 pm
ತಂದೆ ಆಟೋ ಚಾಲಕ, ತಾಯಿ ಹೂವಿನ ವ್ಯಾಪಾರಿ, ಮಗಳು ನ್ಯಾ...
26-02-26 12:58 pm
Moral Policing, Mangalore: ಮೋರಲ್ ಪೊಲೀಸ್ ; ರೈಲ...
26-02-26 10:26 am
28-02-26 07:17 pm
HK News Staffer
ಇರಾನ್ ಮೇಲೆ ಮುಗಿಬಿದ್ದ ಅಮೆರಿಕ-ಇಸ್ರೇಲ್ ಪಡೆಗಳು ;...
28-02-26 05:28 pm
ತ್ರಿಷಾ ಬಿರುಗಾಳಿ ; ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್...
28-02-26 01:08 pm
ದೆಹಲಿ ಅಬಕಾರಿ ನೀತಿ ಹಗರಣ ; ಕೇಜ್ರಿವಾಲ್, ಸಿಸೋಡಿಯಾ...
27-02-26 03:55 pm
ಲಂಚ ಆರೋಪದಲ್ಲಿ ಸಿಕ್ಕಿಬಿದ್ದ ಗಣಿ ಉಪ ನಿರ್ದೇಶಕರ ಮನ...
27-02-26 06:14 am
28-02-26 08:53 pm
HK News Desk
Mangaluru Muscat Flight: ಮಂಗಳೂರು- ಮಸ್ಕತ್ ನಡುವ...
27-02-26 08:59 pm
Mangalore Sujith Madur: ಕೌನ್ಸಿಲರ್ ಸುಜಿತ್ ಮಾಡೂ...
27-02-26 08:52 pm
Leopard Mangalore, MLA Vedavyas Kamath: ಕದ್ರಿ...
27-02-26 08:40 pm
Justice Veerappa, Udupi: ಉಪ ಲೋಕಾಯುಕ್ತ ನ್ಯಾ.ವೀ...
27-02-26 08:36 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm