ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್ದಾರೆ ಸಂಸದ ಸುರೇಶ್ ಗೋಪಿ, ಕೇಂದ್ರ ಸಚಿವ ಸ್ಥಾನ ರಾಜ್ಯಸಭಾ ಸದಸ್ಯ ಸದಾನಂದನ್ ಮಾಸ್ಟರ್ ಗೆ ನೀಡಲು ಸಲಹೆ 

13-10-25 03:54 pm       HK News Desk   ಕರ್ನಾಟಕ

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಖಾತೆ ಸಚಿವರಾದ ಸುರೇಶ್ ಗೋಪಿ ತಮ್ಮ ಸಚಿವ ಸ್ಥಾನ ಬಿಟ್ಟುಕೊಟ್ಟು ನಟನೆಗೆ ಮರಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಸಚಿವನಾದ ಬಳಿಕ ಆದಾಯ ಮೂಲಕ್ಕೆ ಕತ್ತರಿ ಬಿದ್ದಿದೆ. ಹಾಗಾಗಿ, ಸಿನಿಮಾ ವೃತ್ತಿಯನ್ನು ಮುಂದುವರಿಸೋದಾಗಿ ಹೇಳಿದ್ದಾರೆ.

ಕಣ್ಣೂರು, ಅ.13 : ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಖಾತೆ ಸಚಿವರಾದ ಸುರೇಶ್ ಗೋಪಿ ತಮ್ಮ ಸಚಿವ ಸ್ಥಾನ ಬಿಟ್ಟುಕೊಟ್ಟು ನಟನೆಗೆ ಮರಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಸಚಿವನಾದ ಬಳಿಕ ಆದಾಯ ಮೂಲಕ್ಕೆ ಕತ್ತರಿ ಬಿದ್ದಿದೆ. ಹಾಗಾಗಿ, ಸಿನಿಮಾ ವೃತ್ತಿಯನ್ನು ಮುಂದುವರಿಸೋದಾಗಿ ಹೇಳಿದ್ದಾರೆ.

ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿಯ ಮೊದಲ ಬಿಜೆಪಿ ಸಂಸದ ಮತ್ತು ತ್ರಿಶ್ಶೂರ್ ಕ್ಷೇತ್ರದ ಲೋಕಸಭಾ ಸದಸ್ಯರಾಗಿರುವ ಗೋಪಿ, ಸಚಿವ ಹುದ್ದೆಯನ್ನು ವಹಿಸಿಕೊಂಡ ನಂತರ ಆದಾಯ ದೊಡ್ಡ ಮಟ್ಟದಲ್ಲಿ ಕಡಿಮೆಯಾಗಿದೆ ಎಂದರಲ್ಲದೆ, ಸಿನಿಮಾ ಜೀವನವನ್ನು ತೊರೆದು ಸಚಿವನಾಗಲು ಇಷ್ಟವಿರಲಿಲ್ಲ. ಹೀಗಾಗಿ ಒಂದು ವರ್ಷದ ಬಳಿಕ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಇಂಗಿತ ವ್ಯಕ್ತಪಡಿಸಿದ್ದಾರೆ.

ರಾಜೀನಾಮೆ ಸಲ್ಲಿಸಿದ ನಂತರ ತೆರವಾಗುವ ಸಚಿವ ಸ್ಥಾನವನ್ನು ರಾಜ್ಯಸಭಾ ಸಂಸದ, ಕಣ್ಣೂರಿನ ಹೋರಾಟಗಾರ ಸಿ. ಸದಾನಂದನ್ ಮಾಸ್ಟರ್ ಅವರಿಗೆ ನೀಡಬೇಕೆಂದು ಮನವಿ ಮಾಡಿದ್ದಾರೆ. ನಾನು ಎಂದಿಗೂ ಸಚಿವನಾಗಬೇಕೆಂದು ಪ್ರಾರ್ಥಿಸಿಲ್ಲ. ನಾನು ಸಿನಿಮಾದಲ್ಲೇ ಮುಂದುವರಿಯಲು ಬಯಸುತ್ತೇನೆ ಎಂದು ಈ ಮೊದಲೂ ಹೇಳಿದ್ದೆ. ಅಕ್ಟೋಬರ್ 2008 ರಲ್ಲಿ ಪಕ್ಷದ ಸದಸ್ಯತ್ವ ಪಡೆದು ಪ್ರಚಾರಕ್ಕೆ ಇಳಿದಿದ್ದೆ. ಪಕ್ಷವು ನನ್ನ ಮೇಲೆ ಭರವಸೆ ಇಟ್ಟು ದೊಡ್ಡ ಹುದ್ದೆಯನ್ನೇ ನೀಡಿತು ಎಂದರು. 

ಸದಾನಂದನ್ ಮಾಸ್ಟರ್ 1993ರಲ್ಲಿ ಸಿಪಿಎಂ ದುಷ್ಕರ್ಮಿಗಳಿಂದ ಹಲ್ಲೆಗೀಡಾಗಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದರು. ರಕ್ತಸಿಕ್ತ ಅಧ್ಯಾಯದ ಸಾಕ್ಷಿಯಂತಿರುವ ಸದಾನಂದ ಅವರನ್ನು ಇತ್ತೀಚೆಗೆ ರಾಜ್ಯಸಭಾ ಸದಸ್ಯರಾಗಿ ಮಾಡಲಾಗಿತ್ತು. ಇದೀಗ ಅವರನ್ನು ಸಚಿವ ಸ್ಥಾನಕ್ಕೇರಿಸಲು ಸ್ವತಃ ನಟ, ಸಂಸದ ಸುರೇಶ್ ಗೋಪಿ ಒತ್ತಾಯಿಸಿದ್ದಾರೆ.

Actor-turned-politician and Union Minister of State for Petroleum and Natural Gas, Suresh Gopi, has expressed his desire to resign from his ministerial post and return to films. Speaking at an event in Kannur, the BJP MP from Thrissur said his income had dropped significantly after becoming a minister, prompting his decision to resume his acting career. Gopi indicated he may step down within a year and recommended that his ministerial position be given to Rajya Sabha MP C.