ಬ್ರೇಕಿಂಗ್ ನ್ಯೂಸ್
11-10-25 10:05 am Bangalore Correspondent ಕರ್ನಾಟಕ
ಬೆಂಗಳೂರು, ಅ.11 : ಸಿಲಿಕಾನ್ ಸಿಟಿಯ ಯಲಹಂಕದ ಲಾಡ್ಜ್ ಒಂದರಲ್ಲಿ ನಿನ್ನೆ ಸಂಜೆ ಬೆಂಕಿ ಬಿದ್ದು ಪ್ರೀತಿಸುತ್ತಿದ್ದ ಜೋಡಿಗಳಿಬ್ಬರು ಸಾವನ್ನಪ್ಪಿದ್ದರು ಎಂಬ ಸುದ್ದಿ ವರದಿಯಾಗಿತ್ತು. ಆದರೆ ಇದೀಗ ಯುವಕ-ಯುವತಿ ಸಾವನ್ನಪ್ಪಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಮೃತ ಯುವತಿ ಕಾವೇರಿ ಮದುವೆಯಾಗಿ ಮೂರು ಮಕ್ಕಳ ತಾಯಿ ಅನ್ನೋ ವಿಚಾರ ಬಯಲಾಗಿದೆ. ಮೂರು ಮಕ್ಕಳ ತಾಯಿ, ಯುವಕನ ಜೊತೆ ಲಾಡ್ಜ್ಗೆ ಬಂದಿದ್ಯಾಕೆ ? ಬಾತ್ ರೂಮ್ಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡಿದ್ದಳು ಈಕೆ. ಅಷ್ಟಕ್ಕೂ ಲಾಡ್ಜ್ನಲ್ಲಿ ಇಬ್ಬರ ನಡುವೆ ನಡೆದಿದ್ದೇನು ಎಂಬ ವಿಚಾರ ಹೊರ ಬಿದ್ದಿದೆ.
ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದ ಕಾವೇರಿ
ಮೃತ ಮಹಿಳೆ ಕಾವೇರಿ ಬಡಿಗೇರ್ ಎಂಬಾಕೆ ಹುನಗುಂದ ಮೂಲದವರಾಗಿದ್ದು, ಮದುವೆಯಾಗಿ ಮೂವರು ಮಕ್ಕಳನ್ನು ಹೊಂದಿದ್ದಳು. 2016ರಲ್ಲೇ ಹುನಗುಂದದಲ್ಲಿ ಕಾವೇರಿಗೆ ಮದುವೆಯಾಗಿದೆ. ಎರಡು ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದ ಮಹಿಳೆ, ಯಲಹಂಕ ನ್ಯೂ ಟೌನ್ ಠಾಣಾ ವ್ಯಾಪ್ತಿಯ ಸ್ಪಾ ಒಂದರಲ್ಲಿ ಕೆಲಸಕ್ಕೆ ಸೇರಿದ್ದಳು. ಪತಿ ಹಾಗೂ ಮಕ್ಕಳನ್ನ ಊರಲ್ಲೇ ಬಿಟ್ಟು ಕೆಲಸ ಮಾಡ್ತೀನಿ ಎಂದು ಬೆಂಗಳೂರಿಗೆ ಬಂದಿದ್ದ ಕಾವೇರಿಗೆ ರಮೇಶ್ ಎಂಬಾತನ ಪರಿಚಯ ಆಗಿದೆ. ಗದಗ ಮೂಲದ ರಮೇಶ್ ಜೊತೆ ಮೃತ ಕಾವೇರಿ ಅನೈತಿಕ ಸಂಬಂಧ ಹೊಂದಿದ್ದಳು ಎಂಬ ಶಂಕೆ ವ್ಯಕ್ತವಾಗಿದೆ.
ಮದುವೆ ವಿಚಾರಕ್ಕೆ ನಡೀತಾ ಜಗಳ?
ಇಬ್ಬರು ಯಲಹಂಕದ ಲಾಡ್ಜ್ಗೆ ತೆರಳಿದ್ದ ವೇಳೆ ರಮೇಶ್, ಕಾವೇರಿ ಬಳಿ ಮದುವೆ ವಿಚಾರ ಪ್ರಸ್ತಾಪಿಸಿದ್ದ ಎನ್ನಲಾಗ್ತಿದೆ. ಮದುವೆ ವಿಚಾರಕ್ಕೆ ಇಬ್ಬರ ನಡುವೆ ಮಾತುಕತೆ ನಡೆದಿದ್ದು, ರಮೇಶ್ ಮದುವೆ ಆಗಲೇಬೇಕು ಎಂದು ಒತ್ತಡ ಹೇರಿರುವ ಶಂಕೆ ಇದೆ. ಮದುವೆಗೆ ಕಾವೇರಿ ಒಪ್ಪದ ಹಿನ್ನೆಲೆ ರಮೇಶ್ ಪೆಟ್ರೋಲ್ ಸುರಿದುಕೊಂಡು ಬೆದರಿಸಲು ಹೋಗಿ ಸುಟ್ಟು ಕರಕಲಾಗಿದ್ದಾನೆ. ಈ ವೇಳೆ ಮಹಿಳೆ ಬಾತ್ ರೂಮ್ಗೆ ಹೋಗಿ ಬಾಗಿಲು ಮುಚ್ಚಿಕೊಂಡಿದ್ದಾಳೆ. ಬಾತ್ ರೂಮ್ನಲ್ಲೇ ಸ್ಪಾ ಮಾಲೀಕನಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾಳೆ.
ಸ್ಪಾ ಮಾಲೀಕರೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಪಾಟ್ ಗೆ ಬರುವಷ್ಟರಲ್ಲಿ ಇಬ್ಬರು ಸಾವನ್ನಪ್ಪಿದ್ದರು ಎನ್ನಲಾಗ್ತಿದೆ. ಇಬ್ಬರ ಮೊಬೈಲ್ ಗಳನ್ನೂ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗ್ತಿದೆ. ಮೃತ ರಮೇಶ್ ಮೊಬೈಲ್ ನೀರಲ್ಲಿ ಮುಳುಗಿದ್ದು, ಆನ್ ಆಗ್ತಿಲ್ಲ. ಸದ್ಯ ಯುವತಿ ಮೊಬೈಲ್ ಅನ್ನು ಪರಿಶೀಲನೆ ನಡೆಸಲಾಗ್ತಿದೆ.
ಇಬ್ಬರ ನಡುವೆ ಮತ್ತೋರ್ವನ ಎಂಟ್ರಿ ?
ಲಾಡ್ಜ್ನಲ್ಲಿ ರಮೇಶ್ ಮತ್ತು ಕಾವೇರಿ ಇದ್ದಾಗಲೇ ಮತ್ತೋರ್ವ ಯುವಕ ಕೂಡ ಬಂದಿದ್ದ ಎನ್ನಲಾಗ್ತಿದೆ. ಆತ ಯಾರು? ಲಾಡ್ಜ್ಗೆ ಬಂದಿದ್ಯಾಕೆ ಎನ್ನುವ ಪ್ರಶ್ನೆ ಮೂಡಿದೆ. ಹೀಗಾಗಿ ಪೊಲೀಸರು ಆತನ ಪತ್ತೆ ಕಾರ್ಯಕ್ಕೂ ಮುಂದಾಗಿದ್ದಾರೆ.
A tragic fire in a Yelahanka lodge on Thursday evening that killed a man and a woman has taken a shocking turn. The deceased woman, Kaveri Badiger, has now been identified as a married mother of three from Hunagunda.
13-10-25 10:09 pm
HK News Desk
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
D.K. Shivakumar, MLA Munirathna, RSS: ಮುನಿರತ್...
12-10-25 08:05 pm
13-10-25 10:37 pm
HK News Desk
Kerala, IT professional dead, RSS members: ಆರ...
13-10-25 05:31 pm
ಪಾಕಿಸ್ತಾನದ ಸೇನಾ ಔಟ್ ಪೋಸ್ಟ್ ಮೇಲೆ ಅಫ್ಘಾನ್ ಭೀಕರ...
12-10-25 10:19 pm
Afghan Foreign Minister, Amir Khan Muttaqi: ಮ...
11-10-25 12:52 pm
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
13-10-25 07:47 pm
Udupi Correspondent
ಆರೆಸ್ಸೆಸ್ ಸೇವಾ ಚಟುವಟಿಕೆ ತಿಳಿಯದ ಪ್ರಿಯಾಂಕ ಖರ್ಗೆ...
13-10-25 04:33 pm
Honey Bees Attack in Puttur: ಪುತ್ತೂರು ; ಹೆಜ್ಜ...
12-10-25 09:53 pm
ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ದಿಢೀರ್ ನಾಪ...
12-10-25 06:53 pm
Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗ...
12-10-25 05:46 pm
13-10-25 10:04 pm
Mangalore Correspondent
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm