ಬ್ರೇಕಿಂಗ್ ನ್ಯೂಸ್
02-09-25 08:00 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.2: ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲದೇ ಪಟ್ಟಣ ಪ್ರದೇಶಗಳಲ್ಲಿಯೂ ಶಾಲೆಗಳಿಗೆ ಮಕ್ಕಳನ್ನು ಶಾಲಾ ವಾಹನ ಇಲ್ಲವೇ ಖಾಸಗಿ ವಾಹನಗಳಲ್ಲಿ ಕಳುಹಿಸುತ್ತಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಮಕ್ಕಳ ಕಳ್ಳರ ಗ್ಯಾಂಗ್, ಶಾಲಾ ವಾಹನದ ನೆಪದಲ್ಲಿ ಮಕ್ಕಳನ್ನು ಕಿಡ್ನಾಪ್ ಮಾಡುತ್ತಿರುವ ವಿಚಾರ ಉತ್ತರ ಭಾರತದಲ್ಲಿ ಬೆಳಕಿಗೆ ಬಂದಿದೆ. ಇದರ ಬಗ್ಗೆ ನಟ ಮಾಸ್ಟರ್ ಆನಂದ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಹಿಂದಿಯಲ್ಲಿ ಬಂದಿರುವ ಸುದ್ದಿಯೊಂದನ್ನು ಉಲ್ಲೇಖಿಸಿರುವ ಮಾಸ್ಟರ್ ಆನಂದ್, ಸಾಮಾನ್ಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವ ವಿಚಾರದಲ್ಲಿ ಧಾವಂತದಲ್ಲಿ ಇರುತ್ತಾರೆ. ಇದನ್ನೇ ಲಕ್ನೋದಲ್ಲಿ ಕಳ್ಳರ ಗ್ಯಾಂಗ್ ಬಂಡವಾಳ ಮಾಡಿಕೊಂಡು ಅದೇ ರೀತಿಯ ವಾಹನ ತಂದು ಮಕ್ಕಳನ್ನು ಕದಿಯೋಕೆ ನೋಡಿದ್ದಾರೆ ಎಂದು ವಿವರಿಸಿದ್ದಾರೆ.
ಸಾಮಾನ್ಯವಾಗಿ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುವ ವ್ಯಾನ್ಗಳು ನಿಗದಿತ ಸಮಯಕ್ಕಿಂತ ಸ್ವಲ್ಪ ಹೆಚ್ಚೂ ಕಡಿಮೆ ಬರುವುದು ಸಾಮಾನ್ಯ. ನಿಗದಿತ ವಾಹನ ಬರುವುದಕ್ಕಿಂತ ಸ್ವಲ್ಪ ಮುಂಚೆಯೇ ಕಳ್ಳರ ಗ್ಯಾಂಗ್ ಬಂದು ಹಾರ್ನ್ ಮಾಡುತ್ತದೆ. ಶಾಲಾ ವಾಹನ ಬಂತೆಂದು ಅದನ್ನು ನೋಡದೆ ಮಕ್ಕಳನ್ನು ಕಳಿಸಿಕೊಡುತ್ತಾರೆ. ಎಂದಿನ ಡ್ರೈವರ್ ಬಂದಿಲ್ಲ, ಅವರಿಗೆ ಉಷಾರಿಲ್ಲ ಅಂತ ನೆಪ ಹೇಳಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ.
ಇಂಥದ್ದೇ ಘಟನೆ ಲಕ್ನೋದಲ್ಲಿ ನಡೆದಿರುವ ಬಗ್ಗೆ ಮಾಸ್ಟರ್ ಆನಂದ್ ಹೇಳಿದ್ದಾರೆ. ಮಕ್ಕಳನ್ನು ತುಂಬಿಸಿಕೊಂಡು ಶಾಲೆಯ ವಾಹನ ಬಂದ ಸಂದರ್ಭದಲ್ಲಿ ಮಹಿಳೆಯೊಬ್ಬರಿಗೆ ಡೌಟ್ ಬಂದು ನಿಜವಾದ ಡ್ರೈವರ್ಗೆ ಕರೆ ಮಾಡಿದಾಗ, ಆತ ತಾನು ತಡವಾಗಿ ಬರುತ್ತಿರುವುದಾಗಿ ಹೇಳಿದ್ದರಿಂದ ಮೋಸದಾಟ ಬಯಲಾಗಿದೆ. ಆದರೆ ಈ ರೀತಿ ನಿಮ್ಮ ಮಕ್ಕಳಿಗೂ ಆಗಬಹುದು. ಆದ್ದರಿಂದ ಚಾಲಕರು ಬೇರೆ ಬಂದಿದ್ದರೆ ಅಥವಾ ಇನ್ನಾವುದೇ ರೀತಿಯಲ್ಲಿ ಸಂದೇಹ ಬಂದರೆ ಚೆಕ್ ಮಾಡಿ. ಮಕ್ಕಳನ್ನು ಬೇರೆ ವಾಹನಗಳಿಗೆ ಕಳುಹಿಸುವ ಮುನ್ನ ಎಚ್ಚರಿಕೆಯಿಂದ ಇರಿ ಎಂದು ಮಾಸ್ಟರ್ ಆನಂದ್ ಸಲಹೆ ಮಾಡಿದ್ದಾರೆ.
In a disturbing new trend, child kidnappers are reportedly disguising themselves as school van drivers to abduct children, a modus operandi that recently surfaced in North India. Actor Master Anand has issued a public warning about such incidents via his Instagram account.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
14-10-26 10:45 pm
HK News Staffer
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
14-10-26 09:09 pm
Mangaluru Staffer
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm