Ranya Rao: ಚಿನ್ನ ಸ್ಮಗ್ಲರ್ ರನ್ಯಾ ರಾವ್ ಗೆ ಮತ್ತೆ ಬಿಗ್ ಶಾಕ್ ; ನೂರು ಕೋಟಿ ದಂಡ ಪಾವತಿಗೆ ಜಾರಿ ನಿರ್ದೇಶನಾಲಯ ನೋಟಿಸ್, ಜೈಲಿನಲ್ಲಿ ಇರುವಾಗಲೇ ಬಿಸಿ ! 

02-09-25 06:22 pm       Bangalore Correspondent   ಕರ್ನಾಟಕ

ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ನಟಿ ರನ್ಯಾರಾವ್ ಗೆ ಇದೀಗ ಬಿಗ್ ಶಾಕ್ ಎದುರಾಗಿದೆ. ಒಟ್ಟು 102.55 ಕೋಟಿ ರೂಪಾಯಿ ದಂಡ ಪಾವತಿಸುವಂತೆ ಆದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ರನ್ಯಾ ರಾವ್ ಗೆ ನೋಟಿಸ್ ನೀಡಿದ್ದಾರೆ.

ಬೆಂಗಳೂರು, ಸೆ.2 : ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ನಟಿ ರನ್ಯಾರಾವ್ ಗೆ ಇದೀಗ ಬಿಗ್ ಶಾಕ್ ಎದುರಾಗಿದೆ. ಒಟ್ಟು 102.55 ಕೋಟಿ ರೂಪಾಯಿ ದಂಡ ಪಾವತಿಸುವಂತೆ ಆದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ರನ್ಯಾ ರಾವ್ ಗೆ ನೋಟಿಸ್ ನೀಡಿದ್ದಾರೆ.

ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣ ಮೂಲಕ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡಿದ್ದ ಪ್ರಕರಣದಲ್ಲಿ ಕನ್ನಡದ ನಟಿ ರನ್ಯಾ ರಾವ್ ರನ್ನು ಪೊಲೀಸರು ಬಂಧಿಸಿದ್ದರು. ಆಬಳಿಕ ತನಿಖೆ ನಡೆಸಿದ್ದ ಡಿಆರ್‌ಐ ಅಧಿಕಾರಿಗಳು ರನ್ಯಾರಾವ್ ಬಳಿ 14.8 ಕೆಜಿ ಚಿನ್ನವನ್ನು ವಶಪಡಿಸಿದ್ದರು. ಡಿಆರ್ ಐ ತನಿಖೆಯಲ್ಲಿ ರನ್ಯಾ ರಾವ್ 15 ದಿನಗಳಲ್ಲಿ 4 ಬಾರಿ ದುಬೈಗೆ ಹೋಗಿ ಭಾರತಕ್ಕೆ ಅಕ್ರಮವಾಗಿ ಚಿನ್ನ ತಂದಿರುವುದು ಪತ್ತೆಯಾಗಿತ್ತು.

ನಟಿ ರನ್ಯಾ ರಾವ್ ಅವರಿಗೆ ಇಡಿ ತನಿಖೆಯ ಬಳಿಕ ಕಾಫಿಫೋಸಾ ಅಡಿಯಲ್ಲಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಜಾಮೀನು ಪಡೆಯುವ ಅವಕಾಶವೇ ಇಲ್ಲದಾಗಿದೆ. ರನ್ಯಾ ವಿರುದ್ಧ ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆಯನ್ನು ಹೊರತಂದಿತು(COFEPOSA) ಜಾರಿ ಮಾಡಲಾಗಿದ್ದು, ಇದರ ಸಲಹಾ ಮಂಡಳಿಯು ಇತ್ತೀಚೆಗೆ ರನ್ಯಾ ರಾವ್ ಗೆ ಬಂಧನದ ಸಂಪೂರ್ಣ ಅವಧಿಯಲ್ಲಿ ಜಾಮೀನು ಸಿಗುವುದಿಲ್ಲ. ಜೈಲಿನಲ್ಲೇ ಕಳೆಯಬೇಕು ಎಂದಿತ್ತು. 

ಇತ್ತೀಚೆಗೆ ರನ್ಯಾ ರಾವ್ ಗೆ ಸೇರಿದೆ ಎನ್ನಲಾದ 34 ಕೋಟಿ ಮೊತ್ತದ ಕಟ್ಟಡ ಇನ್ನಿತರ ಸುತ್ತುಗಳನ್ನು ವಶಕ್ಕೆ ಡಿಆರ್ ಐ ವಶಕ್ಕೆ ಪಡೆದಿತ್ತು.

Kannada actress Ranya Rao, currently serving a jail sentence in a gold smuggling case, has received yet another major setback. The Enforcement Directorate (ED) has issued a notice demanding a penalty payment of ₹102.55 crore.