Kannada Anchor Anushree, Marriage, Mangalore: ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿ ಆಗುವ ಹೊಸ ಮನ್ವಂತರ ; ಕನ್ನಡದ ಖ್ಯಾತ ನಿರೂಪಕಿ,ಕುಡ್ಲದ ಹುಡುಗಿ ಅನುಶ್ರೀ ಮದುವೆ

27-08-25 02:51 pm       Bangalore Correspondent   ಕರ್ನಾಟಕ

ಕನ್ನಡದ ಖ್ಯಾತ ನಿರೂಪಕಿ, ಕುಡ್ಲ ಹುಡುಗಿ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಬಗ್ಗೆ ಕೆಲವೇ ದಿನಗಳ ಹಿಂದೆ ಸುದ್ದಿ ಹೊರಬಿದ್ದಿತ್ತು. ಕೊಡಗು ಮೂಲದ ರೋಷನ್ ಜೊತೆ ಆ್ಯಂಕರ್ ಅನುಶ್ರೀ ಅವರು ಹಸೆಮಣೆ ಏರಲಿದ್ದಾರೆ. ಮದುವೆಗೆ ದಿನಾಂಕ ಕೂಡ ನಿಗದಿ ಆಗಿದೆ. ಆಗಸ್ಟ್ 28ರಂದು ಅನುಶ್ರೀ ಮತ್ತು ರೋಷನ್ ಅವರ ಮದುವೆ ನಡೆಯಲಿದೆ.

ಬೆಂಗಳೂರು, ಆ 27 : ಕನ್ನಡದ ಖ್ಯಾತ ನಿರೂಪಕಿ, ಕುಡ್ಲ ಹುಡುಗಿ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಬಗ್ಗೆ ಕೆಲವೇ ದಿನಗಳ ಹಿಂದೆ ಸುದ್ದಿ ಹೊರಬಿದ್ದಿತ್ತು. ಕೊಡಗು ಮೂಲದ ರೋಷನ್ ಜೊತೆ ಆ್ಯಂಕರ್ ಅನುಶ್ರೀ ಅವರು ಹಸೆಮಣೆ ಏರಲಿದ್ದಾರೆ. ಮದುವೆಗೆ ದಿನಾಂಕ ಕೂಡ ನಿಗದಿ ಆಗಿದೆ. ಆಗಸ್ಟ್ 28ರಂದು ಅನುಶ್ರೀ ಮತ್ತು ರೋಷನ್ ಅವರ ಮದುವೆ ನಡೆಯಲಿದೆ. ಈಗಾಗಲೇ ಆಪ್ತರಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡಲಾಗಿದೆ. ಅನುಶ್ರೀ ಮದುವೆಯ ಆಹ್ವಾನ ಪತ್ರಿಕೆ ತುಂಬಾ ಸರಳವಾಗಿದೆ.

ನೀವೆಲ್ಲ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಈಗ ಉತ್ತರ. ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿ ಆಗುವ ಹೊಸ ಮನ್ವಂತರ’ ಎಂದು ಆಹ್ವಾನ ಪತ್ರಿಕೆಯಲ್ಲಿ ಬರೆಯಲಾಗಿದೆ. ಆ.28ಕ್ಕೆ ರೋಷನ್ ಜೊತೆ ನಿರೂಪಕಿ ಅನುಶ್ರೀ ಸಪ್ತಪದಿ ತುಳಿಯಲಿದ್ದಾರೆ. ಅಂದು ಬೆಳಗ್ಗೆ 10.56ಕ್ಕೆ ಮಾಂಗಲ್ಯ ಧಾರಣೆ ಆಗಲಿದೆ. ಬೆಂಗಳೂರಿನ ಹೊರವಲಯದ ರೆಸಾರ್ಟ್​​ನಲ್ಲಿ ಮದುವೆ ನಡೆಯಲಿದೆ.

ಬಣ್ಣದ ಲೋಕದಲ್ಲಿ ಅನುಶ್ರೀ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಕಿರುತೆರೆಯ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಹಲವು ವೇದಿಕೆ ಕಾರ್ಯಕ್ರಮಗಳ ನಿರೂಪಣೆ ಕೂಡ ಮಾಡಿದ್ದಾರೆ. ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಚಿತ್ರರಂಗದಲ್ಲಿ ಅವರ ಸ್ನೇಹಿತರ ಬಳಗ ದೊಡ್ಡದು. ಅಲ್ಲದೇ, ರಾಜಕೀಯ ಕ್ಷೇತ್ರದವರ ಜೊತೆಗೂ ನಂಟು ಹೊಂದಿದ್ದಾರೆ. ಹಾಗಾಗಿ ಮದುವೆಗೆ ಅನೇಕ ಗಣ್ಯರು ಹಾಜರಿ ಹಾಕಲಿದ್ದಾರೆ.

ಅನುಶ್ರೀ ಮದುವೆ ಯಾವಾಗ ಎಂಬ ಪ್ರಶ್ನೆ ಆಗಾಗ ಕೇಳಿಬರುತ್ತಿತ್ತು. ಅದಕ್ಕೆ ತಕ್ಕಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಹಲವು ಅಂತೆ-ಕಂತೆಗಳು ಹರಿದಾಡುತ್ತಿದ್ದವು. ಈ ಮೊದಲು ಕೂಡ ಅನುಶ್ರೀ ಮದುವೆ ಬಗ್ಗೆ ಕೆಲವು ಗಾಸಿಪ್ ಹಬ್ಬಿದ್ದವು. ಆದರೆ ಅವು ನಿಜವಾಗಲಿಲ್ಲ. ಈ ಬಾರಿ ಮದುವೆಯ ಸುದ್ದಿ ಖಚಿತವಾಗಿದೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

Celebrated Kannada television anchor and Kudla native Anushree is all set to embark on a new chapter in her life — marriage. The news, which surfaced a few days ago, has now been confirmed, with the wedding date officially announced.