Dk Shivakumar, Chamundi Hill: ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ, ಎಷ್ಟೋ ಜನ ಹಿಂದೂಗಳು ಮುಸ್ಲಿಂ ಆಗಿ ಕನ್ವರ್ಟ್ ಆಗಿಲ್ವಾ, ಬಾನು‌ ಮುಷ್ತಾಕ್‌ರನ್ನ ಯಾಕೆ ಚಾಮುಂಡಿ ಬೆಟ್ಟ ಹತ್ತಿಸಬಾರದು? ಡಿಕೆ ಸವಾಲು 

27-08-25 11:48 am       Bangalore Correspondent   ಕರ್ನಾಟಕ

ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರ ಹೆಸರು ಭಾರೀ ವಿವಾದಕ್ಕೆ ಕಾರಣವಾಗಿದೆ.

ಬೆಂಗಳೂರು, ಆ.28: ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರ ಹೆಸರು ಭಾರೀ ವಿವಾದಕ್ಕೆ ಕಾರಣವಾಗಿದೆ. ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಕರಾಗಿ ಆಹ್ವಾನಿಸಿರುವುದು ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆ ಆಕ್ರೋಶಕ್ಕೆ ಕಾರಣವಾಗಿದೆ. 

ಹಿಂದೂ ಸಂಪ್ರದಾಯಗಳ ಬಗ್ಗೆ ಬಾನು ಮುಷ್ತಾಕ್‌ಗೆ ನಂಬಿಕೆ, ಗೌರವ ಇಲ್ಲ. ಹೀಗಾಗಿ ಅವರನ್ನು ಆಹ್ವಾನಿಸಬಾರದು ಅಂತ ವಿರೋಧಿಗಳು ಆಗ್ರಹಿಸಿದ್ದಾರೆ. ಇತ್ತ ಕಾಂಗ್ರೆಸ್ ನಾಯಕರು ಬಾನು ಮುಷ್ತಾಕ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದು, ಕನ್ನಡದಲ್ಲಿ ಲೇಖನ ಬರೆದಾಗ ಯಾಕೆ ಬಾನು ಮುಷ್ತಾಕ್‌ರನ್ನ ವಿರೋಧಿಸಲಿಲ್ಲ ಅಂತ ಪ್ರಶ್ನಿಸಿದ್ದಾರೆ. ಅಲ್ಲದೇ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದಿದ್ದಾರೆ.

ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ;

ಮೈಸೂರಿನ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಅಂತ ಡಿಕೆ ಹೇಳಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಬೇಡ ಎಂಬ ಬಿಜೆಪಿ ‌ನಾಯಕರ ವಿರೋಧದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಅಂತ ಕಿಡಿಕಾರಿದ್ದಾರೆ

ಹಿಂದೂಗಳು ಮುಸ್ಲಿಂ ಆಗಿ ಕನ್ವರ್ಟ್ ಆಗಿಲ್ವಾ?

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಸಮಾಜದವ್ರು ಹೋಗ್ತಾರೆ, ಬರ್ತಾರೆ. ನಾವೂ ಕೂಡ ಎಲ್ಲಾ ಸಮಾಜಗಳ ದೇಗುಲ, ಮಂದಿರಗಳಿಗೆ ಹೋಗ್ತೀವಿ. ನಾವು ಗುರುದ್ವಾರಕ್ಕೆ ಹೋಗೋದನ್ನ ಯಾರಾದ್ರೂ ತಪ್ಪಿಸಿದ್ದಾರಾ? ಅಂತ ಡಿಕೆಶಿ ಪ್ರಶ್ನಿಸಿದ್ದಾರೆ. ಎಷ್ಟೋ ಜನ ಹಿಂದೂಗಳು ಮುಸ್ಲಿಂ ಆಗಿ ಕನ್ವರ್ಟ್ ಆಗಿಲ್ವಾ ಅಂತ ಡಿಕೆಶಿ ಪ್ರಶ್ನಿಸಿದ್ದಾರೆ.

ಬಾನು ಮುಷ್ತಾಕ್ ಯಾಕೆ ಚಾಮುಂಡಿ ಬೆಟ್ಟ ಹತ್ತಬಾರದು?

ಬಾನು‌ ಮುಷ್ತಾಕ್‌ರನ್ನ ಯಾಕೆ ಚಾಮುಂಡಿ ಬೆಟ್ಟ ಹತ್ತಿಸಬಾರದು? ಎಂದು ಪ್ರಶ್ನಿಸಿರುವ ಡಿಕೆ ಶಿವಕುಮಾರ್, ಅಯೋಧ್ಯೆಗೆ ಹಿಂದೂಗಳು ಮಾತ್ರ ಬರಬೇಕು ಅಂತ ಯಾಕೆ ಬೋರ್ಡ್ ಹಾಕಿಲ್ಲ? ಕೇಂದ್ರ ಸರ್ಕಾರ ಹಜ್ ಕಮಿಟಿ, ಮೈನಾರಿಟಿ ಕಮಿಟಿಗಳನ್ನ ಯಾಕೆ ತೆಗೆದಿಲ್ಲ? ಅಂತ ಬಿಜೆಪಿ ನಾಯಕರಿಗೆ ಪ್ರಶ್ನಿಸಿದ್ದಾರೆ.

The selection of Booker Prize-winning author Banumustak as the inaugurator of this year’s world-renowned Mysuru Dasara festival has sparked major controversy, with the BJP and various Hindu organizations expressing outrage over the decision.