ಬ್ರೇಕಿಂಗ್ ನ್ಯೂಸ್
07-08-25 05:50 pm Bangalore Correspondent ಕರ್ನಾಟಕ
ಬೆಂಗಳೂರು, ಆ.7 : ಧರ್ಮಸ್ಥಳದಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ವಿಚಾರದಲ್ಲಿ ತನಿಖೆ ಮಾಡಲು ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎರಡು ಗುಂಪುಗಳ ಮಧ್ಯೆ ಘರ್ಷಣೆ ಆಗಿದೆ. ಯಾಕಾಯ್ತು? ಕಾರಣ ಏನು? ಇದನ್ನು ಪರಿಶೀಲಿಸಿ ತನಿಖೆ ಮಾಡಲು ಹೇಳಿದ್ದೇನೆ. ಏನೋ ಒಂದು ಸಂಘರ್ಷ ಅಲ್ಲಿ ನಡೆಯುತ್ತಿದೆ. ಯಾವ ಕಾರಣಕ್ಕೆ ಆಗ್ತಿದೆ ಗೊತ್ತಿಲ್ಲ. ಒತ್ತಾಯ ಬಂದಿದ್ದಕ್ಕೆ ಎಸ್ಐಟಿ ಮಾಡಿದ್ದೇವೆ. ಪರಿಶೀಲನೆ ಮಾಡಿ ಎಚ್ಚರಿಕೆಯಿಂದ ತಂಡ ರಚಿಸಿದ್ದೆವು. ವ್ಯಕ್ತಿಯೊಬ್ಬನ ಆರೋಪದ ಮೇಲೆ ತನಿಖೆ ನಡೆದಿದೆ. 13 ಸ್ಥಳಗಳಲ್ಲಿ ಹೆಣ ಹೂತಿದ್ದೆ ಎಂದಿದ್ದ. ಒಂದು ಕಡೆ ಅಸ್ಥಿಪಂಜರ ಸಿಕ್ಕಿದೆ. ಇದರ ಹಿನ್ನೆಲೆಯಲ್ಲಿ ಘರ್ಷಣೆ ಸಂಭವಿಸಿದೆ ಎಂದರು.
ಕೇಸ್ ಆಗಿದೆ, ಅದಕ್ಕೆ ಕೌಂಟರ್ ಕೇಸ್ ಕೂಡ ಆಗಿದೆ. ಎಲ್ಲ ವಿಚಾರದ ಬಗ್ಗೆ ಪರಿಶೀಲನೆ ಮಾಡಿ ತನಿಖೆ ನಡೆಸ್ತಾರೆ. ತನಿಖೆಯ ನಂತರ ಯಾವ ರೀತಿ ಕ್ರಮ ಆಗಬೇಕು, ಅದರಂತೆ ಎಸ್ಐಟಿಯವರು ತೆಗೆದುಕೊಳ್ತಾರೆ. ಯಾರ್ಯಾರು ಏನು ಹೇಳಿಕೆ ಕೊಡ್ತಾರೆ ಮುಖ್ಯವಲ್ಲ. ಸತ್ಯ ಹೊರಗೆ ಬರಬೇಕು ಅನ್ನೋದು ಮುಖ್ಯ. ಈಗಲೇ ಎಸ್ಐಟಿಯವರನ್ನು ಪ್ರಶ್ನಿಸೋದು, ತನಿಖೆ ಸರಿಯಾಗಿ ನಡೆದಿಲ್ಲ ಅಂತ ಹೇಳೋದು ಅಲ್ಲ. ಆರೋಪ ಮಾಡ್ತಾರೆ. ಎಲ್ಲಾ ಅವರೇ ಹೇಳ್ತಾರೆ. ಪೊಲೀಸರು ಸಮರ್ಥರಿದ್ದಾರೆ. ಎಲ್ಲ ರೀತಿಯಲ್ಲೂ ತನಿಖೆಯನ್ನು ಮಾಡ್ತಾರೆ. ಅಸ್ಥಿ ಪಂಜರಗಳು ಸಿಕ್ಕಿದ ಬಗ್ಗೆ ತನಿಖೆ ಆಗ್ತಿದೆ. ಎಸ್ಐಟಿ ಏನೆಲ್ಲಾ ಮಾಡಬೇಕೋ ಅದನ್ನು ಮಾಡ್ತಾರೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
Karnataka Home Minister Dr. G. Parameshwara stated on Wednesday that he has directed police officials to conduct a thorough investigation into the recent clash between two groups in Dharmasthala, and that a Special Investigation Team (SIT) has already been formed to probe the matter.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
14-10-25 11:22 am
HK News Desk
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
Kerala, IT professional dead, RSS members: ಆರ...
13-10-25 05:31 pm
ಪಾಕಿಸ್ತಾನದ ಸೇನಾ ಔಟ್ ಪೋಸ್ಟ್ ಮೇಲೆ ಅಫ್ಘಾನ್ ಭೀಕರ...
12-10-25 10:19 pm
13-10-25 07:47 pm
Udupi Correspondent
ಆರೆಸ್ಸೆಸ್ ಸೇವಾ ಚಟುವಟಿಕೆ ತಿಳಿಯದ ಪ್ರಿಯಾಂಕ ಖರ್ಗೆ...
13-10-25 04:33 pm
Honey Bees Attack in Puttur: ಪುತ್ತೂರು ; ಹೆಜ್ಜ...
12-10-25 09:53 pm
ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ದಿಢೀರ್ ನಾಪ...
12-10-25 06:53 pm
Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗ...
12-10-25 05:46 pm
14-10-25 11:19 am
Mangalore Correspondent
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm