24 ಗಂಟೆಯಲ್ಲಿ ಭಟ್ಕಳ ನಗರವನ್ನು ಸ್ಫೋಟಿಸುತ್ತೇನೆ ; ಪೊಲೀಸರಿಗೇ ಬೆದರಿಕೆ ಹಾಕಿದ ಕಿಡಿಗೇಡಿ ! 

11-07-25 04:36 pm       HK News Desk   ಕರ್ನಾಟಕ

ಭಟ್ಕಳ ನಗರ ಪೊಲೀಸ್ ಠಾಣೆಗೆ ಇ-ಮೇಲ್ ಮಾಡಿದ ವ್ಯಕ್ತಿಯೊಬ್ಬ ಭಟ್ಕಳ ನಗರವನ್ನು 24 ಗಂಟೆಯಲ್ಲಿ ಸ್ಪೋಟಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ. ಎರಡು ಇ-ಮೇಲ್ ಸಂದೇಶ ಭಟ್ಕಳ ಶಹರ ಠಾಣೆಗೆ ಬಂದಿದ್ದು ಕಾನೂನು ಪಾಲಿಸುವ ಪೊಲೀಸರಿಗೇ ಬೆದರಿಕೆ ಹಾಕಲಾಗಿದೆ. 

ಕಾರವಾರ, ಜುಲೈ 11 : ಭಟ್ಕಳ ನಗರ ಪೊಲೀಸ್ ಠಾಣೆಗೆ ಇ-ಮೇಲ್ ಮಾಡಿದ ವ್ಯಕ್ತಿಯೊಬ್ಬ ಭಟ್ಕಳ ನಗರವನ್ನು 24 ಗಂಟೆಯಲ್ಲಿ ಸ್ಪೋಟಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ. ಎರಡು ಇ-ಮೇಲ್ ಸಂದೇಶ ಭಟ್ಕಳ ಶಹರ ಠಾಣೆಗೆ ಬಂದಿದ್ದು ಕಾನೂನು ಪಾಲಿಸುವ ಪೊಲೀಸರಿಗೇ ಬೆದರಿಕೆ ಹಾಕಲಾಗಿದೆ. 

ಕಣ್ಣನ್ ಗುರುಸ್ವಾಮಿ ಎಂಬ ಹೆಸರಿನಲ್ಲಿ ಪೊಲೀಸ್ ಠಾಣೆಯ ಅಧಿಕೃತ ಮೇಲ್ ಐಡಿಗೆ ಸಂದೇಶ ಮಾಡಲಾಗಿದೆ. [email protected]  ಎಂಬ ಮೇಲ್ ನಿಂದ ಭಟ್ಕಳ ಶಹರ ಠಾಣೆಗೆ ಸಂದೇಶ ರವಾನಿಸಿದ್ದಾಗಿ ಪೊಲೀಸರ ಮಾಹಿತಿ. ಜುಲೈ10 ರ ಬೆಳಗ್ಗೆ 7-24 ಕ್ಕೆ ಇ-ಮೇಲ್ ರವಾನೆಯಾಗಿದೆ. ಇ-ಮೇಲ್ ಬಂದ ನಂತರ ಅಲರ್ಟ್ ಆದ ಭಟ್ಕಳ ಪೊಲೀಸರು ತಲಾಶ್ ನಡೆಸಿದ್ದಾರೆ. 

ಜಿಲ್ಲಾ ಬಾಂಬ್ ನಿಷ್ಕ್ರಿಯ ದಳದಿಂದಲೂ ಭಟ್ಕಳದ ಪ್ರಮುಖ ಪ್ರದೇಶಗಳಲ್ಲಿ ತಪಾಸಣೆ ನಡೆಸಲಾಗಿದೆ. ಭಟ್ಕಳ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳದಲ್ಲಿ ತಪಾಸಣೆ ಮಾಡಲಾಗಿದೆ. ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿರುವ ಭಟ್ಕಳ ಶಹರ ಠಾಣೆ PSI ನವೀನ್ ನಾಯ್ಕ, ತನಿಖೆ ಆರಂಭಿಸಿದ್ದಾರೆ. ಕಣ್ಣನ್ ಗುರುಸ್ವಾಮಿ ಹೆಸರಿನ ಸಂದೇಶದ ಕುರಿತಾಗಿ ತ‌ನಿಖೆ ನಡೆಸಿದ್ದಾರೆ.

A shocking incident has come to light in Uttara Kannada district, where an unidentified individual sent a threatening email to the Bhatkal City Police Station, claiming that the city would be blown up within 24 hours.