ಬ್ರೇಕಿಂಗ್ ನ್ಯೂಸ್
30-06-25 10:30 pm HK News Desk ಕರ್ನಾಟಕ
ಬೆಳಗಾವಿ, ಜೂನ್ 30 : ಶ್ರೀರಾಮಸೇನೆ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆಗೈದ ಪ್ರಕರಣ ಸಂಬಂಧಿಸಿ ಎಸ್‌ಪಿ ಡಾ. ಭೀಮಾಶಂಕರ ಗುಳೇದ್ ಸುದ್ದಿಗೋಷ್ಟಿ ಕರೆದು ಸ್ಪಷ್ಟನೆ ನೀಡಿದ್ದಾರೆ.
ಇಂಗಳಿ ಗ್ರಾಮದಲ್ಲಿ ದುರದೃಷ್ಟಕರ ಘಟನೆ ನಡೆದಿದೆ. ಹಲ್ಲೆಗೆ ಒಳಗಾದವರನ್ನು ಸಂಪರ್ಕ ಮಾಡಿದ್ದೇವೆ. ಅವರು ಸಿಗದೇ ಇರೋ ಹಿನ್ನೆಲೆಯಲ್ಲಿ ನಾವೇ ಸ್ವಯಂಪ್ರೇರಿತ ದೂರು ದಾಖಲು ಮಾಡಿದ್ದೇವೆ. ಜೂನ್ 26ರಂದು ಒಂದು ವಾಹನವನ್ನು ತಡೆದು ವಾಹನ ಮಾಲೀಕರು ಹಾಗೂ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ್ ಠಾಣೆಗೆ ಬರ್ತಾರೆ. ವಾಹನದಲ್ಲಿದ್ದವರು ನಾವು ಸಾಕಾಣಿಕೆ ಮಾಡಲು ಹಸುಗಳನ್ನು ಖರೀದಿ ಮಾಡಿದ್ವಿ ಎನ್ನುತ್ತಾರೆ.
ಎರಡು ಪಾರ್ಟಿಯವರು ಬರೆದು ಕೊಟ್ಟ ಪ್ರತಿಗಳು ನಮ್ಮ ಬಳಿ ಇವೆ. ಆನಂತರ ಹಸುಗಳನ್ನ ಗೋ ಶಾಲೆಗೆ ಕಳಸಿದ್ವಿ. ಮೂರು ದಿನಗಳ ಬಳಿಕ ಗೋವುಗಳನ್ನು ಬಿಡಿಸಿಕೊಂಡು ಹೋಗ್ತಾರೆ. ಬಳಿಕ ಶ್ರೀರಾಮಸೇನೆ ಸೇನೆ ಕಾರ್ಯಕರ್ತರು ಫಾಲೋ ಮಾಡಿದ್ದಾರೆ. ವಾಹನ ಮಾಲೀಕ ಬಾಬಾಸಾಬ್ ಮುಲ್ತಾನಿ ಹಸುಗಳನ್ನು ತನ್ನ ಮನೆಗೆ ಒಯ್ಯುತ್ತಾರೆ. ಮಹಿಳೆಯರು ಮನೆಯಲ್ಲಿದ್ದ ಸಂದರ್ಭದಲ್ಲಿ ಕಾರ್ಯಕರ್ತರು ಮನೆಗೆ ನುಗ್ತಾರೆ. ಬಳಿಕ ಗ್ರಾಮಸ್ಥರು ಸೇರಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡ್ತಾರೆ.
ಬಳಿಕ ಪೊಲೀಸರು ತೆರಳಿ ಕಾರ್ಯಕರ್ತರನ್ನು ಕರೆದುಕೊಂಡು ಬಂದಿದ್ದಾರೆ. ಹಲ್ಲೆಯಾದ ಬಗ್ಗೆ ಪೊಲೀಸರ ಮುಂದೆ ಶ್ರೀರಾಮಸೇನೆ ಕಾರ್ಯಕರ್ತರು ಹೇಳಿಲ್ಲ, ವಿಡಿಯೋ ಆಧರಿಸಿ ನಾವೇ ಸ್ವಯಂಪ್ರೇರಿತ ದೂರು ದಾಖಲು ಮಾಡಿದ್ದೇವೆ. ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಲ್ಲಿ ಓರ್ವ ಹಿಂದು ಹಾಗೂ ಮೂರು ಜನ ಮುಸ್ಲಿಮರು ಇದ್ದಾರೆ.
ಗೋ ಸಾಗಾಣಿಕೆ ತಡೆದವರು ಹಣ ವಸೂಲಿ ಮಾಡಿದ್ದಾರೆಂಬ ಆರೋಪ ಇದೆ. ಅದರ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಅಕ್ರಮ ಗೋವು ಸಾಗಾಣಿಕೆ ಆಗಿದ್ದರೆ ಪೊಲೀಸರಿಗೆ ಮಾಹಿತಿ ಕೊಡಬೇಕು. ತಾವೇ ಮನೆಗೆ ನುಗ್ಗುವುದು ಅಪರಾಧ. ಇದೇ ರೀತಿ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ಕೊಡದೆ ಹಲ್ಲೆ ಮಾಡಿದ್ದು ಸಹ ಅಪರಾಧ. ಘಟನೆಯಲ್ಲಿ ಕಪೋಲ ಕಲ್ಪಿತ ವರದಿಗಳು ಬಂದಿದೆ.
ಅಕ್ರಮ ಮನೆ ಪ್ರವೇಶ ಬಗ್ಗೆ ಐದು ಜನರ ಮೇಲೆ ಎಫ್ ಐ ಆರ್ ದಾಖಲಾಗಿದೆ. ಬಂಧಿತ ಶ್ರೀರಾಮಸೇನೆ ಕಾರ್ಯಕರ್ತ ಪೈಕಿ ಓರ್ವ ರೌಡಿಶೀಟರ್ ಇದ್ದಾನೆ. ಗಡಿಪಾರು ಆಗಿರೋ ರೌಡಿ ಶೀಟರ್ ಇಲ್ಲಿಗೆ ಬಂದಿದ್ದಾನೆ ಎಂದು ಹೇಳಿದ ಎಸ್ಪಿ ನಮ್ಮ ದೂರು ಸ್ವೀಕಾರ ಮಾಡಿಲ್ಲ ಎನ್ನುವ ಆರೋಪದ ಬಗ್ಗೆ, ದೂರು ಪ್ರತಿ ಇದ್ರೆ ತೋರಿಸಲಿ ಎಂದು ಹೇಳಿದ್ದಾರೆ.
Belagavi Superintendent of Police Dr. Bheemashankar S. Guled has clarified the recent incident involving an alleged attack on Sri Rama Sene activists. Addressing the media, he provided details regarding the unfortunate incident that took place in Ingali village.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
14-10-25 10:33 pm
HK News Desk
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
Kerala, IT professional dead, RSS members: ಆರ...
13-10-25 05:31 pm
14-10-25 10:36 pm
Mangalore Correspondent
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
ಬಿ.ಸಿ ರೋಡ್ ; ಹೆದ್ದಾರಿ ಬದಿ ಕಾರು ರಿಪೇರಿ ಮಾಡುತ್...
14-10-25 05:46 pm
14-10-25 04:44 pm
HK News Desk
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm