ಬ್ರೇಕಿಂಗ್ ನ್ಯೂಸ್
30-06-25 11:04 am HK News Desk ಕರ್ನಾಟಕ
ತುಮಕೂರು, ಜೂ 30 : ಕ್ಯಾಂಟರ್ ಹಾಗೂ ಕಾರು ನಡುವೆ ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿರುವ ತುಮಕೂರು ಜಿಲ್ಲೆಯ ಕುಣಿಗಲ್ ಬೈಪಾಸ್ನಲ್ಲಿ ನಡೆದಿದೆ.
ಮೃತರೆಲ್ಲರು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಮತ್ತಿಕೆರೆ ಗ್ರಾಮದವರಾಗಿದ್ದಾರೆ. ಸೀಬೆಗೌಡ, ಶೋಭಾ, ದುಂಬಿಶ್ರೀ, ಭಾನುಕಿರಣ್ ಗೌಡ ಮೃತ ದುರ್ದೈವಿಗಳು. ಮಗನನ್ನು ಹಾಸ್ಟೆಲ್ಗೆ ಬಿಟ್ಟು ಬರಲು ಹೋಗುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಮೃತ ಸೀಬೆಗೌಡ ಅವರಿಗೆ ಮೂವರು ಮಕ್ಕಳು. ವರ್ಣಶ್ರೀ, ದುಂಬಿಶ್ರೀ, ಭಾನುಕಿರಣ್ ಗೌಡ.
ಮೃತ ಸಿಬೇಗೌಡ ಅವರ ಮಗ ಭಾನುಕಿರಣ್ ಗೌಡ ಕುಣಿಗಲ್ ಹೊರವಲಯದ ಬಿದನಗೆರೆ ಬಳಿಯಿರುವ ವ್ಯಾಲಿ ಸ್ಕೂಲ್ನಲ್ಲಿ 8ನೇ ತರಗತಿ ಓದುತ್ತಿದ್ದ. ಭಾನುವಾರ ರಜೆ ಹಿನ್ನೆಲೆ ಮನೆಗೆ ಮಗ ಬಂದಿದ್ದ. ನಿನ್ನೆ ಊಟ ಮುಗಿಸಿ ಮಗನನ್ನು ಶಾಲೆಯ ಹಾಸ್ಟೆಲ್ಗೆ ಬಿಟ್ಟು ಬರಲು ಮಗ ಭಾನುಕಿರಣ್ನೊಂದಿಗೆ ಸಿಬೇಗೌಡ, ಅವರ ಪತ್ನಿ ಶೋಭಾ, 2ನೇ ಮಗಳು ದುಂಬಿಶ್ರೀ ಹೊರಟಿದ್ದರು.
ಮೃತ ಸಿಬೇಗೌಡರು ಕಾರು ಚಾಲನೆ ಮಾಡಿಕೊಂಡು ಬರುತ್ತಿದ್ದರು. ಈ ವೇಳೆ, ಕುಣಿಗಲ್ ಬೈಪಾಸ್ ಬಳಿ ಯುಟರ್ನ್ ತೆಗೆದುಕೊಳ್ಳಲು ಒನ್ ವೇಯಲ್ಲಿ ವೇಗವಾಗಿ ಬಂದ ಕ್ಯಾಂಟರ್ ಕಾರಿಗೆ ಡಿಕ್ಕಿ ಹೊಡೆದಿದೆ. ರಭಸಕ್ಕೆ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಹಿರಿಯ ಮಗಳು ವರ್ಣಶ್ರೀ ಬೆಂಗಳೂರಿನ ದಯಾನಂದ ಸಾಗರ ಕಾಲೇಜಿನಲ್ಲಿ ಓದುತ್ತಿದ್ದಾರೆ. ದುಂಬಿಶ್ರೀ, ಬೆಂಗಳೂರಿನ ಗ್ಲೋಬಲ್ ಕಾಲೇಜಿನಲ್ಲಿ ಓದುತ್ತಿದ್ದರು. ಮಗನನ್ನು ಕರೆದುಕೊಂಡು ಹೋಗುವ ಮೊದಲು ಹಿರಿಯ ಮಗಳು ವರ್ಣಶ್ರೀಯನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದರು.
ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
In a heartbreaking accident, four members of a single family lost their lives in a car and canter collision on National Highway 75 near the Kunigal bypass in Tumakuru district. The victims were returning after dropping their son at a school hostel.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
14-10-25 10:33 pm
HK News Desk
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
Kerala, IT professional dead, RSS members: ಆರ...
13-10-25 05:31 pm
14-10-25 10:36 pm
Mangalore Correspondent
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
ಬಿ.ಸಿ ರೋಡ್ ; ಹೆದ್ದಾರಿ ಬದಿ ಕಾರು ರಿಪೇರಿ ಮಾಡುತ್...
14-10-25 05:46 pm
14-10-25 04:44 pm
HK News Desk
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm