ಬ್ರೇಕಿಂಗ್ ನ್ಯೂಸ್
09-06-25 04:41 pm HK News Desk ಕರ್ನಾಟಕ
ಚಿತ್ರದುರ್ಗ, ಜೂ 09: ಎರಡನೇ ಮದುವೆಗೆ ಹಸೆಮಣೆಗೆ ಏರಲು ಸಿದ್ಧವಾಗಿದ್ದ ಪತಿಗೆ ಮೊದಲ ಪತ್ನಿ ಚಪ್ಪಲಿ ಏಟು ಕೊಟ್ಟ ಘಟನೆ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆಯ ರೂಪನಗರ ಗ್ರಾಮದ ಕಾರ್ತಿಕ್ ನಾಯ್ಕ ಎರಡನೇ ಮದುವೆಗೆ ಮುಂದಾಗಿದ್ದ ಆರೋಪಿ.
ಆರೋಪಿ ಕಾರ್ತಿಕ್ ನಾಯ್ಕ ಎರಡನೇ ಮದುವೆ ಮಾಡಿಕೊಳ್ಳಲು ಮುಂದಾಗಿದ್ದ ಯುವತಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಚಿತ್ರದುರ್ಗ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಾರ್ತಿಕ್ ನಾಯ್ಕ್, ಪೋಷಕರಾದ ಮಹೇಶ್ ನಾಯ್ಕ್, ವೈಶಾಲಿ ಹಾಗೂ ಸಹೋದರಿ ಮೇಘಶ್ರೀ ಅವರನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.
ತನ್ನನ್ನು ಕಾರ್ತಿಕ್ ಮೋಹನ್ ನಾಯ್ಕ್ ಎಂದು ಹೇಳಿಕೊಂಡಿದ್ದ ಆರೋಪಿ, ಪೋಷಕರನ್ನು ಮೋಹನ್ ಮಹೇಶ್ ನಾಯ್ಕ್ ಹಾಗೂ ವಿಶಾಲಾಕ್ಷಿ ಎಂದು ಪರಿಚಯಿಸಿದ್ದ. ಅಲ್ಲದೇ, ಬ್ರೋಕರ್ ಕೂಡ ವಧುವಿನ ಕಡೆಯವರಿಂದ ಎಲ್ಲ ವಿಚಾರಗಳನ್ನೂ ಮುಚ್ಚಿಟ್ಟು, ಹುಡುಗ ತುಂಬಾ ಒಳ್ಳೆಯವನು, ಯಾವುದೇ ದುಶ್ಚಟವಿಲ್ಲ ಎಂದು ನಂಬಿಸಿದ್ದ. ಕಾರ್ತಿಕ್ ಕೂಡ ಯುವತಿಯ ಮನೆಯವರೊಂದಿಗೆ ನಂಬಿಕೆ ಬರುವಂತೆ ಮಾತನಾಡಿಕೊಂಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೇ, ಮದುವೆಗೂ ಮುನ್ನವೇ ಕಾರ್ತಿಕ್ ಕಡೆಯವರು ಮದುವೆಗೆ ಹಣದ ಅಗತ್ಯತೆ ಇದೆ. ಬಳಿಕ ಮರಳಿಸುತ್ತೇವೆ ಎಂದು ಹೇಳಿ ಯುವತಿ ಕಡೆಯವರಿಂದ ಐದು ಲಕ್ಷ ರೂ. ಸಾಲ ಪಡೆದಿದ್ದರು. ಜೊತೆಗೆ, ಕಲ್ಯಾಣ ಮಂಟಪದ ಖರ್ಚು ಸೇರಿದಂತೆ ಮದುವೆಗೆ ಲಕ್ಷಾಂತರ ರೂ. ವ್ಯಯಿಸಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಮದುವೆ ಸಂದರ್ಭದಲ್ಲಿ ದಾವಣಗೆರೆಯೆ ನ್ಯಾಮತಿಯ ಮೊದಲ ಪತ್ನಿ ಏಕಾಏಕಿ ಮಧ್ಯೆ ಪ್ರವೇಶಿಸಿ ಹೇಳಿದ ಬಳಿಕವೇ ಕಾರ್ತಿಕ್ಗೆ ಈಗಾಗಲೇ 2021ರಲ್ಲೇ ವಿವಾಹವಾಗಿದೆ ಎಂಬ ವಿಚಾರ ಗೊತ್ತಾಯಿತು. ಅಲ್ಲದೇ, ಆತ ತನ್ನ ಹಾಗೂ ಮನೆಯವರ ಹೆಸರು ಬದಲಾಯಿಸಿ ಮೋಸ ಮಾಡಿರುವುದು ಸಹ ಮೊದಲ ಪತ್ನಿಯಿಂದ ತಿಳಿಯಿತು. ಮೊದಲೇ ಮದುವೆಯಾಗಿರುವ ವಿಚಾರವನ್ನು ಮರೆಮಾಚಿ, ನಮ್ಮಿಂದ 5 ಲಕ್ಷ ರೂ. ಪಡೆದಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
Drama at Wedding Hall, First Wife Storms Venue, Thrashes Groom Attempting Second Marriage in Chitradurga
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
15-10-25 12:09 pm
HK News Desk
ಟ್ರಂಪ್ ಒತ್ತಡ ನಡುವೆಯೇ ಭಾರತದಲ್ಲಿ ಗೂಗಲ್ ಸಂಸ್ಥೆ ಭ...
14-10-25 10:33 pm
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
15-10-25 12:12 pm
Udupi Correspondent
ಮೈಸೂರು, ಬೆಂಗಳೂರು, ಶಿವಮೊಗ್ಗ ಕಂಬಳಕ್ಕೆ ಹೈಕೋರ್ಟ್...
14-10-25 10:36 pm
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
15-10-25 12:00 pm
HK News Desk
ಅಮಲಿಗಾಗಿ ಯುವಕರಿಗೆ ಕಫ್ ಸಿರಪ್ ಮಾರಾಟ ದಂಧೆ ; ದಾವಣ...
14-10-25 04:44 pm
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm