ಬ್ರೇಕಿಂಗ್ ನ್ಯೂಸ್
19-12-20 04:04 pm Headline Karnataka News Network ಕರ್ನಾಟಕ
ಬೆಂಗಳೂರು, ಡಿ.19: ಹೋರಾಟದ ಹೆಸರಿನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಅಕ್ರಮ ಆಸ್ತಿ ಮಾಡಿದ್ದಾರೆ. ಸರಕಾರಗಳನ್ನು ಬ್ಲಾಕ್ ಮೇಲ್ ಮಾಡಿಸಿ, ಐಷಾರಾಮಿ ಕಾರು, ಬಂಗಲೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸರಕಾರ ತನಿಖೆ ನಡೆಸಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ಕೋಡಿಹಳ್ಳಿ ನಕಲಿ ರೈತ ಹೋರಾಟಗಾರ. ಹಸಿರು ಶಾಲು ಹಾಕಿಕೊಂಡು ರೈತರನ್ನು ವಂಚಿಸುವ ದಲ್ಲಾಳಿ. ಸಿದ್ದರಾಮಯ್ಯ, ಕುಮಾರಸ್ವಾಮಿ ಸರಕಾರ ಇದ್ದಾಗ ಮೈಸೂರು, ಮಂಡ್ಯದಲ್ಲಿ ರೈತರು ಸಾವಿಗೆ ಶರಣಾದಾಗ, ಈ ರೈತ ನಾಯಕ ತುಟಿಗೆ ಬೀಗ ಹಾಕಿಕೊಂಡಿದ್ದ. ಇವನ ಹೆಸರಿನಲ್ಲಿ ಹಿಂದೆ ಎರಡು ಎಕರೆ ಆಸ್ತಿ ಇದ್ದದ್ದು ಈಗ ಕೋಟ್ಯಂತರ ಆಸ್ತಿ ಮಾಡಿದ್ದಾನೆ. ಅದು ಎಲ್ಲಿಂದ ಬಂತು ಎನ್ನೋದನ್ನು ರಾಜ್ಯದ ಜನರಿಗೆ ಹೇಳಬಹುದಾ..? ಬೆಂಗಳೂರಿನಲ್ಲಿ ಬಂಗಲೆ ಕಟ್ಟಿಕೊಂಡು ವಾಸ್ತವ್ಯ ಹೂಡಿರುವ ನೀನು ಯಾವ ಸೀಮೆಯ ರೈತ ನಾಯಕ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಈವರೆಗೆ ರೈತರಿಗೆ ದ್ರೋಹ ಮಾಡಿದ್ದೀಯಾ.. ಈಗ ಸಾರಿಗೆ ನೌಕರರ ಜೊತೆ ಸೇರಿ ಸರಕಾರದ ವಿರುದ್ಧ ಎತ್ತಿಕಟ್ಟುತ್ತೀಯಾ.. ನಾಲ್ಕು ದಿನ ಬಸ್ ಸಂಚಾರ ಸ್ಥಗಿತಗೊಳಿಸಿ ರಾಜ್ಯದ ಜನರಿಗೆ ಆಗಿರುವ ನಷ್ಟಕ್ಕೆ ಈತನೇ ಕಾರಣ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವುದಕ್ಕೆ ಈತ ಕಾಂಗ್ರೆಸಿನವರ ಜೊತೆ ಸೇರಿ ರೈತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾನೆ ಎಂದು ಮೂದಲಿಸಿದರು.

200 ಜನರಿಗೆ ಮೋಸ ಮಾಡಿ ಅಕ್ರಮ ಆಸ್ತಿ
ಬೆಂಗಳೂರು ನಗರದ ಆರ್ ಪಿಸಿ ಬಡಾವಣೆಯಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಹೇಳಿ 2012ರಲ್ಲಿ 200ಕ್ಕಿಂತಲೂ ಹೆಚ್ಚು ಮಂದಿಗೆ ಮೋಸ ಮಾಡಿದ್ದೀಯಾ.. ಪ್ರತಿ ಕುಟುಂಬದಿಂದ 3ರಿಂದ 6 ಲಕ್ಷ ರೂ. ಪಡೆದು ಮೋಸ ಮಾಡಿದ್ದಾನೆ. ಭೈರಯ್ಯ ಎಂಬವರಿಂದ ಆರು ಲಕ್ಷ ರೂ. ಪಡೆದು ಮೋಸ ಆಗಿರುವ ಬಗ್ಗೆ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಗ ಸಿದ್ದರಾಮಯ್ಯ ಸರಕಾರ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬೆಂಬಲಿಸಿತ್ತು. ಹಣ ಕೇಳಿದ ಭೈರಯ್ಯ ವಿರುದ್ಧ ಗೂಂಡಾಗಿರಿ ನಡೆಸಿದ್ದರು. ಆಬಳಿಕ ಬೈರಯ್ಯರಿಗೆ 1.50 ಲಕ್ಷ ರೂ. ಕೊಟ್ಟಿದ್ದ. ಹೀಗೆ 200 ಮಂದಿಯ ಹಣ ಪಡೆದು ಮೋಸ ಮಾಡಿದ್ದಾನೆ ಎಂದು ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದ್ದಾರೆ.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
14-10-26 04:36 pm
HK News Staffer
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm