ಬ್ರೇಕಿಂಗ್ ನ್ಯೂಸ್
13-01-25 06:21 pm Mangaluru Correspondent ಕರ್ನಾಟಕ
ಹಾಸನ, ಜ.13: ನನ್ನ ಸಾವಿಗೆ ಪ್ರೀತಿಸಿದ ಯುವತಿಯೇ ಕಾರಣ ಎಂದು ವಿಡಿಯೋ ಮಾಡಿ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಕಲೇಶಪುರದಲ್ಲಿ ನಡೆದಿದೆ. ಡಿ.26ರಂದು ಸಕಲೇಶಪುರ ಬಾಳೆಗದ್ದೆ ನಿವಾಸಿ ಕವನ್ (30) ವಿಡಿಯೋ ಮಾಡಿ ವಿಷ ಕುಡಿದಿದ್ದು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ.11ರಂದು ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ನನ್ನ ಸಾವಿಗೆ ಅಂಜಲಿ ಕಾರಣ. 2021 ರಲ್ಲಿ ನನ್ನ ಮನೆ ಹಿಂದೆ ಆಕೆ ವಾಸವಿದ್ದಳು. ನನ್ನ ಲೈಫ್ ನಲ್ಲಿ ಬಂದಳು. ನಾವು ಪರಸ್ಪರ ಪ್ರೀತಿಸುತ್ತಿದ್ದೆವು. ನಮ್ಮ ನಡುವೆ A ಟು Z ಎಲ್ಲಾ ಆಗಿದೆ. ನೀನು ನನಗೆ ಬೇಕೆ ಬೇಕು ಅಂತ ಹಠ ಹಿಡಿದಿದ್ದಳು. ಆನಂತರ ಅವಳ ನಡವಳಿಕೆ ಸರಿಯಿಲ್ಲ ಎಂದು ತಿಳಿದು ದೂರ ಆಗಿದ್ದೆ. 2024 ರಲ್ಲಿ ನನ್ನ ಮೇಲೆ ಪೋಲಿಸ್ ಠಾಣೆಗೆ ದೂರು ನೀಡಿದ್ದಳು.
ಆದರೆ ಹುಡುಗಿಯರು ಏನೇ ಮಾಡಿದ್ರು ಪೊಲೀಸರಿಗೆ ಲೆಕ್ಕಕ್ಕೆ ಬರಲ್ಲ. ಗಂಡು ಮಕ್ಕಳು ಮಾತ್ರ ಕೆಟ್ಟವರು. ಆ ಹೆಣ್ಣು ಏನು ಎಂದು ಇಡೀ ಸಕಲೇಶಪುರ ಪೊಲೀಸರಿಗೆ ಗೊತ್ತು. ಅಂಜಲಿ ಏನು ಅಂತ ಗೊತ್ತಿದ್ದರು ಪೊಲೀಸರು ಅವಳ ಬೆಂಬಲಕ್ಕೆ ನಿಂತರು, ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ. ಇವಳ ವಿಷಯದಿಂದಾಗಿ ಅಪ್ಪ, ಅಮ್ಮ ಎಲ್ಲಾ ನನ್ನ ಬಿಟ್ಟಿದ್ದಾರೆ. ಆಮೇಲೆ ಕೇಸು ವಾಪಾಸ್ ತಗೊಂಡ್ಲು. ನನ್ನ ಪಾಡಿಗೆ ನಾನು ಇದ್ದೆ. ಮತ್ತೆ ಬಂದು ನನ್ನ ಲೈಫ್ ಹಾಳು ಮಾಡಿದ್ಲು. ಇವತ್ತು ಒಂದು ದಿನ ನನ್ನ ಜೊತೆ ಇರು ಅಂತ ಮೈಸೂರಿಗೆ ಕರೆದುಕೊಂಡು ಹೋಗಿದ್ದಳು. ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಹೋಗಿದ್ಲು. ನನ್ನ ವೀಕ್ನೆಸ್ ಅವಳಿಗೆ ಗೊತ್ತಿತ್ತು. ನಾನು ಕುಡಿದರೆ ಮೇಲೇಳಲ್ಲ ಅಂತ ತಿಳಿದಿತ್ತು.
ಮೊಬೈಲ್ಗೆ ಫಿಂಗರ್ ಪ್ರಿಂಟ್ ಇಟ್ಟು ನಾನು ತಪ್ಪು ಮಾಡಿದ್ದೆ, ಪ್ಯಾಟ್ರನ್ ಇಟ್ಟಿದ್ರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ. ನನ್ನ ಲೈಫ್ ಹಾಳು ಮಾಡಿ 307 ಕೇಸ್ ಮಾಡ್ಸಿದ್ಳು. ನನ್ನ ಮೊಬೈಲ್ನಲ್ಲಿ ಪರ್ಸನಲ್ ಫೋಟೋ ತಗೊಂಡು ಇನ್ನೊಬ್ಬರ ಹೆಂಡ್ತಿಗೆ ಕಳ್ಸಿದ್ದಾಳೆ. ಅದು ಎಲ್ಲೆಲ್ಲೋ ಹೋಗಿ ಏನೇನೋ ಆಯ್ತು, ಗಲಾಟೆ ಆಯ್ತು. ನಾನು ಸಾಯಲು ಇಷ್ಟೇ ಕಾರಣ. ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಯಾವುದನ್ನು ಸರಿಯಾಗಿ ತನಿಖೆ ಮಾಡಲ್ಲ. ಸ್ಟೇಷನ್ನಲ್ಲಿ ಎಲ್ಲಾ ಗೊತ್ತಿದೆ, ಅವಳು ಎಂಥವಳು ಅಂತ. ಅವಳ ಮೇಲೆ ಕಂಪ್ಲೆಂಟ್ ಕೊಡಲು ಬಂದಾಗ ತನಿಖೆ ಮಾಡಲ್ಲ. ಏಕೆಂದರೆ ಅವಳು ಹೆಣ್ಣು ನಾನು ಗಂಡು.
ಡಿ.12 ರಂದು ವಿನಯ್ ನನ್ನ ಮೇಲೆ ಕಂಪ್ಲೆಂಟ್ ಕೊಟ್ಟ. ಅಂಜಲಿ ಕಳ್ಸಿರೋ ಫೋಟೋ ಇಟ್ಕಂಡು ನಮ್ಮ ಮನೆಯವರನ್ನು ವಿನಯ್ ದೂರ ಮಾಡ್ದ. ನನ್ನದು ತಪ್ಪಿದೆ, ನನ್ನ ಪರ್ಸನಲ್ ಫೋಟೋ ಯಾರಿಗೂ ಕಳಿಸಬೇಡಿ. ನಾನು ಬಂದು ಕ್ಷಮೆ ಕೇಳ್ತಿನಿ ಅಂತ ವಿನಯ್ಗೆ ಹೇಳ್ದೆ. ಆದರೆ ಗಲಾಟೆ ಮಾಡಿ ದೊಡ್ಡದು ಮಾಡಿದ. ಅಂಜಲಿ ಕಳಿಸಿರುವ ಫೋಟೋ ಟಿವಿಲಿ ಬರಬಹುದು. ನನ್ನ ಮೊಬೈಲ್ನಿಂದ ವ್ಯಾಟ್ಸಪ್ ಮೂಲಕ ನನ್ನ ಫೋಟೋ ತೆಗೆಸಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣ ಅವರದ್ದು ಆದರೆ ಮಾತ್ರ ನ್ಯೂಸ್. ಕಾಮನ್ ಪೀಪಲ್ಸ್ ಬೆಲೆ ಇಲ್ವಾ, ಮೊದಲು ನ್ಯಾಯ ಕೊಡ್ಸಿ. ಈ ಸೂಳೆ ಮುಂಡೆ ಅಂಜಲಿ ಕರ್ಕಂಡು ಬಂದು ತಪ್ಪು ಮಾಡಿದೆ. ನನ್ನ ಸಂಸಾರ ರೋಡಿಗೆ ಬಂತು. ವಿನಯ್ ಅವನ ಹೆಂಡ್ತಿ ವೀಣಾ ಮೇಲೆ ಕಂಪ್ಲೆಂಟ್ ಕೊಟ್ಟ. ಅವರು ನೆಮ್ಮದಿಯಾಗಿದ್ದಾರೆ ಈಗ. ನಾನೇನು ತಪ್ಪು ಮಾಡಿದೆ, ವೀಣಾ ಏನು ತಪ್ಪು ಮಾಡಿದ್ಲು. ನಮ್ಮನ್ನು ರೋಡಿಗೆ ಏಕೆ ತಂದ್ರಿ.
ಸ್ಟೇಷನ್ನಲ್ಲಿ ಸೆಟ್ಲಮೆಂಟ್ ಆಗಬೇಕಿತ್ತು. ಆದರೆ ಪೊಲೀಸರು ಮಾಡಲಿಲ್ಲ. ಪೊಲೀಸರಿಗೆ ಕೇಸ್ ಬೇಕಿತ್ತು. ನಾನು ಏನು ತಪ್ಪು ಮಾಡಿದೆ ಅಂತ ಈ ಶಿಕ್ಷೆ. ನನ್ನ ಸಾವಿಗೆ ಕಾರಣ ಅಂಜಲಿ ಮತ್ತು ವಿನಯ್ ಗೌಡ ಕಾರಣ. ವಿನಯ್ ಪತ್ನಿ ವೀಣಾ ನನಗೆ ತೊಂದರೆ ಕೊಟ್ಟಿಲ್ಲ. ವಿನಯ್ ನನಗೆ ಏನೆಲ್ಲಾ ಬೆದರಿಕೆ ಹಾಕಿದ್ದ. ನನ್ನ ಸಾವಿಗೆ ನನ್ನ ಮನೆಯವರು, ಅಣ್ಣ, ತಮ್ಮ, ಅಕ್ಕ, ತಂಗಿ, ಸ್ನೇಹಿತರು ಯಾರು ಕಾರಣ ಅಲ್ಲ, ವೀಣಾ ಅಲ್ಲ. ವಿನಯ್, ವಿನಯ್ ಮತ್ತು ಅಂಜಲಿ ಕಾರಣ. ಅಂಜಲಿ ಫೋಟೋ ಕಳ್ಸಿ ಇಷ್ಟೆಲ್ಲಾ ಮಾಡಿದ್ಲು ಎಂದು ಕವನ ತಾನು ವಿಷ ಸೇವಿಸುವ ಮುನ್ನ ಕಾರಿನಲ್ಲಿ ಕುಳಿತು ವಿಡಿಯೋ ಮಾಡಿದ್ದಾನೆ.
ಕವನ ಸಕಲೇಶಪುರ ತಾಲ್ಲೂಕಿನ, ಬಾಳೆಗದ್ದೆ ಗ್ರಾಮದವನಾಗಿದ್ದು ವಿನಯ್ ಗೌಡ ಆನೆಮಹಲ್ ನಿವಾಸಿ. ಯುವಕನ ಸಾವಿನ ಬೆನ್ನಲ್ಲೇ ಆತ್ಮಹತ್ಯೆ ಮುನ್ನ ಮಾಡಿದ್ದ ವಿಡಿಯೋ ಹೊರಬಂದಿದೆ.
Love failure, 30 year old youth from Hassan commits suicide in Mangalore making allegations against his girl saying she's the reason for his death. The deceased has been identified as Kavan.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm