ಬ್ರೇಕಿಂಗ್ ನ್ಯೂಸ್
09-01-25 04:54 pm Bangalore Correspondent ಕರ್ನಾಟಕ
ಬೆಂಗಳೂರು, ಜ 09: ಶಾಸಕ ಎಸ್ಟಿ ಸೋಮಶೇಖರ್ ಡಿಕೆ ಶಿವಕುಮಾರ್ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದನ್ನು ಲೇವಡಿ ಮಾಡಿದ್ದ ವಿಜಯಪುರ ಶಾಸಕ ಯತ್ನಾಳ್ ವಿರುದ್ಧ ಶಾಸಕ ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೀ.. ಯತ್ನಾಳ್ಗೆ ಉಗೀರಿ ಮುಖಕ್ಕೆ
ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ ಎಸ್ಟಿ ಸೋಮಶೇಖರ್, ರೀ.. ಯತ್ನಾಳ್ಗೆ ಉಗೀರಿ ಮುಖಕ್ಕೆ. ಯತ್ನಾಳ್ ಅವರದ್ದು ನೋಡಿಕೊಳ್ಳಲಿ. ಡಿಕೆ ಶಿವಕುಮಾರ್ಗೂ ಯತ್ನಾಳ್ ಗೂ ಏನು ಸಂಬಂಧ?. ಶಿವಕುಮಾರ್ ಅವರು, ಯತ್ನಾಳ್ ವಿರುದ್ಧ ಕನಕಪುರದಲ್ಲಿ ಕೇಸ್ ಹಾಕಿದ್ದಾರೆ. ಮೊದಲು ಯತ್ನಾಳ್ ಗೆ ಆ ಕೇಸ್ ಅಟೆಂಡ್ ಮಾಡಲು ಹೇಳಿ. ಡಿಕೆ ಶಿವಕುಮಾರ್ ಅವರನ್ನು ಟೀಕೆ ಮಾಡುವ ಬದಲು ನಿನ್ನದೇ ನೂರೆಂಟು ಇದೆ ಅದನ್ನು ನೋಡಿಕೋ ಎಂದರು.
ಡಿಕೆಶಿಯನ್ನು ಹೊಗಳುವ ತೆಗಳುವ ಕೆಲಸ ನಿನ್ನದಲ್ಲ ;
ಡಿಕೆಶಿಯನ್ನು ಹೊಗಳುವ ತೆಗಳುವ ಕೆಲಸ ನಿನ್ನದಲ್ಲ. ಈಗ ವಕ್ಫ್, ವಿಜಯೇಂದ್ರ ಬಗ್ಗೆ ಏನೋ ಮಾಡ್ತಾ ಇದ್ದೀಯಲ್ಲ ಅದನ್ನು ನೆಮ್ಮದಿಯಾಗಿ ಮಾಡು. ಡಿಕೆ ಶಿವಕುಮಾರ್ ಬಗ್ಗೆ ನೀನು ಯಾಕೆ ತಲೆಕಡೆಸಿಕೊಳ್ಳುತ್ತೀಯ? ಅವರು ಟೆಂಪಲ್ ಗೆ ಹೋಗ್ತಾರೋ, ಜ್ಯೋತಿಷಿ ಬಳಿ ಹೋಗ್ತಾರೋ ನಿನಗ್ಯಾಕೆ ಅದು. ಅದು ಅವರ ಹಣೆಬರಹ. ನಿನಗೆ ಡಿಕೆಶಿ ಬಗ್ಗೆ ಪದೇ ಪದೆ ಮಾತನಾಡಲು ಯಾರು ಹೇಳಿದ್ದು? ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಬಿ.ವೈ.ವಿಜಯೇಂದ್ರ ಪರ ಎಸ್.ಟಿ.ಸೋಮಶೇಖರ್ ಬ್ಯಾಟಿಂಗ್
ಇನ್ನೂ ಇದೇ ಸಂದರ್ಭದಲ್ಲಿ ಬಿ.ವೈ.ವಿಜಯೇಂದ್ರ ಪರ ಎಸ್.ಟಿ.ಸೋಮಶೇಖರ್ ಬ್ಯಾಟ್ ಬೀಸಿದ್ದಾರೆ. ವಿಜಯೇಂದ್ರ ಒಬ್ಬ ಹುಟ್ಟು ಹೋರಾಟಗಾರ. ಅವರನ್ನು ತುಂಬಾ ವರ್ಷದಿಂದ ಹತ್ತಿರದಿಂದ ನೋಡಿದ್ದೇನೆ. ಉಪಚುನಾವಣೆಯಲ್ಲಿ ಎಲ್ಲೆಲ್ಲಿ ಜವಾಬ್ದಾರಿ ಕೊಟ್ಟಿದ್ದಾರೆ ಅಲ್ಲೆಲ್ಲ ಗೆಲ್ಲಿಸಿಕೊಂಡು ಬಂದಿದ್ದಾರೆ. ವಿಜಯೇಂದ್ರ ಎಲ್ಲೂ ದ್ವೇಷದ ರಾಜಕಾರಣ ಮಾಡಿರುವುದು ನಾನು ನೋಡಿಲ್ಲ. ಯಾರ ಮೇಲೂ ಎತ್ತಿ ಕಟ್ಟುವ ದ್ವೇಷದ ರಾಜಕಾರಣ ಮಾಡಿರುವುದನ್ನು ನೋಡಿಲ್ಲ ಎಂದರು.
ಎಲ್ಲರೂ ಅವರಿಗೆ ಗೌರವ ಕೊಡಬೇಕು
ವಿಜಯೇಂದ್ರ ಅವರು ಎಲ್ಲಾ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದನ್ನು ನೋಡಿದ್ದೇನೆ. ಹೈಕಮಾಂಡ್ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ. ಎಲ್ಲರೂ ಅವರಿಗೆ ಗೌರವ ಕೊಡುವ ಕೆಲಸ ಮಾಡಬೇಕು. ಹೈಕಮಾಂಡ್ ನೇಮಕ ಮಾಡಿದ ಮೇಲೆ ವಿರೋಧ ಮಾಡುವ ಹಕ್ಕು ಯಾರಿಗೂ ಇಲ್ಲ. ಅಂತರಿಕವಾಗಿ ಆ ಬಗ್ಗೆ ಹೇಳುವ ಅವಕಾಶ ಇದೆ. ಆದರೆ, ಬಹಿರಂಗವಾಗಿ ಮಾಧ್ಯಮದವರ ಮುಂದೆ ಹೇಳುವ ಹಕ್ಕು ಯಾರಿಗೂ ಇಲ್ಲ ಎಂದರು.
ಬಂಡಾಯ ಶಮನವಾಗದಿದ್ದರೆ ಸಮಸ್ಯೆ
ಬಂಡಾಯ ನಾಯಕರಿಗೆ ಯಾರದ್ದು ಬೆಂಬಲ ಇದೆಯೋ ಇಲ್ಲವೋ ಗೊತ್ತಿಲ್ಲ. ಯಡಿಯೂರಪ್ಪ ಸಿಎಂ ಇದ್ದಗಲೂ ಇದೇ ರೀತಿ ವಿರೋಧ ಇತ್ತು. ಆಗ ಕಂಟ್ರೋಲ್ ಆಗಲಿಲ್ಲ. ಕಂಟ್ರೋಲ್ ಆಗದೇ ಇದ್ದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಕಷ್ಟ ಆಗಲಿದೆ ಎಂದು ಬೇಸರ ಹೊರಹಾಕಿದರು.
ದೇವರ ಮೊರೆ ಹೋದ ಡಿಕೆ ಶಿವಕುಮಾರ್! ತಮಿಳುನಾಡಿನ ದೇವಸ್ಥಾನದಲ್ಲಿ ವಿಶೇಷ ಪೂಜೆ
ಡಿಸಿಎಂ ಡಿಕೆ ಶಿವಕುಮಾರ್ ಗುರುವಾರ ತಮಿಳುನಾಡಿನ ಕುಂಭಕೋಣಂ ಜಿಲ್ಲೆಯ ಅಯ್ಯಾವುಡಿಯಲ್ಲಿರುವ ಪ್ರಾಚೀನ ಪ್ರತ್ಯಂಗಿರಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಉಗ್ರ ಸ್ವರೂಪಿಣಿ ಪ್ರತ್ಯಂಗಿರಾ ದೇವಿಯ ದರ್ಶನ ಪಡೆದರು. ಈ ದೇವಾಲಯ ಅತ್ಯಂತ ಪ್ರಾಚೀನವಾದ್ದಾಗಿದ್ದು, ಬಹಳ ಪ್ರಸಿದ್ಧಿ ಪಡೆದಿದೆ.
ಪ್ರತ್ಯಂಗಿರಾ ದೇವಿಗೆ ಮಾಡುವ ಪೂಜೆ, ಹೋಮವು ಅತ್ಯಂತ ಶಕ್ತಿಶಾಲಿ ಎಂಬ ನಂಬಿಕೆ ಭಕ್ತರಲ್ಲಿದೆ. ಪ್ರತ್ಯಂಗಿರಾ ದೇವಿಯ ಆಶೀರ್ವಾದದಿಂದ ನಮಗೆ ಯಾವುದೇ ನಕಾರಾತ್ಮಕ ಶಕ್ತಿ ಅಥವಾ ದುಷ್ಟ ಶಕ್ತಿ ತೊಂದರೆಯನ್ನು ನೀಡುವುದಿಲ್ಲ ಎಂಬ ನಂಬಿಕೆ ತಮಿಳುನಾಡು ಹಾಗೂ ಕೇರಳದ ಭಕ್ತರಲ್ಲಿದೆ. ಪ್ರತ್ಯಂಗಿರಾ ಹೋಮವನ್ನು ಯಾವ ಸ್ಥಳದಲ್ಲಿ ಮಾಡುತ್ತೇವೋ, ಆ ಸ್ಥಳದಲ್ಲಿ ಎಂದಿಗೂ ಕೂಡ ನಕಾರಾತ್ಮಕ ಶಕ್ತಿಗಳು ಪ್ರವೇಶವನ್ನು ಪಡೆಯುವುದಿಲ್ಲ ಎಂಬ ನಂಬಿಕೆ ಇದೆ.
S T Somashekar slams Yatnal for mocking DK Shivakumar temple visist, says to spit on yatnals face for mocking against DK.
15-03-25 12:33 pm
HK News Desk
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 01:47 pm
Mangalore Correspondent
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm