ಬ್ರೇಕಿಂಗ್ ನ್ಯೂಸ್
22-12-24 10:23 am HK News Desk ಕರ್ನಾಟಕ
ಬಾಗಲಕೋಟೆ, ಡಿ 22: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅಶ್ಲೀಲ ಪದ ಬಳಕೆ ಆರೋಪದಲ್ಲಿ ಬಂಧಿತರಾಗಿದ್ದ ಪರಿಷತ್ ಸದಸ್ಯ ಸಿ ಟಿ ರವಿ ಅವರು ಜಾಮೀನು ಪಡೆದು ಹೊರ ಬಂದಬಳಿಕ ತಮ್ಮನ್ನು ಎನ್ಕೌಂಟರ್ ಮಾಡುವ ಹುನ್ನಾರ ಇತ್ತು ಎಂದು ಸ್ಪೋಟಕ ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.
ಒಬ್ರನ್ನ ಎನ್ಕೌಂಟರ್ ಮಾಡಿ, ಬಿಜೆಪಿಯಲ್ಲಿ ಭಯ ಸೃಷ್ಟಿಸುವ ಯತ್ನ ;
ಬಾಗಲಕೋಟೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಟಿ ರವಿ ಕೇವಲ ಅವಹೇಳನಕಾರಿ ಶಬ್ದ ಬಳಸಿದ ಮಾತ್ರಕ್ಕೆ ಎನ್ಕೌಂಟರ್ ಮಾಡ್ತಾರೆ ಎಂದರೆ ಹೇಗೆ? ಅದು ಒಂದೇ ಕಾರಣ ಅಲ್ಲ ಅಂತ ನಾನು ಹೇಳುವುದಿಲ್ಲ. ಈ ರೀತಿ ಒಬ್ಬರನ್ನು ಎನ್ಕೌಂಟರ್ ಮಾಡಿಬಿಟ್ಟರೆ ಬಿಜೆಪಿ ಯಾವುದೇ ಆಕ್ಟಿವಿಟಿ ಮಾಡಲ್ಲ. ಹೆದರಿಕೊಂಡು ಬಿಡುತ್ತಾರೆ ಅಂತ ಭಯ ಸೃಷ್ಟಿ ಮಾಡುವ ಪ್ರಯತ್ನವನ್ನ ಸರ್ಕಾರ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಗೃಹ ಇಲಾಖೆಯ ವೈಫಲ್ಯ ;
ನಾನು ವಿಶೇಷವಾಗಿ ಪೊಲೀಸರಿಗೆ ಹೇಳೋದು ಏನೆಂದರೆ, ನೀವು ಈ ರೀತಿ ರಾಜಕೀಯದ ಕೈ ಗೊಂಬೆಗಳಾಗಿ ವರ್ತಿಸಿದರೆ, ನಾಳೆ ಸರ್ಕಾರವು ಬದಲಾಗುತ್ತವೆ. ಸರ್ಕಾರದಲ್ಲಿ ಅಧಿಕಾರಕ್ಕೆ ಬರುವವರು ಚೇಂಜ್ ಆಗ್ತಾ ಇರ್ತಾರೆ. ಇದನ್ನು ಪೊಲೀಸರು ನೆನಪಿಟ್ಟುಕೊಳ್ಳಬೇಕು. ಇದು ಸಂಪೂರ್ಣವಾಗಿ ಗೃಹ ಇಲಾಖೆಯ ವೈಫಲ್ಯ ಎಂದು ಹೇಳಿದರು.
ಒಂದ್ಕಡೆ ರಾಜಕಾರಣಿಗಳ ಕುತಂತ್ರ, ಮತ್ತೊಂದೆಡೆ ಪೊಲೀಸರ ದುಷ್ಕೃತ್ಯ
ರಾಜಕಾರಣಿಗಳ ಕುತಂತ್ರ ಒಂದು ಕಡೆಯಾದರೆ, ಪೊಲೀಸರ ದುಷ್ಕೃತ್ಯ ಮತ್ತೊಂದು ಕಡೆ ನಡೆದಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣವಾಗಿ ತನಿಖೆ ಮಾಡಲು ನಾವು ಕೋರ್ಟಿಗೆ ಹೋಗುತ್ತೇವೆ. ಯಾಕೆಂದರೆ ಇವರು ಏನು ತನಿಖೆ ಮಾಡೋದಿಲ್ಲ ಅಷ್ಟು ನಿರ್ಲಜ್ಜರಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಸಿಟಿ ರವಿಗೆ ನಿಮ್ಮ ಹೆಣ ಹೋಗುತ್ತೆ ಅಂತ ಧಮಕಿ ಹಾಕಿದ್ರು ;
ವಿಧಾನಸೌಧಕ್ಕೆ ಪೊಲೀಸರಿಗೆ ಬರೋಕೆ ಹೇಗೆ ಅನುಮತಿ ನೀಡಿದ್ರು? ಕಂಪ್ಲೇಂಟಿಗೆ ಸಹಿ ಇಲ್ಲ, ವಿಧಾನ ಪರಿಷತ್ತಿನ ಸಭಾಪತಿಗಳು ಪರ್ಮಿಷನ್ ಕೊಟ್ಟಿಲ್ಲ ಆದರೂ ಪೊಲೀಸರು ಅನಧಿಕೃತವಾಗಿ ಪ್ರವೇಶ ಮಾಡಿದ್ದಾರೆ. ಅಲ್ಲಿನ ಗೇಟ್ ಒದ್ದರೂ ಸಿಟಿ ರವಿ ಮೇಲೆ ಹಲ್ಲೆ ಮಾಡಿದರು ಅಕಸ್ಮಾತ್ತಾಗಿ ಅಲ್ಲಿಗೆ ಮಾರ್ಷಲ್ ಗಳು ಹೋಗದೇ ಹೋಗಿದ್ರೆ ಏನು ಕಥೆ? ಸಿಟಿ ರವಿಗೆ ಹೆದರಿಕೆ ಹಾಕಿದ್ರು ಧಮಕಿ ಹಾಕಿದ್ರು, ನಿಮ್ಮ ಹೆಣ ಹೋಗುತ್ತದೆ ಅಂತ ಹೇಳಿ ಅದನ್ನು ಮಾಡಿ ಕಳಿಸ್ತಿದ್ರು. ಆ ರೀತಿಯಲ್ಲಿ ಮಾಡಿದವರನ್ನು ಗೇಟ್ ಮುರಿದವರನ್ನು ಒಬ್ಬರನ್ನು ಅರೆಸ್ಟ್ ಮಾಡಿಲ್ಲ. ಈ ಕಮಿಷನರ್ ನ ಕಾಂಗ್ರೆಸ್ ನಿಷ್ಠೆ ಎಷ್ಟಿದೆ ನೋಡಿ ಎಂದು ಹೇಳಿದರು.
Pralhad Joshi slams congress over arrest of CT Ravi, says they had plans to encounter. Congress had made clear plans to kill him and make BJP Silent.
03-05-25 09:38 pm
HK News Desk
Shivanand Patil, U T Khader: ಯತ್ನಾಳ್ ಸವಾಲು ಸ್...
02-05-25 10:00 pm
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 10:57 pm
Mangalore Correspondent
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
U T Khader, Satish Kumapla, Mangalore, Suhas,...
03-05-25 10:13 pm
Mangalore, Stabbing, Suhas Shetty Murder, Arr...
03-05-25 08:39 pm
Mangalore, Animal Welfare: ಪ್ರಾಣಿ ಸಂರಕ್ಷಣೆ ಜಾ...
03-05-25 06:57 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm