ಬ್ರೇಕಿಂಗ್ ನ್ಯೂಸ್
07-12-24 05:09 pm HK News Desk ಕರ್ನಾಟಕ
ಹಾವೇರಿ, ಡಿ 07: ಪ್ರೀತಿಸಲು ಯುವತಿ ಒಪ್ಪಲಿಲ್ಲವೆಂಬ ಕಾರಣಕ್ಕೆ ನೊಂದಿದ್ದ ಯುವಕ ಬೆಂಕಿ ಹಚ್ಚಿಕೊಂಡು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ತಡಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರವೀಣ ಬೆಟದೂರು (25) ಆತ್ಮಹತ್ಯೆಗೆ ಶರಣಾದ ಯುವಕ.
ಹುಬ್ಬಳ್ಳಿ ತಾಲ್ಲೂಕಿನ ಬೆಳಗಲಿ ಗ್ರಾಮದ ಪ್ರವೀಣ, ಹಣ್ಣಿನ ವ್ಯಾಪಾರ ಮಾಡುತ್ತಿದ್ದರು.
ತಡಸ ಗ್ರಾಮದ ತಾಯವ್ವ ದೇವಿ ದೇವಸ್ಥಾನದ ಬಳಿ ಬಂದಿದ್ದ ಪ್ರವೀಣ, ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ತೀವ್ರ ಗಾಯಗೊಂಡಿದ್ದ ಇವರನ್ನು ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರು ಮೃತಪಟ್ಟಿದ್ದಾರೆ' ಎಂದು ತಡಸ ಪೊಲೀಸರು ಹೇಳಿದರು.
ಪ್ರವೀಣ ಸಾವಿನ ಸಂಬಂಧ ಯುಡಿಆರ್ (ಅಸಹಜ ಸಾವು) ದಾಖಲಿಸಿಕೊಳ್ಳಲಾಗಿದೆ. ಚಿಕಿತ್ಸೆ ಸಂದರ್ಭದಲ್ಲಿ ಪ್ರವೀಣ ಅವರಿಂದ ಹೇಳಿಕೆ ಸಹ ಪಡೆಯಲಾಗಿದ್ದು, ಅದನ್ನು ಆಧರಿಸಿ ತನಿಖೆ ಮುಂದುವರಿಸಲಾಗಿದೆ' ಎಂದು ತಿಳಿಸಿದರು.
ಪ್ರವೀಣ್ ಅವರು ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ 21 ವರ್ಷದ ಯುವತಿ ಜೊತೆ ಸ್ನೇಹ ಬೆಳೆಸಿದ್ದರು. ನರ್ಸಿಂಗ್ ಕಾಲೇಜ್ವೊಂದರಲ್ಲಿ ಯುವತಿ ಓದುತ್ತಿದ್ದರು. ಇಬ್ಬರೂ ಆಗಾಗ ಪರಸ್ಪರ ಭೇಟಿಯಾಗುತ್ತಿದ್ದರು' ಎಂದು ಪೊಲೀಸ್ ಮೂಲಗಳು ಹೇಳಿವೆ.
ಇತ್ತೀಚೆಗೆ ಯುವತಿ ಜೊತೆಗೆ ಮಾತನಾಡಿದ ಪ್ರವೀಣ್, ತಮ್ಮನ್ನು ಪ್ರೀತಿಸುವಂತೆ ಕೋರಿದ್ದರು. ಆದರೆ, ಯುವತಿ ತಮ್ಮ ಭವಿಷ್ಯದ ದೃಷ್ಟಿಯಿಂದ ಅದಕ್ಕೆ ಒಪ್ಪಿರಲಿಲ್ಲ. ಇದರಿಂದ ಪ್ರವೀಣ ಬೇಸರಗೊಂಡಿದ್ದರು. ತಮ್ಮನ್ನು ಪ್ರೀತಿಸುವಂತೆ ಪಟ್ಟು ಹಿಡಿದಿದ್ದರು.
ಶುಕ್ರವಾರ ಬೆಳಿಗ್ಗೆ ಯುವತಿಯನ್ನು ಪ್ರವೀಣ ಭೇಟಿಯಾಗಿದ್ದರು. ಮಾತನಾಡಬೇಕೆಂದು ಹೇಳಿ ಯುವತಿಯನ್ನು ತಡಸ ಬಳಿಯ ತಾಯವ್ವ ದೇವಸ್ಥಾನದ ಸಮೀಪದಲ್ಲಿ ಕರೆತಂದಿದ್ದರು. ಯುವತಿಗೆ ಗೊತ್ತಾಗದಂತೆ, ಮಾರ್ಗಮಧ್ಯೆಯೇ ಬಂಕ್ನಿಂದ ಬಾಟಲಿಯಲ್ಲಿ ಪೆಟ್ರೋಲ್ ಖರೀದಿಸಿಟ್ಟುಕೊಂಡಿದ್ದರು
ತಮ್ಮನ್ನು ಪ್ರೀತಿಸುವಂತೆ ಪ್ರವೀಣ ಪುನಃ ಕೋರಿದ್ದರು. ಆದರೆ, ಅದಕ್ಕೆ ಯುವತಿ ಒಪ್ಪಿರಲಿಲ್ಲ. ನಮ್ಮದು ಸ್ನೇಹವಷ್ಟೇ ಎಂಬುದಾಗಿ ಹೇಳಿದ್ದರು. ಅದರಿಂದ ಬೇಸರಗೊಂಡು ಕೂಗಾಡಿದ್ದ ಪ್ರವೀಣ, ಬಾಟಲಿಯಲ್ಲಿದ್ದ ಪೆಟ್ರೋಲ್ ಮೈ ಮೇಲೆ ಸುರಿದುಕೊಂಡಿದ್ದರು. ಬಳಿಕ, ಬೆಂಕಿ ಹಚ್ಚಿಕೊಂಡಿದ್ದರು. ಸ್ಥಳೀಯರು ಸಹಾಯಕ್ಕೆ ಹೋಗುವಷ್ಟರಲ್ಲಿ, ಇಡೀ ದೇಹಕ್ಕೆ ಬೆಂಕಿ ವ್ಯಾಪಿಸಿತ್ತು. ಬೆಂಕಿ ನಂದಿಸಿ, ಪ್ರವೀಣ್ ಅವರನ್ನು ಕಿಮ್ಸ್ಗೆ ದಾಖಲಿಸಲಾಗಿತ್ತು' ಎಂದು ಮೂಲಗಳು ತಿಳಿಸಿವೆ.
Haveri youth sets himself on fire after girl rejects his love proposal. The Deceased has been identified as Praveen.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm