ಬ್ರೇಕಿಂಗ್ ನ್ಯೂಸ್
14-11-24 10:08 pm Bangalore Correspondent ಕರ್ನಾಟಕ
ಬೆಂಗಳೂರು, ನ.14: ರಾಜ್ಯದ ಅಬಕಾರಿ ಸಚಿವರ ಲಂಚಾವತಾರಕ್ಕೆ ಬಾರ್, ವೈನ್ ಮಾಲೀಕರೇ ಬೇಸತ್ತಿದ್ದಾರೆ. ಈಗಾಗಲೇ ನಿರ್ಧಾರ ಮಾಡಿದಂತೆ, ನ.20ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್ ಮಾಡುವುದು ಖಚಿತ ಎನ್ನುತ್ತಿದ್ದಾರೆ. ಹಿಂದೆಯೂ ಭ್ರಷ್ಟಾಚಾರ ಇತ್ತು. ಲಂಚವೂ ಇತ್ತು. ಆದರೆ, ಈಗಿನ ಕಾಲದಲ್ಲಿ ಲಂಚಾವತಾರ ಮಿತಿ ಮೀರಿದೆ ಎಂದು ಮದ್ಯವರ್ತಕರ ಸಂಘದ ಪದಾಧಿಕಾರಿಗಳೇ ಹೇಳುತ್ತಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಪ್ರತಿ ಮದ್ಯದಂಗಡಿಯಿಂದ ಹಿಡಿದು ಎಲ್ಲಾ ಜಿಲ್ಲೆಗಳಿಂದ ಇಂತಿಷ್ಟು ಹಣ ಫಿಕ್ಸ್ ಮಾಡಲಾಗಿದೆ. ವೈನ್ ಶಾಪ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಮದ್ಯದ ವರ್ತಕರಿಂದ ಇಂತಿಷ್ಟು ಹಣ ಫಿಕ್ಸ್ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಅಲ್ಲದೆ, ಅಬಕಾರಿ ಇಲಾಖೆಯ ಅಧಿಕಾರಿಗಳಿಂದಲೂ 16 ಕೋಟಿ ರೂ.ನಷ್ಟು ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.
ಬೆಂಗಳೂರಿನಲ್ಲಿ ಚುನಾವಣಾ ಉದ್ದೇಶಕ್ಕಾಗಿ ಅಕ್ರಮವಾಗಿ ಹಣ ವಸೂಲಿ ಮಾಡುವುದರ ಬಗ್ಗೆ ಬೃಹತ್ ಲಂಚ ಮತ್ತು ಅಕ್ರಮ ಹಣ ವರ್ಗಾವಣೆ ಎಂಬ ಶೀರ್ಷಿಕೆಯ ಪತ್ರವೊಂದು ಇತ್ತೀಚೆಗೆ ವೈರಲ್ ಆಗಿದ್ದಲ್ಲದೆ, ಹಿರಿಯ ಅಧಿಕಾರಿಗಳಿಂದ ಬರೋಬ್ಬರಿ 16 ಕೋಟಿ ರೂ. ಸಂಗ್ರಹಿಸಲಾಗಿದೆ ಎಂಬ ಆರೋಪ ಮಾಡಲಾಗಿತ್ತು. ಇದಲ್ಲದೆ, ಪ್ರತಿ ಮದ್ಯದಂಗಡಿ ಪರವಾನಗಿಗೆ ರೂ. 30-70 ಲಕ್ಷದ ವರೆಗೆ ಲಂಚ ಕೇಳಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಅಷ್ಟು ಲಂಚ ಕೊಟ್ಟ ನಂತರವೇ, ಸಚಿವರು CL7 ಬಾರ್ ಪರವಾನಗಿಗಳನ್ನು ನೀಡಿದ್ದಾರೆ ಎಂಬ ಆರೋಪ ಮಾಡಲಾಗುತ್ತಿದೆ.
ಮದ್ಯ ಮಾರಾಟಗಾರರು ಹೀಗೆ ಆರೋಪ ಮಾಡುತ್ತಿದ್ದಂತೆ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಅಧಿಕಾರದಲ್ಲಿದ್ದಾಗ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡದೇ ಇಲ್ಲವೇ ಎಂಬ ಪ್ರಶ್ನೆಗಳನ್ನು ಕಾಂಗ್ರೆಸಿಗರು ಮುಂದಿಡುತ್ತಿದ್ದಾರೆ. ಅದಕ್ಕೆ ಉತ್ತರವೆಂಬಂತೆ ಮದ್ಯ ಮಾರಟಗಾರರ ಸಂಘದ ಪದಾಧಿಕಾರಿಗಳು ನ.13ರಂದು ಮತ್ತೆ ಹೇಳಿಕೆ ನೀಡಿದ್ದಾರೆ. ಈ ಹಿಂದೆ, ನಾಗೇಶ್ ಅವರು ಅಬಕಾರಿ ಸಚಿವರಾಗಿದ್ದಾಗ ಹಾಗೂ ಅದಕ್ಕೂ ಹಿಂದಿನ ಎಲ್ಲಾ ಸಚಿವರ ಕಾಲಘಟ್ಟದಲ್ಲೂ ಲಂಚಾವತಾರ ಇದ್ದೇ ಇತ್ತು. ಆದರೀಗ, ಅದು ಮಿತಿ ಮೀರಿದೆ ಎಂಬ ಆರೋಪವನ್ನು ಮಾಡಿದ್ದು ಹಾಲಿ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಮೂತಿಗೆ ಮಂಗಳಾರತಿ ಮಾಡಿದಂತಾಗಿದೆ.
Alcohol sales will be suspended across Karnataka on November 20 as liquor vendors plan to protest ongoing issues with the state's Excise Department. The protest will take place despite there being no significant public holiday or special occasion, such as Gandhi Jayanti or the imposition of Section 144.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm