ಬ್ರೇಕಿಂಗ್ ನ್ಯೂಸ್
12-11-24 10:31 pm HK News Desk ಕರ್ನಾಟಕ
ಕಾರವಾರ, ನ.12: ಕಾರವಾರ ನಗರದಲ್ಲಿ ಪತ್ತೆಯಾದ ದೊಡ್ಡ ಜಾತಿಯ ರಣಹದ್ದು ಜನಸಾಮಾನ್ಯರನ್ನು ಬೆಚ್ಚಿಬೀಳಿಸಿತ್ತು. ಹದ್ದಿನ ಕಾಲಿನಲ್ಲಿ ಜಿಪಿಎಸ್ ಹಾಗೂ ಕ್ಯಾಮೆರಾ ಹೊಂದಿದ್ದನ್ನು ನೋಡಿದ ಸ್ಥಳೀಯರು ಗಾಬರಿಗೀಡಾಗಿದ್ದರು. ಭದ್ರತಾ ಸಿಬಂದಿಗೂ ಆತಂಕ ಎದುರಾಗಿತ್ತು.
ಕಳೆದ ಮೂರು ದಿನಗಳಿಂದ ಕಾರವಾರದ ಕೋಡಿಭಾಗ ಬಳಿಯ ನದಿ ಆಸುಪಾಸಿನಲ್ಲಿ ಹದ್ದಿನ ಹಾರಾಟ ಗಮನಿಸಿದ ಜನ, ಗೂಢಚಾರಿಕೆ ನಡೆಸಲು ಶತ್ರುಗಳು ಹದ್ದಿನಲ್ಲಿ ಕ್ಯಾಮರಾ ಅಳವಡಿಸಿ ಹಾರಲು ಬಿಟ್ಟಿದ್ದಾರೆ ಎಂಬ ಅನುಮಾನ ಪಟ್ಟಿದ್ದರು. ಹದ್ದಿನ ಕಾಲಿಗೆ ಇಲೆಕ್ಟ್ರಾನಿಕ್ ಚಿಪ್ ಅಳವಡಿಸಲಾಗಿತ್ತು. ಎರಡೂ ಕಾಲುಗಳಿಗೆ ಬಿಳಿ ಬಣ್ಣದ ಸ್ಟಿಕ್ಕರ್ ಹಾಕಲಾಗಿತ್ತು. ಪಕ್ಷಿಯ ಬೆನ್ನಿನಲ್ಲಿ ಸೋಲಾರ್ ಪ್ಲೇಟ್ ರೀತಿ ಕಾಣುವ ಚಿಪ್ ಕಂಡುಬಂದಿತ್ತು. ಇದೆಲ್ಲ ನೋಡಿದ ಜನರಿಗೆ ಅನುಮಾನ ಬಂದಿತ್ತು. ಕೈಗಾ ಅಣು ವಿದ್ಯುತ್ ಸ್ಥಾವರ, ಕದಂಬ ನೌಕಾನೆಲೆ ಇರುವುದರಿಂದ ರಹಸ್ಯ ಕಾರ್ಯಾಚರಣೆ ಬಗ್ಗೆ ಅನುಮಾನ ಮೂಡಿತ್ತು. ವಿಚಾರ ತಿಳಿಯುತ್ತಿದ್ದಂತೆ ಪಕ್ಷಿಯ ಮೇಲೆ ಅಧಿಕಾರಿಗಳು ತನಿಖೆ ನಡೆಸಿ ಅಸಲಿ ಸತ್ಯವನ್ನು ಹೊರ ತೆಗೆದಿದ್ದಾರೆ.

ಅರಣ್ಯ ಇಲಾಖೆಯವರೊಂದಿಗೆ ಸ್ಥಳಕ್ಕೆ ಹೋಗಿ ಬೈನಾಕ್ಯುಲರ್ ಮತ್ತು ಫೋಟೋಗ್ರಫಿ ಮೂಲಕ ಹದ್ದನ್ನು ಪರಿಶೀಲಿಸಲಾಗಿದೆ. ಹದ್ದಿಗೆ ಒಂದು ಲೇಬಲ್ ಅಂಟಿಸಲಾಗಿದ್ದು ಅದರಲ್ಲಿ ಇಂಗ್ಲಿಷನಲ್ಲಿ ‘If Found please contact [email protected] OT10-4G s/n:245671 5033 2 ಎಂದು ಬರೆದಿರುತ್ತದೆ. ಇದು Himalayan Griffon Vulture ಜಾತಿಯ ದೊಡ್ಡ ರಣಹದ್ದಾಗಿದೆ. ಅಳಿವಿನ ಅಂಚಿನಲ್ಲಿರುವ ವಲಸೆ ಹಕ್ಕಿ. ಮಹಾರಾಷ್ಟ್ರ ಅರಣ್ಯ ಇಲಾಖೆಯವರು ರಕ್ಷಿಸಿ ಪೋಷಿಸುತ್ತಿದ್ದು ಹಾಗೂ ಮೇಲ್ವಿಚಾರಣೆ ಮಾಡುತ್ತಿದ್ದು ಪ್ರತಿ ವರ್ಷ ಇದು ಎಲ್ಲೆಲ್ಲಿ ವಲಸೆ ಹೋಗುತ್ತದೆ ಎಂದು ಅಧ್ಯಯನ ಮಾಡಲು ಜಿಪಿಎಸ್ ಅಳವಡಿಸಿರುತ್ತಾರೆ.
ರಣಹದ್ದು ಯಾವುದೇ ರೀತಿಯ ಗೂಢಚರ್ಯಕ್ಕೆ ಅಥವಾ ಇನ್ಯಾವುದೇ ಕುಕೃತ್ಯ ಕೆಲಸಕ್ಕೆ ಬಳಸಿದ್ದು ಅಲ್ಲ. ರಣಹದ್ದಿನ ಮೇಲೆ ಅರಣ್ಯ ಇಲಾಖೆಯವರು ನಿಗಾ ವಹಿಸಿದ್ದು, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಕಾರವಾರ ಪೊಲೀಸ್ ಇಲಾಖೆ ವಿನಂತಿಸಿದೆ.
Karwar, Uttara Kannada dist: An electronic device, attached to the back of a White-rumped vulture, created curiosity and concerns alike among the people at Nadivada near Kodibagh here.
18-04-26 05:59 pm
HK News Staffer
ದುಬೈನಲ್ಲಿ ಕಚೇರಿ, ಟ್ರೇಡಿಂಗ್ ಹೆಸರಲ್ಲಿ ಕೋಟಿ ಕೋಟಿ...
18-04-26 02:43 pm
ರಾಹುಲ್ ಗಾಂಧಿ ದ್ವಿಪೌರತ್ವ ; ಬ್ರಿಟಿಷ್ ಪ್ರಜೆಯೆಂದು...
18-04-26 10:20 am
ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ...
17-04-26 07:27 pm
ಯಾದಗಿರಿ ದೇವಸ್ಥಾನದಿಂದ ಮರಳುತ್ತಿದ್ದವರ ದುರಂತ ಅಂತ್...
17-04-26 01:39 pm
18-04-26 11:39 pm
HK News Desk
ಗಲ್ಫ್ ಸಂಘರ್ಷ ಸದ್ಯಕ್ಕೆ ತೆರೆ ; ಹೊರ್ಮುಜ್ ಜಲಸಂಧಿ...
18-04-26 10:31 am
ದುರಂತ ಅಂತ್ಯ ಕಂಡ ವಿಚ್ಛೇದನ ಕಲಹ ; ಪತ್ನಿಗೆ ಗುಂಡಿಕ...
17-04-26 08:08 pm
ಹೊಟ್ಟೆನೋವೆಂದು ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿಗೆ ಬಿ...
17-04-26 11:27 am
250 ರೋಹಿಂಗ್ಯಾಗಳಿದ್ದ ಬೋಟ್ ಅಂಡಮಾನ್ ಸಮುದ್ರದಲ್ಲಿ...
16-04-26 01:09 pm
19-04-26 10:41 pm
HK News Staffer
ಪುತ್ತೂರು ಜಾತ್ರೆ ; ಸುಡುಮದ್ದು ಉತ್ಸವದಲ್ಲಿ ಬೆಂಕಿ...
18-04-26 11:31 pm
ಕುಂಪಲದಲ್ಲಿ ಏಕಾಏಕಿ ಕುಸಿದು ಬಿದ್ದ ಭಾರೀ ಗಾತ್ರದ ಆವ...
18-04-26 11:09 pm
ದಾವಣಗೆರೆ ಫಲಿತಾಂಶ ಏನಾಗುತ್ತೆಂದು ಹೇಳಲು ನಾನು ಜ್ಯೋ...
18-04-26 08:10 pm
ಕೊಣಾಜೆ ; ಪೊಳಲಿ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಬಾಲ...
17-04-26 10:32 pm
19-04-26 10:23 pm
HK News Staffer
ಶಿವಮೊಗ್ಗ ; ಹುಟ್ಟುಹಬ್ಬದ ಪಾರ್ಟಿ ವೇಳೆ ಚಿಕನ್ ಮೂಳೆ...
19-04-26 02:58 pm
15 ವರ್ಷಗಳ ಹಿಂದೆ ಜೈಲಿನಿಂದ ತಪ್ಪಿಸಿಕೊಂಡು ಮುಂಬೈ,...
19-04-26 02:24 pm
ಅಂಬ್ಲಮೊಗರು ; ಸ್ನೇಹಿತರೊಂದಿಗೆ ಕೆರೆ ನೀರಲ್ಲಿ ಆಟವಾ...
19-04-26 10:20 am
ಹೇಯ್ ಮಟನ್ ಸರಿಯಾಗಿ ಬೆಂದಿಲ್ಲ ಎಂದು ಸ್ನೇಹಿತನ ಮುಂದ...
18-04-26 10:37 pm