ಬ್ರೇಕಿಂಗ್ ನ್ಯೂಸ್
09-11-24 01:19 pm Bangalore Correspondent ಕರ್ನಾಟಕ
ಬೆಂಗಳೂರು, ನ.9: ಇತ್ತೀಚೆಗೆ ಬಿಬಿಎಂಪಿ ವ್ಯಾಪ್ತಿಯ ಬಾಬುಸಪಾಳ್ಯದಲ್ಲಿ ಕಟ್ಟಡ ಕುಸಿತ ಪ್ರಕರಣದ ಬಳಿಕ ಎಚ್ಚೆತ್ತುಕೊಂಡ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಬೆಂಗಳೂರು ನಗರದೊಳಗಿನ ಅನಧಿಕೃತ ಕಟ್ಟಡಗಳನ್ನು ತೆರವು ಮಾಡಲು ಮುಂದಾಗಿದ್ದಾರೆ. ಮೊದಲಾಗಿ ನಕ್ಷೆ ಅನುಮತಿ ಪಡೆಯದೇ ತಲೆ ಎತ್ತಿದೆ ಎನ್ನಲಾದ ಶೃಂಗೇರಿ ಪೀಠಕ್ಕೆ ಒಳಪಟ್ಟ ಶಂಕರಪುರದ ಜ್ಞಾನೋದಯ ಪಿಯು ಕಾಲೇಜಿನ ಕಟ್ಟಡವನ್ನು ಬಿಬಿಎಂಪಿ ತೆರವುಗೊಳಿಸಲು ಮುಂದಾಗಿದ್ದು ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
ನಕ್ಷೆ ನಿಯಮ ಉಲ್ಲಂಘನೆ ಆರೋಪದಲ್ಲಿ ಈಗಾಗಲೇ ಪಾಲಿಕೆ ಅಧಿಕಾರಿಗಳಿ ನೋಟಿಸ್ ನೀಡಿದ್ದು ಇದೇ ನವೆಂಬರ್ 11ರಂದು ಕಟ್ಟಡ ತೆರವುಗೊಳಿಸುವುದಾಗಿ ಹೇಳಿದೆ. ಶೃಂಗೇರಿ ಮಠಕ್ಕೆ ಸೇರಿದ ಆಸ್ತಿ ಸಂಖ್ಯೆ 160/24 ರಲ್ಲಿ ಬಿಬಿಎಂಪಿ ಬೈಲಾಗಳನ್ನು ಉಲ್ಲಂಘಿಸಿ ಶಾಲೆ ಮತ್ತು ಪಿಯು ಕಾಲೇಜಿಗೆ ಕಟ್ಟಡ ನಿರ್ಮಿಸಿರುವುದಾಗಿ ಎಂದು ಚಿಕ್ಕಪೇಟೆ ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್ (ಇಇ) ತಿಳಿಸಿದ್ದು ಅದರಂತೆ ನಿಯಮ ಬಾಹಿರ ಕಟ್ಟಡವೆಂದು ಅದನ್ನು ಕೆಡವಲು ಸರ್ಕಾರ ಮುಂದಾಗಿರುವುದು ಹಿಂದು ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ಚಾಮರಾಜಪೇಟೆ, ಚಿಕ್ಕಪೇಟೆ ವ್ಯಾಪ್ತಿಯಲ್ಲಿ ಅದೆಷ್ಟು ಅಕ್ರಮ ಕಟ್ಟಡಗಳಿಲ್ಲ. ಎಲ್ಲವನ್ನೂ ಕೆಡವಲು ಮುಂದಾಗಿದ್ದಾರೆಯೇ, ನೋಟಿಸ್ ಕೊಟ್ಟಿದ್ದಾರೆಯೇ..? ಹಿಂದು ಮಕ್ಕಳು ಓದುವ ಶೃಂಗೇರಿ ಮಠದ ಕಾಲೇಜು ಕಟ್ಟಡ ಮಾತ್ರ ಕಣ್ಣಿಗೆ ಕಂಡಿದ್ದೇ? ಇಷ್ಟಕ್ಕೂ ಆ ಕಟ್ಟಡ ಬೈಲಾ ನಿಯಮಗಳನ್ನು ಮೀರಿದೆ ಎನ್ನುವ ಆಕ್ಷೇಪ ಬಿಟ್ಟರೆ, ಉಳಿದಂತೆ ಗಟ್ಟಿ ಮುಟ್ಟಾಗಿದೆ. ಕಟ್ಟಡ ಏನೂ ಕುಸಿದು ಬೀಳುವ ಸ್ಥಿತಿಯಲ್ಲಿ ಇಲ್ಲ. ಚಾಮರಾಜಪೇಟೆಯಲ್ಲಿ ಬೈಲಾ ನಿಯಮಗಳನ್ನು ಮೀರಿದ ಎಷ್ಟು ಕಟ್ಟಡಗಳಿಲ್ಲ. ಅದಕ್ಕೆಲ್ಲ ನೋಟಿಸ್ ಕೊಟ್ಟು ಕೆಡವಲು ಮುಂದಾಗಿದ್ದೀರಾ ಎಂದು ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
ಬಿಬಿಎಂಪಿ ಕಾಯ್ದೆ 2020 ರ ಸೆಕ್ಷನ್ 248 (1), 248 (2) ಮತ್ತು 248 (3) ಅಡಿಯಲ್ಲಿ ಪಾಲಿಕೆಯಿಂದ ಕಾಲೇಜು ಕಟ್ಟಡ ತೆರವುಗೊಳಿಸುವಂತೆ ನೋಟಿಸ್ ನೀಡಲಾಗಿದ್ದು, ಅನಧಿಕೃತ ಕಟ್ಟಡವನ್ನು ತಾವಾಗಿಯೇ ತೆರವು ಮಾಡುವಂತೆ ಮಠದ ಆಡಳಿತಕ್ಕೆ ಸೂಚಿಸಲಾಗಿತ್ತು. ಇದೀಗ ನವೆಂಬರ್ 4ರಂದು ಮತ್ತೆ ನೋಟಿಸ್ ಜಾರಿ ಮಾಡಿದ್ದು ನ.11ರಂದು ಪಾಲಿಕೆ ಕಟ್ಟಡವನ್ನು ಕೆಡವಿ ಹಾಕುವ ಸೂಚನೆ ನೀಡಿದ್ದಾಗಿ ತಿಳಿದುಬಂದಿದೆ.
ಕಟ್ಟಡ ತೆರವಿಗೆ ಆಕ್ಷೇಪ ಕೇಳಿಬಂದ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆ ನೀಡಲು ಬಿಬಿಎಂಪಿ ಮನವಿ ಮಾಡಿದೆ. ಬಿಬಿಎಂಪಿಯ ಬಲವಂತದ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ಚಾಮರಾಜಪೇಟೆಯ ಸುತ್ತಮುತ್ತ ನೂರಾರು ಅನಧಿಕೃತ ಕಟ್ಟಡಗಳಿವೆ. ಆದರೆ, ಅದನ್ನೆಲ್ಲ ಕೆಡಹುವ ಧೈರ್ಯ ಮಾಡದ ರಾಜ್ಯ ಸರ್ಕಾರ, ಹಿಂದು ಶಿಕ್ಷಣ ಕೇಂದ್ರದ ಮೇಲೆ ಕಣ್ಣಿಟ್ಟಿರುವುದಕ್ಕೆ ಕಿಡಿಕಾರಿದ್ದಾರೆ.
Waqf dispute, BBMP move to demolish college building of Sringeri Mutt.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm