ಬ್ರೇಕಿಂಗ್ ನ್ಯೂಸ್
08-11-24 09:43 pm HK News Desk ಕರ್ನಾಟಕ
ರಾಮನಗರ, ನ.8: ಚನ್ನಪಟ್ಟಣದಲ್ಲಿ ಕಾಂಗ್ರೆಸ್ ನಾಯಕರ ಜೊತೆಗೆ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಪ್ರಚಾರದಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದಾರೆ. ಧೈರ್ಯ, ತಾಕತ್ ಇದ್ದರೆ ಸೋಮಶೇಖರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆದ್ದು ತೋರಿಸಲಿ ಸವಾಲೆಸೆದಿದ್ದಾರೆ.
ಎಸ್.ಟಿ ಸೋಮಶೇಖರ್ ರನ್ನು ನಾವು ಪಾರ್ಟಿಗೆ ತಂದ್ವಿ. ಅವರಿಗೆ ಅತ್ಯಂತ ಪ್ರಮುಖ ಖಾತೆ ಕೊಟ್ಟು, ಮೈಸೂರಿನಂತ ಸಾಂಸ್ಕೃತಿಕ ಜಿಲ್ಲೆಗೆ ಉಸ್ತುವಾರಿ ಮಾಡಿದ್ವಿ. ಅವರ ನನ್ನ ಚುನಾವಣೆ ಮಾಡಿಲ್ಲ. ಆದರೆ ಯಶವಂತಪುರ ಜನತೆ ಒಂದು ಕಾಲು ಲಕ್ಷ ಮತವನ್ನು ಅಂತರವಾಗಿ ಕೊಟ್ಟರು. ಅವರು ಈವಾಗ ಎರಡು ದೋಣಿಗಳ ಮೇಲೆ ಕಾಲಿಟ್ಟಿದ್ದಾರೆ. ಅವರ ಶರೀರ ಒಂದು ಕಡೆ, ತಲೆ ಒಂದು ಕಡೆ. ಸೋಮಶೇಖರ್ ಪಾರ್ಟಿ ಯಾವುದಪ್ಪ..? ಅವರಿಗೆ ಅವ್ರು ಯಾವ ಪಾರ್ಟಿ ಅಂತನೂ ಹೇಳೋಕೆ ಆಗದ ಪರಿಸ್ಥಿತಿಯಲ್ಲಿದ್ದಾರೆ.
ಶಾಸಕರಾಗಿ ಆಯ್ಕೆ ಆಗಿದ್ದು ಬಿಜೆಪಿ, ಆದರೆ ಇರೋದು ಮಾತ್ರ ಕಾಂಗ್ರೆಸ್ನಲ್ಲಿ. ಅವರಿಗೆ ಧೈರ್ಯ, ಶಕ್ತಿ ಇದ್ದರೆ ರಾಜೀನಾಮೆ ಕೊಟ್ಟು, ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಬೇಕಿತ್ತು. ಆವಾಗ ಅವರ ಶಕ್ತಿ ಏನು ಎಂದು ನೋಡಬಹುದಿತ್ತು. ಆದರೆ ಆ ಯಾವ ಶಕ್ತಿಯೂ ಅವರಲ್ಲಿ ಉಳಿದುಕೊಂಡಿಲ್ಲ. ಕಮಿಷನ್ ಗಾಗಿ, ದುಡ್ಡು ಹೊಡೆಯೋಕೆ ಕಾಂಗ್ರೆಸ್ ಗೆ ಹೋಗಿದ್ದಾರೆ. ಸರ್ಕಾರದ ಶೆಲ್ಟರ್ ಗಾಗಿ ಕಾಂಗ್ರೆಸ್ ಜೊತೆ ಇದ್ದಾರೆ. ಅವರದ್ದು ಹಾಗೂ ಬಿಜೆಪಿಯ ಸಂಬಂಧ ಉಳಿದುಕೊಂಡಿಲ್ಲ. ಅವ್ರು ತ್ರಿಶಂಕುವಾಗಿಯೇ ಇರಬೇಕೆಂದು ನಾವು ಬಯಸುತ್ತೇವೆ.
ಅವರು ತಮ್ಮ ಮರ್ಯಾದೆ ಉಳಿಸಿಕೊಳ್ಳಲು ಅವ್ರು ಎಲ್ಲಿ ಇರಬೇಕೆಂದು ತೀರ್ಮಾನ ಮಾಡಲಿ. ಅವರನ್ನು ನಾವು ಪಕ್ಷದಿಂದ ತೆಗೆದುಬಿಟ್ಟರೆ ಅವರು ಆರಾಮವಾಗಿ ಇದ್ದು ಬಿಡ್ತಾರೆ. ದೋಖಾ ಮಾಡಿರೋ ಯೋಗೇಶ್ವರ್ ಹಾಗೂ ಸೋಮಶೇಖರ್ ರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಮುಂದಿನ ದಿನಗಳಲ್ಲಿ ಅವರನ್ನು ಸೇರಿಸುವ ಪಕ್ಷಕ್ಕೆ ಪ್ರಶ್ನೆಯೇ ಬರಲ್ಲ. ಅವರ ವಿರುದ್ಧ ಯಶವಂತಪುರದಲ್ಲಿ ಪಕ್ಷದಲ್ಲೇ ಕಾರ್ಯಕರ್ತನನ್ನು ಬೆಳೆಸಿ ಸ್ಪರ್ಧಿಸಿ, ಅವರನ್ನು ಮನೆಗೆ ಕಳುಹಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದ ಶೋಭಾ ಕರಂದ್ಲಾಜೆ ಹೇಳಿದರು.
Shobha Karandlaje slams MLA Somashekar. If Somashekar has guts let him resign from his post and contest from congress and win.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm