ಬ್ರೇಕಿಂಗ್ ನ್ಯೂಸ್
10-09-24 03:05 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.10: ನಟಿ ಪವಿತ್ರಾ ಗೌಡ ಮತ್ತು ನಟ ದರ್ಶನ್ ನಡುವೆ ಯಾವ ರೀತಿಯ ಸಂಬಂಧ ಇತ್ತೆಂಬುದನ್ನು ಪೊಲೀಸರು ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್ ಶೀಟ್ ನಲ್ಲಿ ರಿವೀಲ್ ಮಾಡಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.4ರಂದು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆಯಾಗಿದ್ದು ಸ್ವತಃ ದರ್ಶನ್ ನಮ್ಮಿಬ್ಬರ ನಡುವೆ ಲಿವಿಂಗ್ ರಿಲೇಶನ್ಶಿಪ್ ಇತ್ತೆಂದು ಹೇಳಿಕೊಂಡಿರುವುದನ್ನು ಪೊಲೀಸರು ಉಲ್ಲೇಖಿಸಿದ್ದಾರೆ.
ನಟಿ ಪವಿತ್ರಾ ಗೌಡ ಕೂಡ ಇದೇ ಮಾತುಗಳನ್ನೇ ಹೇಳಿದ್ದಾರೆ. ಆದರೆ, ಇಬ್ಬರ ನಡುವೆ ಸಂಬಂಧ ಬೆಳೆದಿದ್ದು ಹೇಗೆ? ಯಾರು ಮೊದಲು ಈ ರೀತಿಯ ಸಂಬಂಧಕ್ಕೆ ಮುಂದಾದರು ಎಂಬುದಕ್ಕೂ ಚಾರ್ಜ್ಶೀಟ್ನಲ್ಲಿ ಉತ್ತರ ಸಿಕ್ಕಿದೆ. ಕೋರ್ಟಿಗೆ ಸಲ್ಲಿಸಿರುವ 3991 ಪುಟಗಳ ಚಾರ್ಜ್ ಶೀಟ್ನಲ್ಲಿ ಎ1 ಆರೋಪಿ ಪವಿತ್ರಾ ಗೌಡ ಮತ್ತು ಎ2 ಆರೋಪಿ ದರ್ಶನ್ ಸ್ವಇಚ್ಛಾ ಹೇಳಿಕೆಗಳನ್ನು ನೀಡಿದ್ದಾರೆ. ಪವಿತ್ರಾ ಗೌಡ ನೀಡಿರುವ ಹೇಳಿಕೆಯಲ್ಲಿ ದರ್ಶನ್ ಜತೆಗಿನ ಸಂಬಂಧ ಹೇಗೆ ಶುರುವಾಯ್ತು? ಮನೆ ಯಾವಾಗ ಖರೀದಿ ಮಾಡಲಾಯಿತು ಮತ್ತು ರೇಣುಕಾಸ್ವಾಮಿ ಕೊಲೆಗೂ ಮುಂಚೆ ಏನೇನು ನಡೆಯಿತು ಎಂಬಿತ್ಯಾದಿ ರೋಚಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.
ದರ್ಶನ್ ಜತೆಗಿನ ಸಂಬಂಧದ ಬಗ್ಗೆ ಹೇಳಿಕೊಂಡಿರುವ ಪವಿತ್ರಾ ಗೌಡ, ನಾನು ಮತ್ತು ದರ್ಶನ್ ಪರಸ್ಪರ ಪ್ರೀತಿಸುತ್ತಿದ್ದೆವು. ದರ್ಶನ್ಗೆ ಮೊದಲೇ ವಿಜಯಲಕ್ಷ್ಮೀ ಅವರೊಂದಿಗೆ ಮದುವೆಯಾಗಿ ಮಗ ಇರುವುದು ಗೊತ್ತಿರಲಿಲ್ಲ. ಪ್ರೀತಿಸಲು ಶುರು ಮಾಡಿದ ಬಳಿಕ ಆ ಬಗ್ಗೆ ಗೊತ್ತಾಯಿತು. 2014ರಲ್ಲಿ ಬುಲ್ಬುಲ್ ಚಿತ್ರದ ಆಡಿಷನ್ಗೆ ಹೋಗಿದ್ದಾಗ ಮೊದಲ ಬಾರಿಗೆ ದರ್ಶನ್ ಪರಿಚಯ ಆಗಿತ್ತು. ಈ ವೇಳೆ ಮ್ಯಾನೇಜರ್ ಅವರಿಂದ ದರ್ಶನ್ ನಂಬರ್ ಪಡೆದಿದ್ದೆ. ಆಡಿಷನ್ ವಿಚಾರವಾಗಿ ಫೋನ್ ಮಾಡಿದಾಗ, ಈಗಾಗಲೇ ಆಡಿಷನ್ ಮುಗಿದಿದೆ ಎಂದರು. ಅಲ್ಲದೆ, ಬೇರೆ ಯಾವುದಾದರೂ ಚಿತ್ರವಿದ್ದರೆ ತಿಳಿಸುವುದಾಗಿ ಹೇಳಿದರು. ನಾನು ಅದನ್ನೇ ನೆಪವಾಗಿಟ್ಟು ದರ್ಶನ್ ಅವರನ್ನು ಆಗಾಗ ಫೋನ್ ಮತ್ತು ಮೆಸೇಜ್ ಮೂಲಕ ಸಂಪರ್ಕಿಸುತ್ತಿದ್ದೆ. ದಿನಗಳು ಕಳೆದಂತೆ ಚಾಟಿಂಗ್ ಮತ್ತು ಫೋನ್ ಕರೆ ಮಾಡಿ ಮಾತನಾಡುತ್ತಿದ್ದೆವು. ಅಲ್ಲದೆ, ಆಗಾಗ ಇಬ್ಬರು ಭೇಟಿಯಾಗುತ್ತಿದ್ದೆವು ಎಂದು ಪವಿತ್ರಾ ಗೌಡ ನೀಡಿರುವ ಹೇಳಿಕೆಯಲ್ಲಿದೆ.
ನಾನು ವಾಸ ಮಾಡುತ್ತಿದ್ದ ಮನೆಗೆ ಆಗಾಗ ದರ್ಶನ್ ಬರುತ್ತಿದ್ದರು. ಇಬ್ಬರು ಕೂಡ ಲಾಂಗ್ ಡ್ರೈವ್ ಹೋಗುತ್ತಿದ್ದೆವು. ಒಟ್ಟಿಗೆ ವಾಸ ಮಾಡುವ ಉದ್ದೇಶದಿಂದ ಆರ್ಆರ್ ನಗರದಲ್ಲಿ ನನಗಾಗಿ ದರ್ಶನ್ ಮನೆ ಖರೀದಿ ಮಾಡಿದ್ದರು. ನಾನು, ನನ್ನ ಮಗಳು ಮತ್ತು ದರ್ಶನ್ ಅಲ್ಲಿ ಇರುತ್ತಿದ್ದೆವು. ಮನೆಯನ್ನು ನನ್ನ ಹೆಸರಿನಲ್ಲೇ ಖರೀದಿ ಮಾಡಿದ್ದಾರೆ. ಇದಕ್ಕಾಗಿ ನಿರ್ಮಾಪಕ ಸೌಂದರ್ಯ ಜಗದೀಶ್ ಬಳಿ 1.75 ಕೋಟಿ ರೂ. ಹಣವನ್ನು ಪಡೆದಿದ್ದರು. 2018ರ ಫೆಬ್ರವರಿ ತಿಂಗಳಲ್ಲಿ ಮನೆಯ ಗೃಹಪ್ರವೇಶ ಮಾಡಿ ಅಲ್ಲೇ ವಾಸವಿದ್ದೆವು.
2013ರಲ್ಲಿ ನಾನು ನನ್ನ ವೈಯಕ್ತಿಕ ಹಾಗೂ ಮಾಡೆಲಿಂಗ್ ವಿಚಾರ ಹಂಚಿಕೊಳ್ಳಲು ಇನ್ಸ್ಟಾಗ್ರಾಮ್ ಖಾತೆ ತೆರೆದಿದ್ದೆ. ದರ್ಶನ್ ಕೊಡಿಸಿದ ಐಫೋನ್ ಮ್ಯಾಕ್ಸ್-14 ಮೊಬೈಲ್ನಿಂದಲೇ ಖಾತೆ ನಿರ್ವಹಣೆ ಮಾಡುತ್ತಿದ್ದೆ. ನನ್ನ ಖಾತೆಯನ್ನು ಅನೇಕ ನೆಟ್ಟಿಗರು ಫಾಲೋ ಮಾಡುತ್ತಿದ್ದರು. ಖಾತೆ ಪಬ್ಲಿಕ್ ಆಗಿದ್ದರಿಂದ ನೆಟ್ಟಿಗರು ನೇರವಾಗಿ ಮೆಸೇಜ್ ಮಾಡುತ್ತಿದ್ದರು. ಕೆಲವೊಮ್ಮೆ ಇನ್ಬಾಕ್ಸ್ ತೆರೆದು ನೋಡಿದಾಗ ಅಸಭ್ಯ ರೀತಿಯ ಮೆಸೇಜ್ ಕಳಿಸಿರುತ್ತಿದ್ದರು. ಅಂತಹ ನೆಟ್ಟಿಗರ ಪ್ರೊಫೈಲ್ಗಳನ್ನು ಬ್ಲಾಕ್ ಮಾಡುತ್ತಿದ್ದೆ. ಕೆಲವೊಮ್ಮೆ ಅಸಹ್ಯಕರ ಮೆಸೇಜ್ಗಳು ಬಂದಾಗ ಸ್ಕ್ರೀನ್ ಶಾಟ್ ತೆಗೆದು ದರ್ಶನ್ ಅವರಿಗೂ ತೋರಿಸುತ್ತಿದ್ದೆ ಎಂದು ಪವಿತ್ರಾ ಗೌಡ ಹೇಳಿರುವುದು ಚಾರ್ಜ್ಶೀಟ್ನಲ್ಲಿ ದಾಖಲಾಗಿದೆ.
ಅಂದಹಾಗೆ ಇನ್ಸ್ಟಾಗ್ರಾಂನಲ್ಲಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಮಾಡಿರುವ ಸಂಪೂರ್ಣ ಮೆಸೇಜ್ಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. 'Goutham_KS_1990' ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ, ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ಗಳನ್ನು ಮಾಡಿದ್ದ ಎಂದು ತಿಳಿದುಬಂದಿದೆ. ಕಿಡ್ನಾಪ್ ಆಗುವ 8 ದಿನಗಳಿಗೂ ಮುಂಚೆ ಪವಿತ್ರಾ ಗೌಡಳ pavitragowda777_official ಹೆಸರಿನ ಅಧಿಕೃತ ಇನ್ಸ್ಟಾಗ್ರಾಂ ಖಾತೆಗೆ ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದ. ದರ್ಶನ್ರನ್ನು ಬಿಟ್ಟು ತನ್ನ ಜೊತೆ ಇರುವಂತೆ ಪಟ್ಟು ಹಿಡಿದಿದ್ದ. ಅಲ್ಲದೆ, ಪವಿತ್ರಾಳ ದೇಹದ ಬಗ್ಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ. ನಾನು ನಿಮ್ಮ ಅಭಿಮಾನಿ ಎಂದು ಹೇಳಿಕೊಂಡು, ಆಕೆಯನ್ನು ಲೈಂಗಿಕ ಬಯಕೆ ಈಡೇರಿಸುವಂತೆ ಆಹ್ವಾನಿಸಿದ್ದ. ಇದಿಷ್ಟೇ ಅಲ್ಲದೆ, ತನ್ನ ಮರ್ಮಾಂಗದ ಫೋಟೋ ಸೇರಿದಂತೆ ತನ್ನ ಅನೇಕ ಫೋಟೋಗಳನ್ನು ಪವಿತ್ರಾಗೆ ಕಳುಹಿಸಿದ್ದ ಎಂದು ಚಾರ್ಜ್ಶೀಟ್ ಉಲ್ಲೇಖಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
The chargesheet against disgraced Kannada star Darshan has yielded one shocking revelation after the other. The ‘Majestic’ actor is now languishing behind bars for the murder of Renukaswamy, a 33-year-old auto driver. Pavithra Gowda, his alleged girlfriend, has been named as the ‘root cause’ behind the murder in the 3,991-page chargesheet.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm