ಬ್ರೇಕಿಂಗ್ ನ್ಯೂಸ್
29-08-24 11:51 am HK News Desk ಕರ್ನಾಟಕ
ಬಳ್ಳಾರಿ, ಆಗಸ್ಟ್ 29: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕೊಲೆ ಆರೋಪಿ ನಟ ದರ್ಶನ್ ಸ್ಥಳಾಂತರ ಮಾಡಲಾಗಿದೆ. ಇಂದು ಬೆಳಗ್ಗೆ ಬಿಗು ಬಂದೋಬಸ್ತ್ ನಲ್ಲಿ ನಟನನ್ನು ಬೆಂಗಳೂರಿನಿಂದ ಬಳ್ಳಾರಿಗೆ ಕರೆತರಲಾಯಿತು. ಇದೇ ವೇಳೆ, ದರ್ಶನ್ ಅಭಿಮಾನಿಗಳು ಬಳ್ಳಾರಿ ಜೈಲು ಆವರಣದಲ್ಲಿ ಸೇರಿದ್ದು ಜೈಕಾರ ಹಾಕಿದ ಪ್ರಸಂಗವೂ ನಡೆದಿದೆ.
ಬೆಳಗ್ಗಿನಿಂದಲೇ ದರ್ಶನ್ ಅಭಿಮಾನಿಗಳು ಜೈಲಿಗೆ ಬರುವ ರಸ್ತೆ ಉದ್ದಕ್ಕೂ ಜಮಾವಣೆಗೊಂಡಿದ್ದರು. ಇದಕ್ಕಾಗಿ ಭಾರೀ ಬಂದೋಬಸ್ತ್ ಕಲ್ಪಿಸಲಾಗಿತ್ತು. ದರ್ಶನ್ ಅಭಿಮಾನಿಗಳನ್ನು ಜೈಲಿನ ಹತ್ತಿರಕ್ಕೂ ಸುಳಿಯದಂತೆ ತಡೆಯಲಾಗಿತ್ತು. ನೂರಾರು ಪೊಲೀಸರು ಸ್ಥಳದಲ್ಲಿ ಜಮಾಯಿಸಿದ್ದರು. ಆದರೆ ಅಭಿಮಾನಿಗಳನ್ನು ತಡೆಯಲು ಪೊಲೀಸರು ಹರಸಾಹಸ ನಡೆಸುವಂತಾಯಿತು. ದರ್ಶನ್ ಇದ್ದ ವಾಹನ ಬರುತ್ತಲೇ ನೇರವಾಗಿ ಜೈಲಿನ ಆವರಣಕ್ಕೆ ಹೋಗಿದ್ದು ಅಲ್ಲಿ ಸಾಮಾನ್ಯ ಕೈದಿಯಂತೆ ಸಹಿ ಪಡೆದು ತಪಾಸಣೆ ನಡೆಸಿ ಒಳಕ್ಕೆ ಕಳುಹಿಸಲಾಯಿತು.
ಬಳ್ಳಾರಿ ಜಿಲ್ಲಾ ಕಾರಾಗೃಹಕ್ಕೆ ನೂರು ವರ್ಷಕ್ಕೂ ಹೆಚ್ಚಿನ ಇತಿಹಾಸ ಇದೆ. ಬ್ರಿಟಿಷರ ಕಾಲದಲ್ಲಿ ಸ್ಥಾಪನೆಯಾಗಿದ್ದ ಈ ಜೈಲು ಅತಿ ಕಠಿಣ ಶಿಕ್ಷೆ ಜಾರಿಗೊಳಿಸುವ ದೇಶದ ಕೆಲವೇ ಕೆಲವು ಜೈಲುಗಳಲ್ಲಿ ಒಂದು. ಹಿಂದಿನ ಕಾಲದ ಅಂಡಮಾನ್ ಜೈಲಿನ ರೀತಿಯಲ್ಲೇ ಬಳ್ಳಾರಿ ಜೈಲಿಗೆ ಕುಖ್ಯಾತಿ ಇದೆ. ನೇಣು ವಿಧಿಸುವ ವ್ಯವಸ್ಥೆಯೂ ಬಳ್ಳಾರಿ ಜೈಲಿನಲ್ಲಿ ಇದೆ. ದರ್ಶನ್ ಅವರನ್ನು ಇದೀಗ ಪ್ರತ್ಯೇಕ ಇರುವ ವಿವಿಐಪಿ ಸೆಲ್ ನಲ್ಲಿ ಇರಿಸಲು ಸಿದ್ಧತೆ ನಡೆಸಲಾಗಿದೆ. ಕೊರೊನಾ ಸಂದರ್ಭದಲ್ಲಿ ಈ ಸೆಲ್ ಅನ್ನು ಕೈದಿಗಳ ಕ್ವಾರಂಟೈನ್ ಕೇಂದ್ರವಾಗಿ ಮಾಡಲಾಗಿತ್ತು. ಫ್ಯಾನ್, ಶೌಚಾಲಯ ಸೇರಿದಂತೆ ಪ್ರತ್ಯೇಕ ವ್ಯವಸ್ಥೆ ಈ ಸೆಲ್ ನಲ್ಲಿದೆ.
ಹಿಂದೆ ಪಂಜಾಬ್ ಮುಖ್ಯಮಂತ್ರಿಯನ್ನು ಹತ್ಯೆಗೈದ ಉಗ್ರಗಾಮಿಗಳನ್ನು ಬಂಧಿಸಿಡಲು ಸಿದ್ದಪಡಿಸಿದ್ದ ಸೆಲ್ ಇದಾಗಿದೆ. ಇದರಲ್ಲಿ 20ಕ್ಕೂ ಹೆಚ್ಚು ಸೆಲ್ ಗಳಿದ್ದು ಮಂಗಳೂರು, ಶಿವಮೊಗ್ಗ, ಬೆಂಗಳೂರಿನ 11 ಮಂದಿ ಕ್ರಿಮಿನಲ್ ಗಳನ್ನು ಇಡಲಾಗಿದೆ. ದರ್ಶನ್ ಅವರನ್ನು ಬಂಧಿಸಿಡುವ ಸೆಲ್ ಗೆ ಇಬ್ಬರು ವಾಚ್ ಗಾರ್ಡ್ ಮತ್ತು ಒಬ್ಬ ಎಎಸ್ ಐ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಪ್ರತಿ ಮೂರು ಪಾಳಿಗೆ ಸಿಬಂದಿ ಬದಲಾಗಲಿದ್ದಾರೆ.
ಬಳ್ಳಾರಿ ಕಾರಾಗೃಹಕ್ಕೆ ದರ್ಶನ್ ಆಗಮನದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರು. ಮುಂಜಾಗ್ರತಾ ಕ್ರಮವಾಗಿ ಕಾರಾಗೃಹಕ್ಕೆ ತೆರಳುವ ಮಾರ್ಗದ ಎರಡು ಬದಿಯಲ್ಲಿ ಬ್ಯಾರಿಕೇಡ್ ಗಳನ್ನು ನಿರ್ಮಿಸಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
Kannada film star Darshan Thoogudeepa was moved from the Bengaluru prison to the Ballari jail amid tight security on Thursday morning. Also fans who gathered in large number created high drama near the prison.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
03-09-25 09:59 pm
HK News Desk
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
ಅಮೆರಿಕನ್ ಕಂಪನಿಗಳನ್ನು ಬಹಿಷ್ಕರಿಸಲು ರಾಮದೇವ್ ಕರೆ...
01-09-25 01:06 pm
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
03-09-25 08:09 pm
Mangalore Correspondent
Sowjanya Case, SIT, Uday Jain: 13 ವರ್ಷಗಳ ಬಳಿಕ...
03-09-25 03:45 pm
College student Missing, Mangalore: ಮಂಗಳೂರಿನಲ...
03-09-25 11:53 am
ಧರ್ಮಸ್ಥಳ ಪ್ರಕರಣ ಮತ್ತೆ ತಿರುವು ; ಹತ್ಯೆಗೀಡಾದವರ ಸ...
02-09-25 10:26 pm
Mangalore Mukka Accident: ಮುಕ್ಕ ಜಂಕ್ಷನ್ನಲ್ಲಿ...
02-09-25 04:44 pm
03-09-25 05:40 pm
Bangalore Correspondent
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm