ಬ್ರೇಕಿಂಗ್ ನ್ಯೂಸ್
27-08-24 01:41 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 27: ಆರ್ಎಸ್ಎಸ್ ಇಲ್ಲದ ಕಾರಣ ಇಂಡೋನೇಷ್ಯಾದಲ್ಲಿ ಗಲಭೆಗಳಿಲ್ಲ ಎಂದು ನಟ ಪ್ರಕಾಶ್ ರಾಜ್ ಅವರು ಹೇಳಿದ್ದಾರೆಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಈ ಹೇಳಿಕೆಯನ್ನು ಪ್ರಕಾಶ್ ರಾಜ್ ಅವರು ನಿರಾಕರಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ @MeghUpdates ಎಂಬ ಖಾತೆಯಲ್ಲಿ ಪ್ರಕಾಶ್ ರಾಜ್ ಹೇಳಿಕೆಯೆಂದು ಪೋಸ್ಟ್ ಹಾಕಲಾಗಿದೆ. ಆರೆಸ್ಸೆಸ್ ಇದ್ದ ಕಡೆ ಗಲಭೆಗಳು ಆಗುತ್ತವೆ ಎಂದ ಪ್ರಕಾಶ್ ರಾಜ್ ಪರೋಕ್ಷವಾಗಿ ಹೇಳಿದ್ದನ್ನು ಉಲ್ಲೇಖ ಮಾಡಲಾಗಿದೆ. ಇಂಡೋನೇಷ್ಯಾವನ್ನು ಉದಾಹರಣೆಯಾಗಿ ನೀಡಿರುವ ಪ್ರಕಾಶ್ ರಾಜ್, ಶೇ.90 ಮುಸ್ಲಿಮರು, ಶೇ.2ರಷ್ಟು ಹಿಂದೂಗಳು ಹಾಗೂ 11 ಸಾವಿರ ಮಂದಿರಗಳು ಇಂಡೋನೇಷ್ಯಾದಲ್ಲಿ ಇವೆ. ಆದರೆ ಅಲ್ಲಿ ಆರ್ಎಸ್ಎಸ್ ಇಲ್ಲ. ಹಾಗಾಗಿ ಗಲಭೆಗಳು ನಡೆಯಲ್ಲ ಎಂದು ಹೇಳಿದ್ದಾರೆಂದು ಪೋಸ್ಟ್ ಹಾಕಲಾಗಿದೆ.
ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದ್ದು, ಕೆಲವರು ಪ್ರಕಾಶ್ ರಾಜ್ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ, ಹಲವರು ವಿರೋಧ ವ್ಯಕ್ತಪಡಿಸಿ, ಟೀಕಿಸುತ್ತಿದ್ದಾರೆ. ಈ ನಡುವೆ ಜಾಲತಾಣದಲ್ಲಿಯೇ ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿದ್ದು, ಈ ರೀತಿಯ ಹೇಳಿಕೆಯನ್ನು ನಾನು ನೀಡಿಯೇ ಇಲ್ಲ, ಇಂತಹ ಪೋಸ್ಟ್ ಗಳನ್ನು ಸೃಷ್ಟಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ. ನನ್ನ ವಕೀಲರೊದಿಗೆ ಮಾತುಕತೆ ನಡೆಸಲಾಗಿದೆ, ಈ ಬಗ್ಗೆ ಮಂಗಳವಾರ ಕಾನೂನು ಸಮರ ಶುರುವಾಗಲಿದೆ. ಈಗಾಗಲೇ ಟ್ವಿಟರ್ ಗೂ ದೂರು ನೀಡಲಾಗಿದೆ ಎಂದು ಹೇಳಿದ್ದಾರೆ. ಬಲಪಂಥೀಯರು ನನ್ನನ್ನು ಬಿಜೆಪಿ, ಮೋದಿ ಮತ್ತು ಅಮಿತ್ ಶಾ ಅವರ ವಿರುದ್ಧ ಇರುವ ಕಾರಣಕ್ಕಾಗಿಯೇ ಹಿಂದೂಗಳ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ಇಂಥ ಹೇಳಿಕೆ ನೀಡಬೇಕಿದ್ದರೆ @MeghUpdates ನೀವೇ ನೀಡಿ, ನನ್ನ ಹೆಸರು ಬಳಸಿ ಹೇಳಿಕೆ ನೀಡಬೇಡಿ. ನಾನು ಮೂರು ದಿನಗಳಿಂದ ರಂಗಭೂಮಿಯ ಕಾರ್ಯಕ್ರಮದಲ್ಲಿ ನಿರತನಾಗಿದ್ದೆ. ಇದ್ದಕ್ಕಿದ್ದಂತೆ ಪೋಸ್ಟ್ ನೋಡಿದೆ. ಸಾಕಷ್ಟು ಜನರು ಟೀಕೆ ಮಾಡುತ್ತಿದ್ದು, ಕೋಪಗೊಂಡಿದ್ದಾರೆಂದು ತಿಳಿಸಿದ್ದಾರೆ.
Lashing out at the RSS and Bhartiya Janta party (BJP), the acclaimed actor in a recent statement questioned why there are no reports of riots in Indonesia despite its religious diversity. In the statement that has triggered outrage among Hindutva sympathizers on social media, the actor said, “Indonesia is a Muslim-majority country with 90 percent Muslims and barely 2 percent Hindus.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
03-09-25 09:59 pm
HK News Desk
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
ಅಮೆರಿಕನ್ ಕಂಪನಿಗಳನ್ನು ಬಹಿಷ್ಕರಿಸಲು ರಾಮದೇವ್ ಕರೆ...
01-09-25 01:06 pm
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
03-09-25 08:09 pm
Mangalore Correspondent
Sowjanya Case, SIT, Uday Jain: 13 ವರ್ಷಗಳ ಬಳಿಕ...
03-09-25 03:45 pm
College student Missing, Mangalore: ಮಂಗಳೂರಿನಲ...
03-09-25 11:53 am
ಧರ್ಮಸ್ಥಳ ಪ್ರಕರಣ ಮತ್ತೆ ತಿರುವು ; ಹತ್ಯೆಗೀಡಾದವರ ಸ...
02-09-25 10:26 pm
Mangalore Mukka Accident: ಮುಕ್ಕ ಜಂಕ್ಷನ್ನಲ್ಲಿ...
02-09-25 04:44 pm
03-09-25 05:40 pm
Bangalore Correspondent
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm