ಬ್ರೇಕಿಂಗ್ ನ್ಯೂಸ್
26-08-24 11:43 am HK News Desk ಕರ್ನಾಟಕ
ಮೈಸೂರು, ಆಗಸ್ಟ್ 26: ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಜಿಂದಾಲ್ ಕಂಪನಿಗೆ 3667 ಎಕರೆ ಗಣಿ ಭೂಮಿಯನ್ನ ಎಕರೆಗೆ 1 ಲಕ್ಷದ 15 ಸಾವಿರ ದರಕ್ಕೆ ಮಾರಾಟ ಮಾಡಿದ್ದಾರೆ. ಆ ಭೂಮಿಯಲ್ಲಿ ಬೆಲೆಬಾಳುವ ಐರನ್, ಮಿನರಲ್ಸ್, ಕಂಟೆಟ್ ಇದೆ. ಬೆಸ್ಟ್ ಓರಲ್ಸ್ ಸಿಗುವ 62% ಈಲ್ಡ್ ಬರುವ ಭೂಮಿಯನ್ನ ಜಿಂದಾಲ್ ಅವ್ರಿಗೆ ಏಕಪಕ್ಷೀಯವಾಗಿ ಕೇವಲ 52 ಕೋಟಿಗೆ ಮಾರಾಟ ಮಾಡಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಸುದ್ದಿಗೋಷ್ಟಿ ನಡೆಸಿದ ಅವರು, ಖನಿಜ ಸಂಪತ್ತಿರುವ ಭೂಮಿಗೆ ಯಾವುದೇ ಬೆಲೆ ಕಟ್ಟೋಕೆ ಆಗೋದಿಲ್ಲ. 2017 ರಲ್ಲಿ ಕಾನೂನು ಇಲಾಖೆ ಭೂಮಿಯ ಬೆಲೆಯನ್ನು ಒಳಗಿರುವ ಅದಿರು ಪ್ರಮಾಣ ನೋಡಿ ಮಾರಾಟ ಮಾಡಬೇಕು ಎಂದು ವರದಿ ನೀಡಿತ್ತು. ಅನುಕೂಲಕ್ಕೆ ತಕ್ಕಂತೆ ಸರ್ಕಾರದ ಭೂಮಿಯನ್ನು ಪರಭಾರೆ ಮಾಡಿದ್ದಾರೆ. ಇದೊಂದು ಜನವಿರೋಧಿ ನೀತಿಯಾಗಿದ್ದು ಈ ಬಗ್ಗೆ ಸಿದ್ದರಾಮಯ್ಯ ಅವರು ಮಾತನಾಡಬೇಕು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಆಗುತ್ತದೆ. ಒಟ್ಟಾರೆ ಭೂಮಿಯ ಬೆಲೆ 52 ಕೋಟಿಗಳಿಗೆ ಮಾರಾಟ ಮಾಡಿದ್ದಾರೆ.
ಸಿದ್ದರಾಮಯ್ಯ ತಮ್ಮ 14 ಸೈಟ್ ಗೆ 62 ಕೋಟಿ ಕೇಳ್ತಾರೆ, ಈ ಭೂಮಿಯನ್ನ ಒಟ್ಟಾರೆ 52 ಕೋಟಿಗೆ ಮಾರಾಟ ಮಾಡಿದ್ದಾರೆ, ಇದ್ಯಾವ ನ್ಯಾಯ? ಇದು ಹಲವಾರು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಇದನ್ನ ಕ್ಯಾಬಿನೆಟ್ ಜಾಯಿಂಟ್ ಸೆಲೆಕ್ಟ್ ಕಮಿಟಿಗೆ ಮುಂದಿಡಲು ನಾನು ಹೇಳಿದ್ದೆ. ಈ ವಿಚಾರದಲ್ಲಿ ತರಾತುರಿ ಬೇಡ, ಖನಿಜ ಸಂಪತ್ತು ಸರ್ಕಾರದ ಮತ್ತು ಎಲ್ಲ ಜನರ ಆಸ್ತಿ. ಇದನ್ನ ಜಾಂಟ್ ಸೆಲೆಕ್ಟ್ ಕಮಿಟಿ ಮುಂದಿಟ್ಟು ತಿರ್ಮಾನ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಮುಡಾಗೆ ಇಷ್ಟೋದು ಸೆಕ್ಯುರಿಟಿ ಯಾಕೆ ಎಂದು ಪ್ರಶ್ನಿಸಿದ ವಿಶ್ವನಾಥ್, ಮುಡಾಗೆ ಪ್ರತಿ ತಿಂಗಳು 5 ಕೋಟಿ ಸಂಬಳ ಖರ್ಚು ವೆಚ್ಚಕ್ಕೆ ಬೇಕು. ಎರಡು ತಿಂಗಳಿಂದ 10 ಕೋಟಿ ಖರ್ಚಾಗಿದೆ. ಏನೂ ಕೆಲಸ ಮುಡಾದಿಂದ ನಡೆಯುತ್ತಿಲ್ಲ. ಮುಡಾ ಹಗರಣಕ್ಕಾಗಿ ಒನ್ ಮ್ಯಾನ್ ಕಮಿಷನ್ ಮಾಡಿದ್ದೀರಿ ಸಿದ್ದರಾಮಯ್ಯ ಅವ್ರೇ. ಒನ್ ಮ್ಯಾನ್ ಕಮಿಷನ್ ಕುಮಾರಕೃಪಾದಿಂದ ಆಪರೇಟ್ ಆಗ್ತಾ ಇದೆ. ಒನ್ ಮ್ಯಾನ್ ಕಮಿಷನ್ ಗಾಗಿಯೇ ಮೇಜು ಖುರ್ಚಿ ಅಂತಾ 1.5 ಕೋಟಿ ಖರ್ಚು ಆಗಿದೆ. ರೀ ಡು ವಿಚಾರದಲ್ಲಿ ಕೆಂಪಣ್ಣ ಆಯೋಗದ ವರದಿ ಬಿಡುಗೆ ಮಾಡಿ. ಕೆಂಪಣ್ಣ ವರದಿ ಬಿಡುಗಡೆ ಆದ್ರೆ ಸಿದ್ದರಾಮಯ್ಯ ಪಂಚೆ ಶರ್ಟು ಎಲ್ಲ ಮಸಿ ಆಗೋದು ಗ್ಯಾರಂಟಿ ಎಂದು ಎಚ್.ವಿಶ್ವನಾಥ್ ಹೇಳಿದರು.
He sold 3,667 acres of mining land at Sandur in Ballari district to jindal company at the rate of Rs 1 lakh 15,000 per acre. There are precious iron, minerals, content in that land. Jindal unilaterally sold 62% of the land yielded by Best Orals to him unilaterally for just Rs 52 crore.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
03-09-25 10:04 pm
HK News Desk
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
ಅಮೆರಿಕನ್ ಕಂಪನಿಗಳನ್ನು ಬಹಿಷ್ಕರಿಸಲು ರಾಮದೇವ್ ಕರೆ...
01-09-25 01:06 pm
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
03-09-25 11:03 pm
Mangalore Correspondent
Kmc Attavar, Mangalore News: 43 ವರ್ಷದ ಮಹಿಳೆಗೆ...
03-09-25 10:52 pm
Sullia, Sampaje Accident: ಸಂಪಾಜೆ ಬಳಿ ಭೀಕರ ಅಪಘ...
03-09-25 08:09 pm
Sowjanya Case, SIT, Uday Jain: 13 ವರ್ಷಗಳ ಬಳಿಕ...
03-09-25 03:45 pm
College student Missing, Mangalore: ಮಂಗಳೂರಿನಲ...
03-09-25 11:53 am
03-09-25 05:40 pm
Bangalore Correspondent
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm