ಬ್ರೇಕಿಂಗ್ ನ್ಯೂಸ್
29-07-24 01:49 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 28: ಮದುವೆ ನಿಶ್ಚಯವಾಗಿದ್ದ ಹೆಣ್ಣು ಮಗಳೊಬ್ಬಳು ನಿನ್ನೆ ಕಸದ ಲಾರಿಯಡಿಗೆ ಸಿಲುಕಿ ದುರಂತವಾಗಿ ಸಾವನ್ನಪ್ಪಿದ ಘಟನೆ ಕೆ.ಆರ್ ಸರ್ಕಲ್ ಬಳಿ ನಡೆದಿದೆ. ಬೆಳಗ್ಗೆ ಮದುವೆ ಬಗ್ಗೆ ಪ್ರಸ್ತಾಪವಾಗಿ ಸಂಜೆ ವೇಳೆಗೆ BBMP ಕಸದ ಲಾರಿಯಡಿಗೆ ಸಿಲುಕಿ ಶಿಲ್ಪ ಎಂಬಾಕೆ ಕೊನೆಯುಸಿರೆಳೆದಿದ್ದಾಳೆ.
ನಿನ್ನೆ ರಾತ್ರಿ 9 ಗಂಟೆಗೆ ಪ್ರಶಾಂತ್ (25) ಮತ್ತು ಶಿಲ್ಪ (25) ಬೈಕ್ನಲ್ಲಿ ಚಲಿಸುತ್ತಿದ್ದ ವೇಳೆ BBMP ಕಸದ ಲಾರಿಯಡಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಮೃತರಿಬ್ಬರು ಸ್ನೇಹಿತರಾಗಿದ್ದು, ಐಟಿಪಿಎಲ್ ಟಿಸಿಎಸ್ನಲ್ಲಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಶಿಲ್ಪ ಆಂಧ್ರದ ಇಂದುಪುರ ನಿವಾಸಿ. ನಾಗವಾರದ ಪಿಜಿಯಲ್ಲಿ ವಾಸ ಮಾಡಿಕೊಂಡಿದ್ದಳು. ಈಕೆ ತಂದೆ ವೆಂಕಟರಾಮ ರೆಡ್ಡಿ. ಗಾರೆ ಮೇಸ್ತ್ರಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು.
ವೆಂಕಟರಾಮ ರೆಡ್ಡಿಗೆ ಒಟ್ಟು ಮೂವರು ಹೆಣ್ಣು ಮಕ್ಕಳು. ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಆಗಿದೆ. ಶಿಲ್ಪ ಕೊನೆಯ ಮಗಳು. ಆಕೆಯ ಮದುವೆ ತಯಾರಿ ಕೂಡ ನಡೀತಿತ್ತು. ಆದರೆ ಅಷ್ಟರಲ್ಲಿ ವಿಧಿಯ ಕ್ರೂರ ಲೀಲೆಗೆ ಬಲಿಯಾಗಿದ್ದಾಳೆ.
ತಂದೆ ವೆಂಕಟರಾಮ ರೆಡ್ಡಿ ಮಗಳ ಮದುವೆಗೆ ಚಿನ್ನವನ್ನು ಮಾಡಿಸಿಟ್ಟಿದ್ದನು. ಭಾನುವಾರ ಬೆಳಗ್ಗೆ ಕೂಡ ಮದುವೆ ಮಾತುಕತೆ ಪ್ರಸ್ತಾಪ ಆಗಿತ್ತು. ಆದರೆ ನಿನ್ನೆ ಸಂಜೆ ಹೊತ್ತಿಗೆ ಅಪಘಾತದಲ್ಲಿ ಯುವತಿ ಸಾವನ್ನಪ್ಪಿದ್ದಾಳೆ.
ಶಿಲ್ಪ ಮೃತದೇಹ ಬೌರಿಂಗ್ ಆಸ್ಪತ್ರೆ ಶವಾಗಾರದಲ್ಲಿದ್ದು, ಆಕೆಯನ್ನು ಕಾಣಲು ಪೋಷಕರು ಆಗಮಿಸಿದ್ದಾರೆ. ಶವಾಗಾರದ ಬಳಿ ಶಿಲ್ಪ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ನಿನ್ನೆ ಭಾನುವಾರ ರಜೆ ಹಿನ್ನೆಲೆಯಲ್ಲಿ ಸಂಜೆ ಸ್ನೇಹಿತನ ಜೊತೆ ಊಟಕ್ಕೆ ಎಂದು ಹೋಗಿದ್ದಳು. ರಾತ್ರಿಯ ಊಟ ಮುಗಿಸಿ ಮೆಜೆಸ್ಟಿಕ್ನಿಂದ ಕೆ.ಆರ್.ಸರ್ಕಲ್ ಮಾರ್ಗವಾಗಿ ಬೈಕ್ನಲ್ಲಿ ಬರುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದೆ. ಸಿಐಡಿ ಸಿಗ್ನಲ್ ಮಾರ್ಗದಿಂದ ಕೆ.ಆರ್.ಸರ್ಕಲ್ ಕಡೆ ವೇಗವಾಗಿ ಬಂದ ಕಸದ ಲಾರಿ, ಬೈಕ್ಗೆ ಗುದ್ದಿದೆ. ಅಪಘಾತದ ರಭಸಕ್ಕೆ 10 ಮೀಟರ್ ನಷ್ಟು ದೂರ ಮೃತರ ದೇಹಗಳು ಹೋಗಿ ಬಿದ್ದಿವೆ.
ಪರಿಣಾಮ ರಸ್ತೆ ಮೇಲೆ ರಕ್ತ ಚೆಲ್ಲಿದೆ. ಕೂಡಲೇ ಅಪಘಾತಕ್ಕೊಳಗಾದವರನ್ನ ಆಸ್ಪತ್ರೆಗೆ ಸಾಗಿಸುವ ಕೆಲಸ ನಡೆದಿತ್ತು, ಆದರೆ ಮಾರ್ಗದಲ್ಲಿಯೇ ಸಾವನ್ನಪ್ಪಿದ್ದಾರೆ. ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BBMP truck bike accident, deceased girl marriage was fixed by family, tragedy. Two employees in a privatre firm were killed when a Bruhat Bengaluru Mahanagara Palike's (BBMP) garbage truck knocked down their bike near KR Circle on Sunday night. The deceased were identified as Prashanth of Banaswadi Biyanugari Shilpa, of Andhra Pradesh.
18-03-25 11:02 pm
Bangalore Correspondent
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
Bangalore JCB Accident, Two Killed; ರಸ್ತೆ ಕಾಮ...
18-03-25 02:30 pm
Tumkur Wedding News, Water: ನೀರಿನ ವಿಚಾರದಲ್ಲಿ...
18-03-25 01:08 pm
ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್ ಸದ್ಯದಲ್ಲೇ...
17-03-25 11:54 am
17-03-25 10:57 pm
HK News Desk
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
18-03-25 10:09 pm
Mangalore Correspondent
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
Mangalore Accident, Kallapu: ನಿಯಂತ್ರಣ ತಪ್ಪಿ ಆ...
17-03-25 08:01 pm
18-03-25 06:31 pm
Mangalore Correspondent
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am