ಬ್ರೇಕಿಂಗ್ ನ್ಯೂಸ್
05-06-24 05:48 pm HK News Desk ಕರ್ನಾಟಕ
ಬೀದರ್, ಜೂನ್ 5: ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಸೋಲುಣಿಸಿ ಸಂಸತ್ಗೆ ಪ್ರವೇಶಿಸಿರುವ ಬೀದರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಅರಣ್ಯ ಸಚಿವ ಈಶ್ವರ್ ಖಂಡ್ರೆಯವರ ಪುತ್ರ 26 ವರ್ಷದ ಸಾಗರ್ ಖಂಡ್ರೆ ದೇಶದ ಅತಿ ಕಿರಿಯ ಸಂಸದರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅರಣ್ಯ ಸಚಿವ ಈಶ್ವರ ಖಂಡ್ರೆಯವರ ಪುತ್ರ ಸಾಗರ್ 26 ವರ್ಷದ ಯುವಕನಾಗಿದ್ದು, ಬಿಬಿಎ- ಎಲ್ಎಲ್ಬಿ ಪದವೀಧರ. ರಾಜಕೀಯ ಕಣಕ್ಕಿಳಿದು ಮೊದಲ ಸ್ಪರ್ಧೆಯಲ್ಲೇ ಗೆಲುವಿನ ನಗೆ ಬೀರಿದ್ದಾರೆ. 2019ರ ಚುನಾವಣೆಯಲ್ಲಿ ಬೀದರಿನಲ್ಲಿ ತನ್ನ ತಂದೆಯನ್ನು ಸೋಲಿಸಿದ್ದ ಖೂಬಾ ವಿರುದ್ಧ ಕಳೆದ ಸಲಕ್ಕಿಂತ ಅಧಿಕ ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಆಮೂಲಕ ತಂದೆಯ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ. 1,28,875 ಮತಗಳ ಅಂತರದಿಂದ ಗೆಲುವು ಕಂಡ ಸಾಗರ ಖಂಡ್ರೆ 6,66317 ಮತ ಪಡೆದಿದ್ದರು. ಎರಡು ಬಾರಿಯ ಬಿಜೆಪಿ ಸಂಸದ ಭಗವಂತ ಖೂಬಾ 5,37442 ಮತಗಳನ್ನು ಪಡೆದಿದ್ದರು.
2019ರ ಚುನಾವಣೆಯಲ್ಲಿ ಭಗವಂತ ಖೂಬಾ ಅವರು ಎದುರಾಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಈಶ್ವರ್ ಖಂಡ್ರೆ ಅವರನ್ನು 1,16834 ಮತಗಳಿಂದ ಸೋಲಿಸಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಭಗವಂತ ಖೂಬಾ ಅವರು ಮಾಜಿ ಮುಖ್ಯಮಂತ್ರಿ ಎನ್.ಧರ್ಮ ಸಿಂಗ್ ಅವರನ್ನು 92192 ಮತಗಳಿಂದ ಸೋಲಿಸಿದ್ದರು.
ರಾಜ್ಯ ಯುವ ಕಾಂಗ್ರೆಸ್ ಘಟಕದಲ್ಲಿ ಮುಂಚೂಣಿ ನಾಯಕರಾಗಿ, ಭಾಲ್ಕಿಯ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ಸಾಗರ್, ತಮ್ಮ ತಂದೆ ಈಶ್ವರ್ ಖಂಡ್ರೆಯವರ ಗರಡಿಯಲ್ಲಿ ಹೆಜ್ಜೆಯಿಟ್ಟವರು. ಸಾಗರ್ ಅವರ ತಾತ ಶತಾಯುಷಿ ಡಾ. ಭೀಮಣ್ಣ ಖಂಡ್ರೆ ಅವರು ಸಹ ಕಾಂಗ್ರೆಸ್ನಲ್ಲಿ ಸಚಿವರಾಗಿದ್ದರು.
Sagar Khandre, the 26-year-old Congress candidate fighting the elections for the first time, has won the Bidar seat by defeating the union minister Bhagwant Khuba by a margin of 1.29 lakh votes.
20-03-25 10:48 pm
Bangalore Correspondent
Honey Trapped, Minister, Probe: ಅಧಿವೇಶನದಲ್ಲಿ...
20-03-25 09:52 pm
Bangalore Marriage case, Srikanth Bindushree:...
20-03-25 01:07 pm
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
20-03-25 10:40 pm
HK News Desk
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm