ಬ್ರೇಕಿಂಗ್ ನ್ಯೂಸ್
29-05-24 04:14 pm HK News Desk ಕರ್ನಾಟಕ
ಶಿವಮೊಗ್ಗ, ಮೇ 29: ಪಕ್ಷದ ಅವ್ಯವಸ್ಥೆಗೆ ಸರಿಯಾದ ಉತ್ತರ ಸಿಗಬೇಕು ಎಂದು ಸ್ಪರ್ಧೆ ಮಾಡುತ್ತಿದ್ದೇನೆ. ಪಕ್ಷೇತರ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಸ್ಪರ್ಧೆ ಮಾಡುತ್ತಿದ್ದೇನೆ. ನನ್ನ ಸ್ಪರ್ಧೆಯಿಂದ ವಿಧಾನ ಪರಿಷತ್ ಚುನಾವಣೆಯ ಕಾವು ಏರಿದೆ. ಚುನಾವಣೆಯ ನಂತರ ಹೊಸ ಮನ್ವಂತರ ಬರಲಿದೆ ಎಂದು ಪದವೀಧರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿದ ರಘುಪತಿ ಭಟ್, ಚುನಾವಣೆಗೆ ನಾಲ್ಕು ದಿನ ಉಳಿದಿದೆ. ಈಗಾಗಲೇ ಎಲ್ಲಾ ಜಿಲ್ಲೆ ಹಾಗೂ ಮತದಾರರನ್ನು ಭೇಟಿ ಮಾಡಿದ್ದೇನೆ. ಶಿವಮೊಗ್ಗದಲ್ಲಿ ಲೋಕಸಭೆ ಪ್ರಭಾರಿಯಾಗಿ 45 ದಿನ ಕೆಲಸ ಮಾಡಿದ್ದೇನೆ. ಎಲ್ಲಾ ಕಡೆ ಉತ್ತಮ ಬೆಂಬಲ ಸಿಗುತ್ತಿದೆ. ಅನೇಕ ಹಿರಿಯರು ಬೆಂಬಲ ನೀಡುತ್ತಿದ್ದಾರೆ.
ಈಶ್ವರಪ್ಪನವರ ಬೆಂಬಲದಿಂದ ಕಾರ್ಯಕರ್ತರ ಶಕ್ತಿ ಇಮ್ಮಡಿಯಾಗಿದೆ. ಭಂಡ ಧೈರ್ಯ ಮಾಡಿ ಸ್ಪರ್ಧೆ ಮಾಡುತ್ತಿದ್ದೇನೆ. ಕರಾವಳಿ ಜಿಲ್ಲೆಗಳ ಜೊತೆಗೆ ಮಲೆನಾಡು ಭಾಗದಲ್ಲೂ ಉತ್ತಮ ಬೆಂಬಲ ಸಿಗುತ್ತಿದೆ. ಈ ಮಟ್ಟದ ಬೆಂಬಲ ನೀರಿಕ್ಷೆ ಮಾಡಿರಲಿಲ್ಲ. ವಿಧಾನ ಪರಿಷತ್ ಸದಸ್ಯನಾದ ಮೇಲೆ ಮಲೆನಾಡನ್ನು ಸಹ ಜೊತೆಗೆ ತೆಗೆದುಕೊಂಡು ಹೋಗುತ್ತೇನೆ. ಬಿಜೆಪಿ ಕಾರ್ಯಕರ್ತರ ಗಟ್ಟಿ ಧ್ವನಿಯಾಗಿ ನಾನು ಇರ್ತೇನೆ. ಪರಿಷತ್ ಚುನಾವಣೆಯಲ್ಲಿ ನಾನೇ ಗೆಲುವು ಸಾಧಿಸುತ್ತೇನೆ.
ಮಲೆನಾಡಿನ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್ ನಲ್ಲಿ ಧ್ವನಿಯಾಗುತ್ತೇನೆ. ಚನ್ನಗಿರಿಯಲ್ಲಿ ನಡೆದ ಘಟನೆಯನ್ನು ನೋಡಿ ಬಂದಿದ್ದೇನೆ. ಪೊಲೀಸ್ ಠಾಣೆ ನೋಡಿದರೆ ಭಾರತ ಎಲ್ಲಿ ಹೋಗುತ್ತಿದೆ ಎಂದು ಭಯ ಆಗುತ್ತಿದೆ. ಅಲ್ಲಿದ್ದ ವಾಹನಗಳನ್ನು ಜಖಂಗೊಳಿಸಿದ್ದಾರೆ. ನಮ್ಮನ್ನ ರಕ್ಷಿಸುವ ಹೊಣೆ ಹೊತ್ತ ಪೊಲೀಸರ ಮೇಲೆ ದಾಳಿ ಆಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಈ ರೀತಿಯ ಘಟನೆ ನಡೆಯುತ್ತಿದೆ.
ಬಿಜೆಪಿ ಕಾರ್ಯಕರ್ತರು ನಮ್ಮ ಕಾರ್ಯಕರ್ತರು. ಹಿಂದುತ್ವದ ಧ್ವನಿಯಾಗಲು ನಾನು ಸ್ಪರ್ಧಿಸುತ್ತಿದ್ದೇನೆ. ಲಾಬಿ ಮಾಡಿ ಬಕೆಟ್ ಹಿಡಿಯುತ್ತಿದ್ದರೆ ಟಿಕೆಟ್ ತರುತ್ತಿದ್ದೆ. ಆ ಕೆಲಸ ನಾನು ಮಾಡಿಲ್ಲ. ಯಾರು ಟಿಕೆಟ್ ನೀಡುತ್ತಾರೆ ಅನ್ನೋದು ನನಗೆ ಗೊತ್ತಿಲ್ಲ. ನಾನು ಗೆದ್ದ ನಂತರ ನನ್ನನ್ನು ಪಕ್ಷಕ್ಕೆ ಕರೆದುಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ. ಜಗದೀಶ್ ಶೆಟ್ಟರ್ ಅವರನ್ನೇ ರತ್ನ ಕಂಬಳಿ ಹಾಕಿ ಲೋಕಸಭೆ ಟಿಕೆಟ್ ನೀಡಿದ್ದಾರೆ. ನನಗೆ ಅನ್ವಯ ಆಗಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
Udupi former MLA Raghupati Bhat says will show my results in Parishad elections.
17-01-26 05:53 pm
HK News Desk
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
ಕೆಲಸದ ಒತ್ತಡ ; ಮಕ್ಕಳಿಗೆ ಪಾಠ ಮಾಡಿ ಶಾಲಾ ಕೊಠಡಿಯಲ್...
15-01-26 05:56 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm