ಬ್ರೇಕಿಂಗ್ ನ್ಯೂಸ್
23-05-24 02:03 pm HK NEWS ಕರ್ನಾಟಕ
ಮಂಗಳೂರು, ಮೇ 22 ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಬಂಧನಕ್ಕಾಗಿ ಪೊಲೀಸರು ಇಡೀ ದಿನ ನಡೆಸಿದ ಪ್ರಯತ್ನ ಕೊನೆಗೂ ಫಲ ನೀಡಲಿಲ್ಲ. ಬಿಜೆಪಿ ಕಾರ್ಯಕರ್ತರ ಒಕ್ಕೊರಲ ಕೂಗು, ಬಂಧನಕ್ಕೆ ಅವಕಾಶ ನೀಡುವುದಿಲ್ಲ ಎಂಬ ಬಿಗಿ ಪಟ್ಟಿಗೆ ಪೊಲೀಸರು ಕಡೆಗೂ ಮನವೊಲಿದಿದ್ದು ವಿಚಾರಣೆಗೆ ಬರುವಂತೆ ಹೇಳಿ ನೋಟೀಸ್ ಕೊಟ್ಟು ತೆರಳಿದ್ದಾರೆ.
ಹರೀಶ್ ಪೂಂಜ ಅವರ ಗರ್ಡಾಡಿಯ ಮನೆಯಲ್ಲಿ ಬೆಳಗ್ಗಿನಿಂದಲೇ ಭಾರೀ ಸಂಖ್ಯೆಯಲ್ಲಿ ಪೊಲೀಸರು ಮತ್ತು ಕಾರ್ಯಕರ್ತರು ಸೇರಿದ್ದರು. ಎರಡು ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಶಾಸಕರ ಬಂಧನಕ್ಕೆ ಆಗಮಿಸಿದ್ದಾರೆಂದು ತಿಳಿದ ಕಾರ್ಯಕರ್ತರು ಮನೆಯ ಮುಂಭಾಗದಲ್ಲಿ ಸೇರಿದ್ದರು. ದಿನವಿಡೀ ವಕೀಲರು ಮತ್ತು ಬಿಜೆಪಿ ನಾಯಕರು, ಶಾಸಕರು ಪೊಲೀಸರ ಜೊತೆಗೆ ಮಾತುಕತೆ ನಡೆಸಿದರೂ ಫಲ ನೀಡದೇ ಇದ್ದಾಗ ಮನೆಯ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರ ಸಂಖ್ಯೆಯೂ ಹೆಚ್ಚತೊಡಗಿತು. ಪೊಲೀಸರು ಕೋಟೆ ಭೇದಿಸಲಾಗದಷ್ಟು ಕಾರ್ಯಕರ್ತರು ಸೇರಿದ್ದು ಮತ್ತು ಕತ್ತಲು ಆವರಿಸಿದ್ದರಿಂದ ಡಿವೈಎಸ್ಪಿ ವಿಜಯಕುಮಾರ್ ಬಂಧನ ಕ್ರಮದಿಂದ ಹಿಂದೆ ಸರಿದಿದ್ದಾರೆ.
ಒಂದು ಬಿಸ್ಕಿಟ್ ತಿಂದು ನನ್ನ ಜೊತೆ ನಿಂತಿದ್ದಾರೆ
ನೋಟೀಸ್ ಪಡೆದುಕೊಂಡ ಶಾಸಕ ಹರೀಶ್ ಪೂಂಜ, ಮೂರು ದಿನಗಳಲ್ಲಿ ಠಾಣೆಗೆ ಬಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಸ್ಥಳದಿಂದ ಹಿಂದೆ ತೆರಳುತ್ತಿದ್ದಂತೆ, ಕಾರ್ಯಕರ್ತರೂ ಜಾಗ ಖಾಲಿ ಮಾಡತೊಡಗಿದ್ದಾರೆ. ಇದೇ ವೇಳೆ, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಪೂಂಜ, ನನ್ನ ಕ್ಷೇತ್ರದ ಕಾರ್ಯಕರ್ತರು ತಮ್ಮ ನೈಜ ಶಕ್ತಿಯನ್ನು ಇವತ್ತು ತೋರಿಸಿದ್ದಾರೆ. ಒಂದು ಬಿಸ್ಕಿಟ್ ತಿಂದು ಇಡೀ ದಿನ ಕದಲದೆ ನಿಂತಿದ್ದಾರೆ, ಅವರಿಗೆಲ್ಲ ಅಭಿನಂದನೆ ಹೇಳುತ್ತೇನೆ ಎಂದಿದ್ದಾರೆ. ಕೇವಲ ರಾಜಕೀಯ ಕಾರಣಕ್ಕಾಗಿ ಶಶಿರಾಜ್ ಶೆಟ್ಟಿಯನ್ನು ಕಲ್ಲು ಕೋರೆ ಪ್ರಕರಣದಲ್ಲಿ ಬಂಧಿಸಿದ್ದಾರೆ. ಆತನಿಗೂ ಕಲ್ಲು ಕೋರೆಗೂ ಸಂಬಂಧ ಇಲ್ಲ. ಅದನ್ನು ವಿರೋಧಿಸಿ ಪೊಲೀಸ್ ಠಾಣೆಗೆ ತೆರಳಿದ್ದೆ. ಆ ಸಂದರ್ಭದಲ್ಲಿ ಮಾತನಾಡಿದ್ದ ಕಾರಣಕ್ಕೆ 2-3 ಕೇಸು ಹಾಕಿದ್ದಾರೆ.
ಸಿದ್ದರಾಮಯ್ಯ ಬಿದರಿಯ ಕಾಲರ್ ಪಟ್ಟಿ ಹಿಡಿದಿಲ್ವಾ..
ಹಾಗೆಂದು, ನಾನು ಅಧಿಕಾರಕ್ಕಾಗಿ ಪೊಲೀಸರಿಗೆ ಬೈದಿಲ್ಲ. ಅಂದು ಸಿದ್ದರಾಮಯ್ಯ ಅಧಿಕಾರಕ್ಕಾಗಿ ಶಂಕರ್ ಬಿದರಿಯವರ ಕಾಲರ್ ಪಟ್ಟಿ ಹಿಡಿದಿದ್ದರು. ನಾನು ಕಾರ್ಯಕರ್ತರ ಕಾರಣಕ್ಕೆ ಬೈದಿದ್ದೇನೆ ಹೊರತು ಅಧಿಕಾರಕ್ಕಾಗಿ ಅಲ್ಲ. ಕಾಂಗ್ರೆಸ್ ಸರಕಾರಕ್ಕೆ ನೈತಿಕತೆ ಇಲ್ಲ. ಪೊಲೀಸರ ಮೇಲೆ ಅತಿ ಹೆಚ್ಚು ದೌರ್ಜನ್ಯ ಮಾಡಿದವರು ಕಾಂಗ್ರೆಸಿನವರು. ಹಿಂದಿನಿಂದ ತುರ್ತು ಸ್ಥಿತಿಯ ಕಾಲದಿಂದಲೂ ಅವರು ಈ ರೀತಿ ಮಾಡಿಕೊಂಡು ಬಂದಿದ್ದಾರೆ. ಚುನಾವಣೆ ನೀತಿಸಂಹಿತೆ ಕಾರಣಕ್ಕೆ ಮೊನ್ನೆ ಪ್ರತಿಭಟನೆಗೆ ಅವಕಾಶ ಇಲ್ಲ ಎಂದಿದ್ದರು. ಕಾಂಗ್ರೆಸಿನವರು ರೇವಣ್ಣ ಬಂಧನ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಪ್ರತಿಭಟನೆ ನಡೆಸಿದರಲ್ವಾ.. ಆವಾಗ ನೀತಿಸಂಹಿತೆ ಅಡ್ಡಿ ಅಗಿರಲಿಲ್ಲವೇ. ಇಲ್ಲಿ ಸೆಕ್ಷನ್ ಇದೆಯೆಂದು ಹೇಳಿ, ಬಿಜೆಪಿ ಕಾರ್ಯಕರ್ತರು ಸೇರದಂತೆ ಪೊಲೀಸರು ಪ್ರಯತ್ನಿಸಿದ್ದರು. ಆದರೆ, ಬೆಳ್ತಂಗಡಿಯ ಕಾರ್ಯಕರ್ತರು ಗೊಡ್ಡು ಬೆದರಿಕೆಗೆ ಸೊಪ್ಪು ಹಾಕಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಇಷ್ಟಕ್ಕೂ ಮೊನ್ನೆ ಸಿದ್ದರಾಮಯ್ಯ ಬಂದು ಹೋದ ಬಳಿಕ ಪೊಲೀಸರು ನಮ್ಮ ಮೇಲೆ ಕೇಸು ಹಾಕಿದ್ದಾರೆ. ಯಾಕೆ ನಿಮಗೆ ಅಲ್ಲಿವರೆಗೆ ಧೈರ್ಯ ಬಂದಿಲ್ಲ. ಬಿಜೆಪಿ ಕಾರ್ಯಕರ್ತರ ಮೇಲೆ ಕೇಸು ಹಾಕುವ ಧೈರ್ಯ ಇವರಿಗೆ ಇರಲಿಲ್ಲ.
ಇದೆಲ್ಲ ಷಡ್ಯಂತ್ರವನ್ನೂ ಬಿಜೆಪಿ ಕಾರ್ಯಕರ್ತರು ಸಮರ್ಥವಾಗಿ ಎದುರಿಸಿದ್ದಾರೆ, ಇವತ್ತು 9 ಪೊಲೀಸ್ ತುಕಡಿಗಳು, 25 ಎಸ್ಐಗಳು, ಒಬ್ಬ ಡಿವೈಎಸ್ಪಿ, ಮೂರ್ನಾಲ್ಕು ಸರ್ಕಲ್ ಇನ್ಸ್ ಪೆಕ್ಟರ್ ಗಳು ನನ್ನನ್ನು ಬಂಧಿಸಲು ಬಂದಿದ್ದರು. ಆದರೆ ಇವರೆಲ್ಲರನ್ನೂ ಹಿಮ್ಮೆಟ್ಟಿಸಿದ್ದು ನಮ್ಮ ಕಾರ್ಯಕರ್ತರು. ನಾನು ಹೈಕೋರ್ಟಿನಲ್ಲಿ ಕಾನೂನು ಪ್ರಾಕ್ಟೀಸ್ ಮಾಡಿ ಬಂದವನು. ಕಾನೂನು ಬಗ್ಗೆ ತಿಳಿದುಕೊಂಡಿದ್ದೇನೆ. ಪೊಲೀಸರು ಪಾಠ ಮಾಡುವ ಅಗತ್ಯವಿಲ್ಲ. ವಕೀಲರು ಪೊಲೀಸರಿಗೆ, ಈ ಪ್ರಕರಣದಲ್ಲಿ ಬಂಧನ ಮಾಡಿದರೆ, ಮುಂದೆ ನಿಮಗೆ ತೊಂದರೆ ಆಗಬಹುದು ಎಂಬ ಅರಿವು ಮೂಡಿಸಿದ್ದಾರೆ. ಈ ಬಗ್ಗೆ ಅರಿತುಕೊಂಡ ಪೊಲೀಸ್ ಅಧಿಕಾರಿಗಳು ಬಂಧನ ಕೈಬಿಟ್ಟು ತೆರಳಿದ್ದಾರೆ ಎಂದು ಹರೀಶ್ ಪೂಂಜ ಹೇಳಿದರು.
Belthangady Police leave Harish poonja without arresting after high drama near his residence
17-01-26 08:02 pm
HK News Desk
ದೇವನಹಳ್ಳಿ - ಬೂದಿಗೆರೆ ರಸ್ತೆಯಲ್ಲಿ ಭೀಕರ ಅಪಘಾತ ; ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm