ಬ್ರೇಕಿಂಗ್ ನ್ಯೂಸ್
04-12-20 11:20 am Bangalore Correspondent ಕರ್ನಾಟಕ
ಬೆಂಗಳೂರು, ಡಿ.4: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣದಲ್ಲಿ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ್ದು ವರ್ತೂರು ಪ್ರಕಾಶ್ ಅವರೇ ಸಾಲದ ಸುಳಿಯಿಂದ ಪಾರಾಗಲು ಅಪಹರಣದ ನಾಟಕವಾಡಿದರೇ ಎಂಬ ಅನುಮಾನ ಮೂಡಿದೆ.
ವರ್ತೂರು ಪ್ರಕಾಶ್ ಈ ಹಿಂದೆ ಸಚಿವರಾಗಿದ್ದ ವೇಳೆ ಮಹಾರಾಷ್ಟ್ರದ ಸೇಠ್ ಒಬ್ಬರಿಂದ ಐದು ಕೋಟಿ ರೂ.ಗೆ ಒಂದು ಸಾವಿರ ಹಸುಗಳನ್ನು ಖರೀದಿಸಿದ್ದರು. ಆದರೆ, ಹಣವನ್ನು ಪಾವತಿ ಮಾಡಿರಲಿಲ್ಲ. ಹತ್ತು ವರ್ಷಗಳಲ್ಲಿ ಐದು ಕೋಟಿಯ ಸಾಲ ಬಡ್ಡಿ ಸೇರಿ 15 ಕೋಟಿ ಆಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಮಹಾರಾಷ್ಟ್ರದ ಸೇಠ್ ಹಲವು ಬಾರಿ ಗಡುವು ನೀಡಿದ್ದಲ್ಲದೆ, ಮುಂಬೈನ ಗೂಂಡಾಗಳನ್ನು ಕಳಿಸಿಕೊಟ್ಟು ಬೆದರಿಕೆ ತಂತ್ರವನ್ನೂ ಮಾಡಿದ್ದರು. ಇದಕ್ಕೆ ಸೊಪ್ಪು ಹಾಕದ ವರ್ತೂರು ಪ್ರಕಾಶ್ ಸಾಲದ ಹಣ ಕೊಟ್ಟಿರಲಿಲ್ಲ.
ನ.25 ರಂದು ಮಹಾರಾಷ್ಟ್ರದ ಗೂಂಡಾ ತಂಡ ಮತ್ತೆ ಕೋಲಾರಕ್ಕೆ ಬಂದು ವರ್ತೂರು ಪ್ರಕಾಶ್ ಮತ್ತು ಅವರ ಕಾರು ಚಾಲಕ ಅವರನ್ನು ಹಿಡಿದು ಹಲ್ಲೆ ನಡೆಸಿದ್ದಾರೆ. ಸಾಲದ ಹಣ ನೀಡುವಂತೆ ವಾರ್ನ್ ಮಾಡಿ ಬಿಡುಗಡೆ ಮಾಡಿದ್ದರು. ಇದರಿಂದ ಬೇಸತ್ತ ವರ್ತೂರು ಪ್ರಕಾಶ್ ನಾಲ್ಕು ದಿನಗಳ ಬಳಿಕ, ತನ್ನನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂಬ ದೂರನ್ನು ಪೊಲೀಸರಿಗೆ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಪೊಲೀಸರ ತನಿಖೆಯಲ್ಲಿ ಈ ವಿಚಾರ ಕಂಡುಬಂದರೂ, ವರ್ತೂರು ಪ್ರಕಾಶ್ ಮಾತ್ರ ಇದನ್ನು ದೃಢ ಪಡಿಸಿಲ್ಲ. ಆರೋಪಿಗಳು ಯಾರೆಂದು ತಿಳಿದಿದ್ದರೂ ವರ್ತೂರು ಪ್ರಕಾಶ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿಲ್ಲ ಎನ್ನಲಾಗಿದೆ. ಮಹಾರಾಷ್ಟ್ರ ಸೇಠ್ ಗೆ ಮಾಡಿದ್ದ ಸಾಲದ ಸುಳಿಯಿಂದ ಪಾರಾಗಲು ಕಿಡ್ನಾಪ್ ನಾಟಕವಾಡಿ, ಸಾಲದ ಚುಕ್ತಾ ಮಾಡಲು ಪ್ಲಾನ್ ಹಾಕಿದ್ದಾರೆಯೇ ಎನ್ನುವ ಅನುಮಾನ ಕೇಳಿಬಂದಿದೆ.
ಈ ನಡುವೆ ಪ್ರಕರಣದ ತನಿಖೆಯನ್ನು ಬೆಳ್ಳಂದೂರು ಠಾಣೆಯಿಂದ ಕೋಲಾರ ಠಾಣೆಗೆ ಹಸ್ತಾಂತರ ಮಾಡಲಾಗಿದೆ. ಅಪಹರಣಕ್ಕೆ ಬಳಸಿದ್ದ ಕಾರು ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದರೆ, ಕೋಲಾರದಿಂದ ಅವರನ್ನು ಅಪಹರಿಸಲಾಗಿತ್ತು ಎಂದು ದೂರಿನಲ್ಲಿ ಹೇಳಿದ್ದರು. ಹೀಗಾಗಿ ತನಿಖೆಯನ್ನು ಕೋಲಾರ ಠಾಣೆ ಪೊಲೀಸರು ವಹಿಸಿಕೊಂಡ ಬಳಿಕ ವರ್ತೂರು ಆಪ್ತರನ್ನು ತನಿಖೆಗೊಳಪಡಿಸಿದಾಗ ಸಾಲದ ವಿಚಾರ ಬೆಳಕಿಗೆ ಬಂದಿದೆ.
ಇದಕ್ಕು ಮುನ್ನ ಅಪಹರಣ ನಡೆದಿದ್ದ ಕಾರಿನಲ್ಲಿ ಮಹಿಳೆಯರು ಬಳಸುವ ದುಪ್ಪಟ್ಟಾ ಪತ್ತೆಯಾಗಿದ್ದು ಕಿಡ್ನಾಪ್ ಹಿಂದೆ ಹನಿಟ್ರ್ಯಾಪ್ ದಂಧೆಯವರು ಇದ್ದಾರಾ ಎನ್ನುವ ಶಂಕೆಯೂ ವ್ಯಕ್ತವಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ವರ್ತೂರು ಪ್ರಕಾಶ್, "ನನ್ನ ಕಾರಿನಲ್ಲಿ ದುಪ್ಪಟ್ಟಾ ಮತ್ತು ಖಾರದ ಪುಡಿ ಇರುವುದು ಕಂಡು ಬಂದಿದೆ. ನನ್ನ ಕಾರು ಕ್ಲೀನ್ ಆಗಿಯೇ ಇತ್ತು. ಮೂರ್ನಾಲ್ಕು ದಿನ ಅಪಹರಣಕಾರರು ಕಾರನ್ನು ಬೇರೆ ಕೃತ್ಯಕ್ಕೆ ಬಳಸಿಕೊಂಡಿರಬಹುದು ಎನ್ನುವ ಶಂಕೆಯನ್ನು ವ್ಯಕ್ತಪಡಿಸಿದ್ದರು. ಹಸು ಖರೀದಿ ಮತ್ತು ಡೈರಿ ವ್ಯವಹಾರದಲ್ಲಿ, ಸಾಲ ಉಳಿಸಿಕೊಂಡಿದ್ದರಿಂದ, ಮಹಾರಾಷ್ಟ್ರ ಮೂಲದವರು ಬಾಕಿ ಹಣಕ್ಕಾಗಿ ಕಿಡ್ನಾಪ್ ಮಾಡಿರುವ ಬಗ್ಗೆಯೂ ಸುದ್ದಿ ಹರಿದಾಡುತ್ತಿತ್ತು. ಆದರೆ, ಪ್ರಕಾಶ್ ಇದನ್ನೂ ನಿರಾಕರಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ, ಇವರ ಮಗನೇ ಕಿಡ್ನಾಪ್ ಹಿಂದಿನ ರೂವಾರಿ ಎನ್ನುವ ಸುದ್ದಿಗಳೂ ಹರಿದಾಡುತ್ತಿವೆ.
"ನನಗೆ ಯಾರ ಮೇಲೂ ದ್ವೇಷವಿಲ್ಲ, ದುಷ್ಮನಿಗಳೂ ಇಲ್ಲ. ರಾಜಕೀಯ, ಸಮಾಜಸೇವೆ, ಸಂಘಟನಾತ್ಮಕ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇನೆ. ನಾನು ಒಂದು ಲಕ್ಷ ರೂಪಾಯಿ ಸಾಲ ಕೂಡ ಯಾರಿಂದಲೂ ಪಡೆದಿಲ್ಲ. ಮತ್ತು ಯಾರಿಗೂ ಕೊಡಬೇಕಾಗಿಲ್ಲ, ನಾನು ಯಾವ ವ್ಯವಹಾರವನ್ನೂ ಮಾಡುತ್ತಿಲ್ಲ ಎಂದು ವರ್ತೂರು ಪ್ರಕಾಶ್ ಹೇಳಿದ್ದಾರೆ.
ವರ್ತೂರು ಪ್ರಕಾಶ್ ಎರಡನೇ ಮದುವೆ !!
ಕೆಲವು ವರ್ಷಗಳ ಹಿಂದೆ ವರ್ತೂರು ಪ್ರಕಾಶ್ ಕೋಲಾರದ ಟೇಕಲ್ ಬಳಿ ಫಾರ್ಮ್ ಹೌಸ್ ಖರೀದಿಸಿದ್ದರು. ಇದರ ಉಸ್ತುವಾರಿಯನ್ನು ನೋಡಿಕೊಳ್ಳಲು ಒಬ್ಬರು ಮಹಿಳೆಯನ್ನು ನೇಮಿಸಿದ್ದರು. ಟೀಚರ್ ಎಂದು ಇವರನ್ನು ಕರೆಯಲಾಗುತ್ತಿತ್ತು. ತದನಂತರ, ಈಕೆಯನ್ನು ವರ್ತೂರು ಪ್ರಕಾಶ್ ಮದುವೆಯಾಗಿದ್ದಾರೆ ಎಂಬ ವದಂತಿಯೂ ಹರಡಿತ್ತು. ಈ ಮಹಿಳೆಗೆ ಅದಾಗಲೇ ಇಬ್ಬರು ಮಕ್ಕಳಿದ್ದು, ಅದರಲ್ಲಿ ಮೊದಲನೇ ಮಗ ವರ್ತೂರು ಪ್ರಕಾಶ್ ಅವರನ್ನು ಹಣಕ್ಕಾಗಿ ಅಪಹರಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರಿಗೂ ಈ ಆಯಾಮದಲ್ಲಿ ಶಂಕೆಯಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಇದಲ್ಲದೇ, ಚಿಂತಾಮಣಿಯಲ್ಲೂ ವರ್ತೂರು ಪ್ರಕಾಶ್ ಜಮೀನು ಖರೀದಿಸಿದ್ದು ಇದರ ಹಣವನ್ನೂ ಬಾಕಿ ಉಳಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಿಸಿ ಹಣಕ್ಕೆ ಬೇಡಿಕೆ ; ಸಂಚಲನ ಮೂಡಿಸಿದ ದೂರು !!
The Police have suspected that Former Karnataka Minister Varthur Prakash played drama of Kidnap so that he can get relieved of paying huge loan.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm