ಬ್ರೇಕಿಂಗ್ ನ್ಯೂಸ್
11-05-24 06:57 pm HK News Desk ಕರ್ನಾಟಕ
ಚಿಕ್ಕಬಳ್ಳಾಪುರ, ಮೇ.11: ಪೊಲೀಸ್ ಪೇದೆಗಳಿಬ್ಬರು ತಮ್ಮ ಬಗ್ಗೆ ಎಸ್ಪಿ ತಾರತಮ್ಯ ಮಾಡುತ್ತಿದ್ದಾರೆ, ಜಾತಿ ಕಾರಣಕ್ಕೆ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಎಸ್ಪಿ ಕಚೇರಿ ಮುಂದೆ ತಮ್ಮ ಕುಟುಂಬದೊಂದಿಗೆ ಧರಣಿ ನಡೆಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪೇದೆ ಆಶೋಕ್ ಹಾಗೂ ಚೇಳೂರು ಪೊಲೀಸ್ ಠಾಣೆ ಪೇದೆ ನರಸಿಂಹಮೂರ್ತಿ ತಮ್ಮ ಹೆಂಡತಿ ಮಕ್ಕಳೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.

2023ರ ಆಗಸ್ಟ್ ನಲ್ಲಿ ಮನಿ ಡಬ್ಲಿಂಗ್ ಪ್ರಕರಣ ಒಂದರಲ್ಲಿ ಪೇದೆಗಳಾದ ಆಶೋಕ್ ಹಾಗೂ ನರಸಿಂಹಮೂರ್ತಿ ವಿರುದ್ದ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮನಿ ಡಬ್ಲಿಂಗ್ ಪ್ರಕರಣದಲ್ಲಿ ಆರೋಪಿಗಳ ಜೊತೆಗೆ ಶಾಮೀಲಾಗಿರುವ ಆರೋಪ ಇದ್ದುದರಿಂದ, ಇಬ್ಬರನ್ನು ಅಮಾನತುಗೊಳಿಸಿ ಇಲಾಖಾ ವಿಚಾರಣೆ ನಡೆಸಲಾಗುತ್ತಿತ್ತು. ಅಮಾನತು ಆದೇಶ ರದ್ದು ಮಾಡಿ ಮಂಚೇನಹಳ್ಳಿ ಹಾಗೂ ಚೇಳೂರು ಠಾಣೆಗೆ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು.
ಇಲಾಖಾ ವಿಚಾರಣೆಗೆ ಹಾಜರಾಗದೇ ಕಾಲಹರಣ ಮಾಡಿದ್ದ ಪೇದೆಗಳು ಮತ್ತೆ ಕಾಲಾವಾಕಾಶ ಕೋರಿದ್ದರು. ಈ ವಿಚಾರದಲ್ಲಿ ವಿಚಾರಣೆ ನಡೆಸುತ್ತಿರುವ ಅಧಿಕಾರಿ, ಸಮಪರ್ಕವಾಗಿ ಸ್ಪಂದಿಸಿಲ್ಲ. ಎಸ್ಪಿ ಡಿ.ಎಲ್ ನಾಗೇಶ್ ಪ್ರಕರಣದಲ್ಲಿ ನಮ್ಮ ವಾದ ಕೇಳದೇ ನೇರವಾಗಿ ಅಮಾನತು ಮಾಡಿ ಮಾನಸಿಕ ಕಿರುಕುಳ ನೀಡಿದ್ದಾರೆ. ಕೆಳ ಜಾತಿ ಎಂದು ಜಾತಿ ತಾರತಮ್ಮ ಮಾಡಿದ್ದಾಗಿ ಆರೋಪಿಸಿದ್ದಾರೆ.
ಎಸ್ಪಿ ಕಚೇರಿ ಎದುರು ಹೆಂಡತಿ ಮಕ್ಕಳ ಸಮೇತ ಆಗಮಿಸಿ ಅಂಬೇಡ್ಕರ್ ಪೋಟೋ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಎಸ್ಪಿ ಖಾಸೀಂ ಸಾಬ್ ಪ್ರತಿಭಟನಾ ನಿರತ ಪೇದೆಗಳ ಮನವೊಲಿಸಿ ಅಹವಾಲು ಸ್ವೀಕರಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.
Chikkaballapur two police constable protest with family sitting at SP office, demanding justice. Constables alleged that SP D L Nagesh is not cooperating neither listening to their probelms they added.
17-01-26 08:02 pm
HK News Desk
ದೇವನಹಳ್ಳಿ - ಬೂದಿಗೆರೆ ರಸ್ತೆಯಲ್ಲಿ ಭೀಕರ ಅಪಘಾತ ; ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm