ಬ್ರೇಕಿಂಗ್ ನ್ಯೂಸ್
03-05-24 03:58 pm Bangalore Correspondent ಕರ್ನಾಟಕ
ಬೆಂಗಳೂರು, ಮೇ.3: ಶಿವಮೊಗ್ಗಕ್ಕೆ ಆಗಮಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಹಿಂದಿ ಭಾಷಣವನ್ನು ತರ್ಜುಮೆ ಮಾಡಲು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೇರಿದಂತೆ ಕಾಂಗ್ರೆಸ್ ನಾಯಕರು ತಡಬಡಾಯಿಸಿದ ಘಟನೆ ನಡೆದಿದೆ. ತನ್ನ ಹಿಂದಿ ಭಾಷಣವನ್ನು ತಪ್ಪಾಗಿ ತರ್ಜುಮೆ ಮಾಡುತ್ತಿದ್ದುದನ್ನು ಅರಿತ ರಾಹುಲ್ ಗಾಂಧಿ, ಮಧು ಬಂಗಾರಪ್ಪ ಅವರನ್ನು ಅರ್ಧದಲ್ಲಿ ವಾಪಸ್ ಕಳುಹಿಸಿ ಇನ್ನೊಬ್ಬರಿಂದ ತನ್ನ ಭಾಷಣವನ್ನು ಅನುವಾದ ಮಾಡಿಸಿದ್ದಾರೆ.
ಮೇ 2ರ ಮಧ್ಯಾಹ್ನ ನಗರದ ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ ಆಯೋಜಿಸಲಾಗಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದಿಯಾಗಿ ಹಿರಿಯ ಕಾಂಗ್ರೆಸ್ ನಾಯಕರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಡಿಕೆ ಶಿವಕುಮಾರ್ ಭಾಷಣದ ಬಳಿಕ ರಾಹುಲ್ ಗಾಂಧಿ ಭಾಷಣ ಆರಂಭಿಸಿದರು. ಸುಡು ಬಿಸಿಲಿನಲ್ಲೂ ನನ್ನ ಭಾಷಣಕ್ಕಾಗಿ ಕಾದು ನಿಂತ ನಿಮಗೆ ಧನ್ಯವಾದ ಎಂದು ಹೇಳಿ ಭಾಷಣ ಆರಂಭಿಸಿದರು. ಸಚಿವ ಮಧು ಬಂಗಾರಪ್ಪ ಅವರು ರಾಹುಲ್ ಹಿಂದಿ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸಲು ಇನ್ನೊಂದು ಕಡೆ ನಿಂತಿದ್ದರು.
ರಾಹುಲ್ ಅವರು ಹೇಳುತ್ತಿದ್ದ ಭಾಷಣದ ಮಾತುಗಳನ್ನು ಮಧು ಬಂಗಾರಪ್ಪ ಅದೇ ರೀತಿ ಅನುವಾದಿಸಿ ಕನ್ನಡದಲ್ಲಿ ಹೇಳಬೇಕಾಗಿತ್ತು. ಮೊದಲಿಗೆ ಒಂದೆರಡು ಲೈನಲ್ಲಿ ಹೇಳುತ್ತಿದ್ದ ಮಾತುಗಳನ್ನು ಸರಿಯಾಗಿಯೇ ತರ್ಜುಮೆ ಮಾಡಿ ಕನ್ನಡದಲ್ಲಿ ಹೇಳುತ್ತಿದ್ದರು. ಆದರೆ ರಾಹುಲ್ ಮಾತು ಸ್ವಲ್ಪ ಉದ್ದಕ್ಕೆ ಹೋದಾಗ ಅಂದಾಜಿಸಲು ಆಗದೆ ಸ್ವಲ್ಪ ಎಡವಟ್ಟು ಆಗಿತ್ತು. ಸಂವಿಧಾನದಲ್ಲಿ ಮೀಸಲಾತಿ ಇರಬೇಕೆಂದು ಅತ್ಯಂತ ಸ್ಪಷ್ಟವಾಗಿ ಬರೆದಿದೆ, ಆದರೆ ಬಿಜೆಪಿಯವರು ಅದನ್ನು ತೆಗೆದುಹಾಕಲು ನೋಡುತ್ತಿದೆ ಎಂದು ರಾಹುಲ್ ಹೇಳಿದರು.
ಬಂಗಾರಪ್ಪ ಅದನ್ನು ಭಾಷಾಂತರಿಸುವ ಭರದಲ್ಲಿ ಒಬಿಸಿ, ಎಸ್ಸಿ, ಎಸ್ಟಿ ಜಾತಿಯನ್ನು ಎಳೆದು ತಂದರು. ಇದರಿಂದ ತಮ್ಮ ಭಾಷಣ ಸರಿಯಾಗಿ ಅನುವಾದ ಆಗುತ್ತಿಲ್ಲ ಎಂದರಿತ ರಾಹುಲ್ ಗಾಂಧಿ, ಮಧು ಬಂಗಾರಪ್ಪ ಅವರನ್ನು ತರ್ಜುಮೆ ನಿಲ್ಲಿಸುವಂತೆ ಸೂಚಿಸಿದರು. ಆಗ, ಮಧು ಬಂಗಾರಪ್ಪ ಸಾರಿ ಸರ್ ಎಂದು ಹೇಳಿ ತಮ್ಮ ಜಾಗದಲ್ಲಿ ಹೋಗಿ ಕೂತರು. ಆನಂತರ ಇನ್ನೊಬ್ಬ ವ್ಯಕ್ತಿಯನ್ನು ಅನುವಾದಕ್ಕೆ ನಿಲ್ಲಿಸಿದರು. ಆ ವ್ಯಕ್ತಿಯೂ ಇವರು ಹೇಳಿದಾಗೆ ಕನ್ನಡದಲ್ಲಿ ಹೇಳಲು ತಡಬಡಾಯಿಸಿದರು.
ಸಂವಿಧಾನದ ಬಗ್ಗೆ ಹೇಳಿಕೆ ನೀಡಿರುವ ತಮ್ಮ ಸ್ಥಾನಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ರಾಜೀನಾಮೆ ನೀಡಬೇಕು, ಪ್ರಧಾನಿ ದಲಿತ ಸಮುದಾಯದ ಕ್ಷಮೆ ಕೇಳಬೇಕು ಎಂದು ರಾಹುಲ್ ಗಾಂಧಿ ಹೇಳಿದರು. ಇದನ್ನು ಭಾಷಾಂತರ ಮಾಡಿದವರು ನಡ್ಡಾ ಕ್ಷಮೆ ಕೇಳಬೇಕೆಂದು ಮಾತ್ರ ಹೇಳಿದ್ದು ಮತ್ತೆ ರಾಹುಲ್ ಅವರನ್ನು ಸಿಟ್ಟಾಗುವಂತೆ ಮಾಡಿತ್ತು.
Realizing that his Hindi speech was not properly translated into Kannada, Rahul Gandhi sent back minister and Shimoga's son Madhu Bangarappa to have his speech translated by someone else. By that, Madhu Bangarappa is deeply embarrassed.
05-04-25 12:21 pm
HK News Desk
Ankola Robbery, Talat gang: ಅಂಕೋಲಾದಲ್ಲಿ ನಗದು...
04-04-25 10:54 pm
Mla Pradeep Eshwar, H D Kumaraswamy: ಕುಮಾರಸ್ವ...
04-04-25 09:55 pm
Waqf Amendment, Deve Gowda, Rajya Sabha: ವಕ್ಫ...
04-04-25 12:00 pm
MLC Vishwanath, Siddaramaiah: ಫ್ರೀ ಬಸ್ ಕೊಟ್ಟ...
04-04-25 10:28 am
04-04-25 09:29 pm
HK News Desk
Waqf Controversy, BJP, Kharge: ವಕ್ಫ್ ಆಸ್ತಿ ಕ...
04-04-25 08:50 pm
Waqf Amendment Bill: ಸಂಸತ್ತಿನ ಎರಡೂ ಸದನಗಳಲ್ಲಿ...
04-04-25 12:44 pm
Mangalore MP Brijesh Chowta: ನಿವೃತ್ತ ಸೈನಿಕರ ಅ...
03-04-25 11:10 pm
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
05-04-25 01:16 pm
Mangaluru Staff
Mangalore, Thokkottu: ತೊಕ್ಕೊಟ್ಟು ಫ್ಲೈಓವರ್ ಕೆಳ...
04-04-25 11:07 pm
Mangalore Hotel Moti Mahal closed, Milagres:...
04-04-25 11:00 pm
Mangalore Bus Accident, Uppinangady: ನೀರಕಟ್ಟೆ...
04-04-25 01:39 pm
Mangalore Police, Inspector Balakrishna: ಪ್ರಕ...
03-04-25 10:14 pm
04-04-25 03:03 pm
Mangalore Correspondent
Kalaburagi Murder, Three killed: ಕೌಟುಂಬಿಕ ಕಲಹ...
03-04-25 05:01 pm
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm