ಬ್ರೇಕಿಂಗ್ ನ್ಯೂಸ್
02-05-24 01:30 pm HK News Desk ಕರ್ನಾಟಕ
ಕಲಬುರಗಿ, ಮೇ 2: ಪ್ರಜ್ವಲ್ ರೇವಣ್ಣ ಕುರಿತ ಪ್ರಕರಣವನ್ನು ಸರ್ಕಾರ ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಯಾರನ್ನೂ ರಕ್ಷಣೆ ಮಾಡೋದಕ್ಕೆ ಸಾಧ್ಯವೇ ಇಲ್ಲ. 41(a) ಸೆಕ್ಷನ್ ಅಡಿಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. ಇದರಂತೆ, 24 ಗಂಟೆಯ ಒಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ಇಲ್ಲದೇ ಇದ್ದಲ್ಲಿ ರೇವಣ್ಣ ಅವರನ್ನು ಬಂಧಿಸಬೇಕಾಗುತ್ತೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ರೇವಣ್ಣ ಇವತ್ತು ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ಹಾಜರಾಗದೆ ಇದ್ರೆ ರೇವಣ್ಣ ಅವರನ್ನ ಬಂಧಿಸಬೇಕಾಗುತ್ತೆ. ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೇರಳಿದ ಹಿನ್ನಲೆ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಪ್ರಜ್ವಲ್ ಪರ ವಕೀಲರು ಸಮಯ ಕೇಳಿದ್ದಾರೆ. ಈ ಪ್ರಕರಣದಲ್ಲಿ ಸಮಯ ಕೋಡೊದಕ್ಕೆ ಸಾಧ್ಯ ಇಲ್ಲ. ಹಾಗಾಗಿ ಅವರನ್ನು ಅರೆಸ್ಟ್ ಮಾಡಲು ಎಸ್ಐಟಿ ಕ್ರಮ ಕೈಗೊಳ್ಳುತ್ತದೆ ಎಂದರು.
ಕಲಬುರಗಿ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಗೃಹ ಸಚಿವರು, ಪ್ರಜ್ವಲ್ ರೇವಣ್ಣನ ಕೇಸ್ ರಾಷ್ಟ್ರ ಮಟ್ಟದಲ್ಲಿ ಚರ್ಚೆ ಆಗ್ತಿದೆ. ಇತರೆ ರಾಷ್ಟ್ರಗಳಿಗೂ ಈ ವಿಷಯ ತಲುಪಿದೆ. ನೂರಾರು ಜನ ಮಹಿಳೆಯರಿಗೆ ಅನ್ಯಾಯ ಆಗಿದೆ. ಹಿಂದೆ ನಮ್ಮ ಗಮನಕ್ಕೆ ಬಂದಿಲ್ವಾ ಅಂತಾ ನೀವು ಕೇಳಬಹುದು. ಆದ್ರೆ ದೂರು ಯಾರು ನೀಡಿರಲಿಲ್ಲ. ಮಹಿಳಾ ಆಯೋಗದ ಗಮನಕ್ಕೆ ಬಂದ ತಕ್ಷಣ ದೂರು ನೀಡಿದ್ದಾರೆ. ತಕ್ಷಣ ಎಸ್ ಐ ಟಿ ರಚನೆ ಮಾಡಿ ತನಿಖೆ ಮಾಡ್ತಿದ್ದೇವೆ. ದೂರು ದಾಖಲಾಗ್ತಿದ್ದ ಹಾಗೆ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಹೋಗಿದ್ದಾರೆ.
ಹೊರ ದೇಶಕ್ಕೆ ಹೋಗುವಾಗ ಅವರಿಗೆ ಕೇಂದ್ರ ಸರ್ಕಾರ ಡಿಪ್ಲೋಮೇಟಿಕ್ ಪಾಸ್ ಪೋರ್ಟ್ ಕೊಟ್ಟಿದೆ. ಡಿಪ್ಲೊಮೇಟಿಕ್ ಪಾಸ್ ಪೋರ್ಟ್ ಬಗ್ಗೆ ಹೆಚ್ಚಿನ ಪ್ರಶ್ನೆ ಮಾಡಲ್ಲ. ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡೋದಕ್ಕೆ ಸಾಧ್ಯವೇ ಇಲ್ಲ. ಇಬ್ಬರು ಮಹಿಳೆಯರು ದೂರು ದಾಖಲು ಮಾಡಿದ್ದಾರೆ. ಸಾವಿರಾರು ಜನ ಮಹಿಳೆಯರು ಈ ವಿಡಿಯೋದಲ್ಲಿ ಇದ್ದಾರೆ. ಹಾಗಾಗಿ ಈ ಕೇಸ್ ಹೇಗ ಬೇಕಾದ್ರು ಮಾಡೋದಕ್ಕೆ ಆಗೋದಿಲ್ಲ. ಮಹಿಳೆಯರ ಕುಟುಂಬದ ಬಗ್ಗೆಯೂ ನಾವು ಆಲೋಚನೆ ಮಾಡಬೇಕಾಗುತ್ತೆ ಎಂದರು.
A lookout notice was issued against incumbent JD(S) MP Prajwal Revanna by the Special Investigation Team (SIT) probing the Hassan sex scandal, sources said on Thursday.
09-04-25 09:31 pm
HK News Desk
Vijayapura accident, Death: ಯಮನಂತೆ ಬಂದ ಲಾರಿ ;...
09-04-25 09:21 pm
ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಗಂಭೀರ ಆರೋಪ...
09-04-25 06:21 pm
Kukke Subrahmanya, New Train Service, Ministe...
09-04-25 04:05 pm
Karwar Sp Narayana, Bhatkal News: ಭಟ್ಕಳ ; ವಿಚ...
09-04-25 11:25 am
10-04-25 01:25 pm
HK News Desk
ಪಿಯುಸಿ ಹುಡುಗನ ವರಿಸಿದ ಮೂರು ಮಕ್ಕಳ ತಾಯಿ ; ಇಸ್ಲಾಂ...
10-04-25 11:30 am
Tahawwur Rana, India: ಮುಂಬೈ ದಾಳಿಯ ಮಾಸ್ಟರ್ ಮೈಂ...
09-04-25 04:07 pm
ಡೊನಾಲ್ಡ್ ಟ್ರಂಪ್ ಸುಂಕ ಬರೆಗೆ ಜಗತ್ತು ತಲ್ಲಣ ; ಕೋವ...
07-04-25 10:53 pm
ರಾಜ್ಯದ ಬಳಿಕ ಕೇಂದ್ರ ಸರ್ಕಾರದಿಂದಲೂ ಜನರಿಗೆ ಬೆಲೆ ಏ...
07-04-25 10:01 pm
09-04-25 10:57 pm
Mangalore Correspondent
Mangalore BJP Janakrosha Rally, Protest: ಕರ್ನ...
09-04-25 10:23 pm
Kpt Accident, Mangalore: ಕೆಪಿಟಿ ಬಳಿ ಭೀಕರ ಅಪಘಾ...
08-04-25 08:58 pm
PUC Results 2025, Mangalore Udupi topper: ಪಿಯ...
08-04-25 03:00 pm
Praveen Nettaru, Shafi Bellare, SDPI, Mangalo...
07-04-25 07:01 pm
10-04-25 02:57 pm
Mangalore Correspondent
ಸಾಮೂಹಿಕ ವಿವಾಹ ಹೆಸರಲ್ಲಿ ಬಡ ಯುವತಿಯರ ಮಾರಾಟ ಜಾಲ ;...
09-04-25 11:17 pm
Kalaburagi ATM Robbery: ಬೀದರ್ ದರೋಡೆ ಬೆನ್ನಲ್...
09-04-25 08:15 pm
Mangalore Gold smuggling, Crime, CCB: ಇಬ್ಬರು...
08-04-25 11:04 pm
Fake Note, Dandeli: ದಾಂಡೇಲಿ ; ಖಾಲಿ ಮನೆಯಲ್ಲಿ 1...
08-04-25 10:01 pm