ಬ್ರೇಕಿಂಗ್ ನ್ಯೂಸ್
29-04-24 04:48 pm HK News Desk ಕರ್ನಾಟಕ
ಶಿವಮೊಗ್ಗ, ಏ.29: ಹಾಸನದ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿಬಂದಿರುವ ಆರೋಪಗಳಿಂದಾಗಿ ಕೇವಲ ಅವರು ಮಾತ್ರವಲ್ಲ, ಇಡೀ ರಾಜ್ಯವೇ ತಲೆತಗ್ಗಿಸುವಂಥದ್ದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಅವರ ವಿರುದ್ಧ ಕೇಳಿಬಂದಿರುವ ಹಗರಣ ಆರೋಪಗಳು ಪ್ರಜ್ವಲ್ ಅವರಿಗೆ ಮಾತ್ರ ಸಂಬಂಧಿಸಿದ್ದು. ಅದಕ್ಕೂ ನಮ್ಮ ಇಡೀ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.
ಶಿವಮೊಗ್ಗದಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಪರವಾಗಿ ಪ್ರಚಾರಕ್ಕೆ ಆಗಮಿಸಿರುವ ಅವರು ಪತ್ರಕರ್ತರನ್ನುದ್ದೇಶಿಸಿ ಸುದ್ದಿಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಎದ್ದಿರುವ ಆರೋಪಗಳ ಕುರಿತಾಗಿ ಅವರು ಮೇಲಿನಂತೆ ಪ್ರತಿಕ್ರಿಯಿಸಿದರಲ್ಲದೆ, ಇಷ್ಟೆಲ್ಲಾ ಆರೋಪಗಳ ಹೊರತಾಗಿಯೂ ಪ್ರಜ್ವಲ್ ರೇವಣ್ಣ ಅವರ ಒಳ್ಳೆಯ ಲೀಡ್ ನಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣನವರ ಪ್ರಕರಣದ ಹಿಂದೆ ಯಾರದ್ದೋ ಪಿತೂರಿಯಿದೆ ಎಂಬರ್ಥದಲ್ಲಿ ಮಾತನಾಡಿದ ಅವರು, ಸರ್ಕಾರ ಇಡೀ ಪ್ರಕರಣವನ್ನು ತನಿಖೆಗೊಳಪಡಿಸಲು ವಿಶೇಷ ತನಿಖಾ ತಂಡ (ಎಸ್ಐಟಿ) ನೇಮಿಸಿದೆ. ಆ ತಂಡ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತದೆ ಎಂಬ ಭರವಸೆಯಿದೆ. ಆದರೆ, ಪ್ರಜ್ವಲ್ ರೇವಣ್ಣರಿಗೆ ಸಂಬಂಧಿಸಿದ ಹಳೆಯ ವಿಡಿಯೋಗಳನ್ನು ಈಗ ಚುನಾವಣೆ ಹತ್ತಿರದಲ್ಲಿ ಇದ್ದಾಗ ಏಕೆ ಬಿಡುಗಡೆ ಮಾಡಲಾಯಿತು. ಅದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ, ಅವರಿಗೂ ಶಿಕ್ಷೆ ವಿಧಿಸಬೇಕಿದೆ ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ಇದೇ ವೇಳೆ, ತಮ್ಮ ಕುಟುಂಬದ ಕುಡಿಯಾದ ಪ್ರಜ್ವಲ್ ಅವರು ಹಾದಿ ತಪ್ಪಿರುವುದು ಮೊದಲೇ ಗೊತ್ತಾಗಿದ್ದರೆ ಬುದ್ಧಿ ಹೇಳಿ ತಪ್ಪಿಸಬಹುದಿತ್ತು ಎಂದು ಮಾಜಿ ಸಿಎಂ ಕುಮಾರಸ್ವಾಮಿ ವ್ಯಥೆ ಪಟ್ಟುಕೊಂಡರು. ಈಗ ಸರ್ಕಾರ ಈ ಪ್ರಕರಣದಲ್ಲಿ ಎಸ್ ಐಟಿ ತನಿಖೆಯನ್ನು ಆರಂಭಿಸಿದೆ. ತನಿಖೆಯಿಂದ ವಾಸ್ತವಾಂಶ ಹೊರಬರುತ್ತದೆ. ಆದರೆ, ಪ್ರಜ್ವಲ್ ಹೀಗೆ ದಾರಿ ತಪ್ಪಿರುವುದು ಮೊದಲೇ ಗೊತ್ತಾಗಿದ್ದರೆ ಅದನ್ನು ತಪ್ಪಿಸಬಹುದಿತ್ತು ಎಂದು ಹೇಳಿದರು.
ಜೊತೆಗೆ, ನಮ್ಮ ಕುಟುಂಬದ ಸದಸ್ಯ ಎಂಬ ಮಾತ್ರಕ್ಕೆ ಪ್ರಜ್ವಲ್ ಅವರನ್ನು ಸಮರ್ಥಿಸಿಕೊಳ್ಳುವುದಾಗಲೀ ಅಥವಾ ಆತನ ಪರವಾಗಿ ನಿಲ್ಲುವುದಾಗಲೀ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ ಕುಮಾರಸ್ವಾಮಿ, ಈಗ ಸರ್ಕಾರ ರಚಿಸಿರುವ ಎಸ್ ಐಟಿಯಿಂದ ತನಿಖೆ ನಡೆಯಲಿ. ಸತ್ಯಾಂಶ ಹೊರಬರಲಿ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂಬುದೇ ನನ್ನ ಆಶಯವೂ ಆಗಿದೆ ಎಂದರು.
ಇದೇ ವೇಳೆ, “ಪ್ರಜ್ವಲ್ ವಿರುದ್ಧದ ಪೆನ್ ಡ್ರೈವ್ ಹಗರಣದಲ್ಲಿ ಯಾರ ಮೇಲಾದರೂ ಅನುಮಾನಗಳಿವೆಯೇ’’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಮತದಾನಕ್ಕೆ ಮೂರು ದಿನಗಳ ಹಿಂದೆ ಪೆನ್ ಡ್ರೈವ್ ವಿಚಾರ ಎದ್ದಿದ್ದು ಏಕೆ? ಹಳೆ ವಿಚಾರ ಈಗೇಕೆ ಮಹತ್ವ ಪಡೆಯಿತು? ಈ ಎಲ್ಲ ಅಂಶಗಳ ಬಗ್ಗೆ ಎಸ್.ಐ.ಟಿ ತನಿಖೆ ನಡೆಸಲಿ ಎಂದು ಹೇಳಿದರಲ್ಲದೆ, ನಮ್ಮ ರಾಜ್ಯದಲ್ಲಿ ಕೆಲವು ಮಂದಿ ಪೆನ್ ಡ್ರೈವ್ ಎಕ್ಸ್ ಪರ್ಟ್ ಗಳಿದ್ದಾರೆ. ಅದೆಲ್ಲಾ ತನಿಖೆಯಲ್ಲಿ ಗೊತ್ತಾಗಲಿದೆ’’ ಎಂದು ಹೇಳಿದರು.
Prajwal Revanna sex videos case, HD Kumaraswamy says issue of Revanna family not ours. The former Karnataka Chief Minister also questioned why his and his father, former Prime Minister HD Deve Gowda's names, were brought up since the case was "not a family issue".
05-04-25 10:17 pm
HK News Desk
HD Kumaraswamy, Congress, D K Shivakumar: ಮಹಮ...
05-04-25 09:43 pm
ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆಗೆ ಕಾಂ...
05-04-25 08:12 pm
BJP Yatnal; ಬಿಜೆಪಿಯಿಂದ ಉಚ್ಚಾಟನೆಗೊಂಡ ಶಾಸಕ ಬಸನಗ...
05-04-25 02:47 pm
Kalaburagi Accident Mini Bus and Truck: ಕಲಬುರ...
05-04-25 12:21 pm
04-04-25 09:29 pm
HK News Desk
Waqf Controversy, BJP, Kharge: ವಕ್ಫ್ ಆಸ್ತಿ ಕ...
04-04-25 08:50 pm
Waqf Amendment Bill: ಸಂಸತ್ತಿನ ಎರಡೂ ಸದನಗಳಲ್ಲಿ...
04-04-25 12:44 pm
Mangalore MP Brijesh Chowta: ನಿವೃತ್ತ ಸೈನಿಕರ ಅ...
03-04-25 11:10 pm
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
05-04-25 07:49 pm
Udupi Correspondent
Mangalore Jail, Jammer, Vedavyas Kamath; ಜೈಲಿ...
05-04-25 01:16 pm
Mangalore, Thokkottu: ತೊಕ್ಕೊಟ್ಟು ಫ್ಲೈಓವರ್ ಕೆಳ...
04-04-25 11:07 pm
Mangalore Hotel Moti Mahal closed, Milagres:...
04-04-25 11:00 pm
Mangalore Bus Accident, Uppinangady: ನೀರಕಟ್ಟೆ...
04-04-25 01:39 pm
05-04-25 08:53 pm
Bangalore Correspondent
Cyber Fraud Bangalore, Plusmarts; ಫೇಸ್ಬುಕ್ ಮಹ...
05-04-25 04:27 pm
Anwar Manippady threat, Mangalore crime: ವಕ್ಪ...
04-04-25 03:03 pm
Kalaburagi Murder, Three killed: ಕೌಟುಂಬಿಕ ಕಲಹ...
03-04-25 05:01 pm
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm