ಬ್ರೇಕಿಂಗ್ ನ್ಯೂಸ್
18-04-24 05:00 pm Bangalore Correspondent ಕರ್ನಾಟಕ
ಬೆಂಗಳೂರು, ಎ.18: ಪೊಲೀಸ್ ಇಲಾಖೆಯಲ್ಲಿ ಪಿಎಸ್ಐ ಕರ್ತವ್ಯದಲ್ಲಿದ್ದುಕೊಂಡೇ ಶಾಂತಪ್ಪ ಕುರುಬರ ಕನ್ನಡ ಮಾಧ್ಯಮದಲ್ಲೇ ಬರೆದು ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದು, 644ನೇ ರ್ಯಾಂಕ್ ಪಡೆದು ದೇಶದ ಗಮನ ಸೆಳೆದಿದ್ದಾರೆ. ಐಎಎಸ್ ಪರೀಕ್ಷೆ ಪಾಸ್ ಮಾಡಬೇಕಂದ್ರೆ ರಾತ್ರಿ- ಹಗಲು ಓದಬೇಕು ಅನ್ನುವವರ ಮಧ್ಯೆ ಈ ಯುವಕ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಲೇ ಪರೀಕ್ಷೆ ಬರೆದಿದ್ದು ತನ್ನ ಎಂಟನೇ ಪ್ರಯತ್ನದಲ್ಲಿ ಸಾಧನೆ ಮಾಡಿದ್ದಾರೆ.
ಬಳ್ಳಾರಿ ಜಿಲ್ಲೆಯ ಕುರಗೋಡು ತಾಲೂಕಿನ ಹೊಸ ಗೆಣಿಕೆಹಾಳು ಗ್ರಾಮದ ನಿವಾಸಿಯಾಗಿರುವ ಶಾಂತಪ್ಪ ಕುರಬರ ಬೆಂಗಳೂರಿನ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿದ್ದಾರೆ. 2016ರಲ್ಲಿ ಪೊಲೀಸ್ ಇಲಾಖೆ ಸೇರಿದ್ದ ಶಾಂತಪ್ಪ, ಕೆಲಸ ಸಿಕ್ಕಿತು ಅಂತ ಕೈಕಟ್ಟಿ ಕೂರಲಿಲ್ಲ. ದೃಢ ಮನಸ್ಸಿನಿಂದ ಓದಿ ಐಎಎಸ್ ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ. ಕನ್ನಡ ಮಾಧ್ಯಮದಲ್ಲೇ ಪರೀಕ್ಷೆ ಎದುರಿಸಿ ಸಾಮಾನ್ಯ ಬಡ, ಕೃಷಿಕ ಕುಟುಂಬದ ವ್ಯಕ್ತಿ ಸಾಧನೆ ಮಾಡಿರುವುದು ರಾಷ್ಟ್ರದ ಗಮನ ಸೆಳೆದಿದೆ.
ಇಷ್ಟಕ್ಕೂ ಈತ ಓದಿದ್ದು ಸರ್ಕಾರಿ ಶಾಲೆಯಲ್ಲಿ. ಬಳ್ಳಾರಿಯಲ್ಲಿ ಪಿಯುಸಿ ಸೈನ್ಸ್ ಓದುತ್ತಿದ್ದಾಗ 39 ಶೇಕಡಾ ಅಂಕ ಪಡೆದು ಫೈಲ್ ಆಗಿದ್ದ. ಆದರೆ ತಾನು ಗೆಲ್ಲಲೇಬೇಕೆಂದು ಹಠತೊಟ್ಟು ಎರಡನೇ ಬಾರಿ ಪರೀಕ್ಷೆ ಬರೆದು ಪಾಸ್ ಆಗಿದ್ದ. ಅಲ್ಲಿಯೇ ಬಿಎಸ್ಸಿ ಪೂರೈಸಿ ಪಿಎಸ್ಐ ಪರೀಕ್ಷೆ ಬರೆದು ಕೆಲಸ ಗಿಟ್ಟಿಸಿಕೊಂಡಿದ್ದ. ಆದರೆ ಐಪಿಎಸ್ ಅಧಿಕಾರಿ ಆಗಬೇಕೆಂಬ ಛಲದಿಂದಾಗಿ ಯುಪಿಎಸ್ಸಿ ಪರೀಕ್ಷೆ ಬರೆಯತೊಡಗಿದ್ದ. ಐದು ಬಾರಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದ. ಮೊದಲ ಐದು ಪ್ರಯತ್ನಗಳಲ್ಲಿ ಸಂದರ್ಶನಕ್ಕೆ ಆಯ್ಕೆಯಾಗಿರಲಿಲ್ಲ. 6 ಮತ್ತು 7ನೇ ಪ್ರಯತ್ನದಲ್ಲಿ ಮುಖ್ಯ ಪರೀಕ್ಷೆ ಮತ್ತು ಸಂದರ್ಶನಕ್ಕೆ ಅರ್ಹತೆ ಪಡೆದಿದ್ದ. 8ನೇ ಪ್ರಯತ್ನದಲ್ಲಿ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಸಂದರ್ಶನಕ್ಕೆ ಆಯ್ಕೆಯಾಗಿ ಪಾಸ್ ಆಗಿ ರ್ಯಾಂಕ್ ಪಡೆದಿದ್ದಾರೆ.
ಪಿಯುಸಿ ಫೇಲ್ ಆದಾಗಲೇ ಮನಸ್ಸು ಹೆಬ್ಬಂಡೆಯಾಗಿತ್ತು
ಕನ್ನಡ ಮಾಧ್ಯಮದಲ್ಲಿ ಓದಿ ಸಾಧನೆ ಮಾಡಲು ಸಾಧ್ಯವೇ ಎಂಬ ಪ್ರಶ್ನೆಗೆ ಆತ ಹೇಳೋದು ಹೀಗೆ. ನಾವು ಓದದೇ ಆರಂಭಿಕ ಶೂರತ್ವ ತೋರಿಸಿದರೆ ಸಾಧನೆ ಮಾಡಲಾಗದು. ಮೊಟ್ಟೆ ಒಳಗಿಂದ ಕಾವು ಬಂದರೆ ಮಾತ್ರ ಜೀವ ಹುಟ್ಟುತ್ತದೆ. ನಮ್ಮಲ್ಲಿ ಸಾಧನೆ ಮಾಡಬೇಕೆಂಬ ಛಲ ಇರಬೇಕು. ನದಿಯಲ್ಲಿ ಕರಗಿ ಹೋಗುವ ಮಣ್ಣಾಗಬಾರದು, ನದಿಯನ್ನು ತಡೆಯುವ ಹೆಬ್ಬಂಡೆಯಾಗಬೇಕು ಎಂದು ಅಂಬೇಡ್ಕರ್ ಹೇಳುತ್ತಾರೆ. ಪಿಯುಸಿಯಲ್ಲಿ ಫೇಲ್ ಆದಬಳಿಕ ನನ್ನ ಮನಸ್ಸು ಕೂಡ ಹೆಬ್ಬಂಡೆಯಾಗಿತ್ತು. 39 ಪರ್ಸೆಂಟ್ ಪಡೆದು ಫೇಲಾಗಿದ್ದ ನಾನು ಈಗ ಯುಪಿಎಸ್ಸಿಯಲ್ಲಿ 644ನೇ ರ್ಯಾಂಕ್ ಪಡೆದಿದ್ದೇನೆ. ಪಿಎಸ್ಐ ಆಯ್ಕೆ ಆಗೋದಕ್ಕೂ ಮೊದಲೇ ಯುಪಿಎಸ್ಸಿಗೆ ಏನು ಬೇಕು ಅಂತ ಗೊತ್ತಿತ್ತು. ಕೆಲಸ ಮಾಡೋ ಜೊತೆಗೇ ಓದಬಹುದು ಅಂತಲೇ ಗುರಿ ನೆಟ್ಟಿದ್ದೆ. ಇದಕ್ಕೆಲ್ಲ ನನ್ನ ಒಳಗಿನ ಅಂತಃಶಕ್ತಿ ಕಾರಣ.
ಕಾಲೆಳೆದವರಿಗೆ ಕಾಲವೇ ಉತ್ತರ ನೀಡುತ್ತದೆ
ಇಲಾಖೆಯಲ್ಲಿದ್ದು ಓದುವುದಕ್ಕೆ ಅಡ್ಡಿಯಾಗಿಲ್ಲವೇ ಎಂಬ ಪ್ರಶ್ನೆಗೆ, ಸಾಮಾನ್ಯ ಸಿಬಂದಿಯಿಂದ ಹಿಡಿದು ಕಮಿಷನರ್ ವರೆಗೂ ನನಗೆ ಸಹಾಯ ಮಾಡಿದ್ದಾರೆ. ಒಂದು ವ್ಯವಸ್ಥೆ ಅಂದಮೇಲೆ ಎಲ್ಲ ಒಳ್ಳೆದು ಅಂತ ಹೇಳಕ್ಕಾಗಲ್ಲ. ಕಾಲೆಳೆದವರು ಇದ್ದಾರೆ, ಸಣ್ಣ ಪುಟ್ಟದಕ್ಕೂ ಶಿಸ್ತು ಕ್ರಮ ತಗೊಂಡವರಿದ್ದಾರೆ, ತೊಂದರೆ ಕೊಟ್ಟಿದ್ದಾರೆ. ಬೈದವರೆಲ್ಲ ಬಂಧುಗಳು, ಜರಿದವರೆಲ್ಲ ಜನ್ಮ ಬಂಧುಗಳಯ್ಯ ಅಂದ್ಕೊಂಡಿದ್ದೀನಿ. ಎಲ್ಲದಕ್ಕೂ ಕಾಲವೇ ಉತ್ತರ ನೀಡುತ್ತದೆ.
ಕನ್ನಡದಲ್ಲಿ ಬರೆದರೆ ರಿಸಲ್ಟ್ ಸಿಗಲ್ಲ
ಕನ್ನಡದಲ್ಲಿ ಓದಿ ಪಾಸ್ ಮಾಡೋದು ಅಂದ್ರೆ, ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂತೆ. ಮರುಭೂಮಿಯಲ್ಲಿ ನೀರೇ ಸಿಗಲ್ಲ ಅನ್ನುವಂತೆ ಕನ್ನಡದಲ್ಲಿ ಬರೆದರೆ ರಿಸಲ್ಟ್ ಸಿಗಲ್ಲ. ಕನ್ನಡ ಅನ್ನದ ಭಾಷೆಯಾಗಬೇಕು ಅಂದ್ಕೊಂಡು ಮಾಡಬೇಕು. ಕನ್ನಡದಲ್ಲಿ ಕೋಚಿಂಗ್ ಇರಲ್ಲ ಹೌದು. ನಮಗೆ ಮೀಡಿಯಂ ಯಾವುದಿದ್ದರೂ ಅಪ್ರೋಚ್ ಇರಬೇಕು, ಯುಪಿಎಸ್ಸಿ ಏನ್ ಡಿಮ್ಯಾಂಡ್ ಮಾಡುತ್ತೆ ಅಂತ ತಿಳ್ಕೊಂಡರೆ ಆ ಬಗ್ಗೆ ಗುರಿ ನೆಟ್ಟರೆ ಮುಗೀತು. ನಾನು 39 ಪರ್ಸೆಂಟ್, ಪಕ್ಕದವನಿಗೆ 93 ಪರ್ಸೆಂಟ್ ಇತ್ತು. ತಾಳ್ಮೆಯಿಂದ ಸಾಧಿಸಿದರೆ ಯುಪಿಎಸ್ಸಿಯಲ್ಲಿ ಸಾಧನೆ ಮಾಡಬಹುದು.
ನೀವು ಈ ಬಾರಿ ಪಾಸ್ ಆಗ್ತೀರಿ ಅಂತ ನಿರೀಕ್ಷೆ ಇತ್ತಾ ಎಂಬ ಪ್ರಶ್ನೆಗೆ, ನಿಜೆ ಹೇಳ್ಬೇಕಂದ್ರೆ, ನನಗೆ ಪಾಸ್ ಆಗ್ತೀನಂತ ನಿರೀಕ್ಷೆಯೇ ಇರಲಿಲ್ಲ. ಐದು ಇಂಟರ್ವ್ಯೂ ಫೇಲ್ ಆಗಿದೆ, ಆರನೇದಲ್ಲಿ ಆತ್ಮವಿಶ್ವಾಸನೇ ಇರಲಿಲ್ಲ. ಏನೂ ಆಗೋದಿಲ್ಲ ಅಂತಲೇ ಅಂದ್ಕೊಂಡಿದ್ದೆ. ಹಾಗಂತಲೇ, ನನ್ನ ಫ್ಯಾಮಿಲಿಯವರನ್ನು ಊರಿಗೆ ಕಳಿಸಿದ್ದೇನೆ. ಸುಮ್ಮನೆ ನಿರಾಸೆ ಪಡುವುದು ಬೇಡ ಅಂತ. ನನ್ನ ತಾಯಿ ನಿರಕ್ಷರ ಕುಕ್ಷಿ, ಆಕೆಗೆ ಯುಪಿಎಸ್ಸಿ ಅಂದ್ರೇನೆ ಗೊತ್ತಾಗಲ್ಲ. ದುಡಿದಿದ್ದಕ್ಕೆ ಕೂಲಿ ಸಿಕ್ಕಿದೆ ಅಂತ ತಾಯಿ ಅಂದ್ಕೋತಾರೆ ಅಷ್ಟೇ. ಗ್ರಾಮೀಣ, ಬಡ ಕೃಷಿಕ ಕುಟುಂಬದ ವ್ಯಕ್ತಿಗೂ ಪಾಸ್ ಆಗಬಹುದು ಅಂತ ದೇವರು ತೋರಿಸಿಕೊಟ್ಟಿದ್ದಾನೆ ಎಂದರು.
Shantappa Kurubara Police Sub Inspector from Karnataka cracks UPSC exam, exclusive story. Shantappa Kurubara, serving as a Police Sub-Inspector in Vidhana Soudha Police Station secured an All-India Rank of 644 in the Union Public Service Commission (UPSC) civil services examination-2023, results of which were announced on Tuesday. A native of Ballari, Shantappa’s father had passed away within a year of his birth. He pursued his education at a Kannada-medium government school and intending to join the government service.
11-04-25 11:10 pm
Bangalore Correspondent
Sameer MD, Vidoe Deleted, Dharmasthala: ಸೌಜನ್...
11-04-25 10:27 pm
Bangalore High court, Birthday, suspend: ಬೆಂಗ...
11-04-25 03:45 pm
Yatnal, Muslim, Prophet Muhammad Paigambar: ಪ...
11-04-25 03:28 pm
G Category Land, Nalin Kateel: ನಳಿನ್ ಕುಮಾರ್ ಗ...
10-04-25 04:40 pm
10-04-25 09:10 pm
HK News Desk
ಪಂಬನ್ ಸೇತುವೆ ಬೆನ್ನಲ್ಲೇ ಲಂಕಾ- ಭಾರತ ರೈಲ್ವೇ ಯಾನ...
10-04-25 01:25 pm
ಪಿಯುಸಿ ಹುಡುಗನ ವರಿಸಿದ ಮೂರು ಮಕ್ಕಳ ತಾಯಿ ; ಇಸ್ಲಾಂ...
10-04-25 11:30 am
Tahawwur Rana, India: ಮುಂಬೈ ದಾಳಿಯ ಮಾಸ್ಟರ್ ಮೈಂ...
09-04-25 04:07 pm
ಡೊನಾಲ್ಡ್ ಟ್ರಂಪ್ ಸುಂಕ ಬರೆಗೆ ಜಗತ್ತು ತಲ್ಲಣ ; ಕೋವ...
07-04-25 10:53 pm
11-04-25 02:49 pm
Mangalore Correspondent
Mangalore, Kolya, accident: ತೆಂಗಿನ ಮರದಿಂದ ಕೆಳ...
11-04-25 10:35 am
Mangalore Airport, MP Brijesh Chowta: ಮಂಗಳೂರು...
10-04-25 10:41 pm
Mangalore, Netravati Bridge Repair, Traffic b...
10-04-25 09:48 pm
Mangalore Accident, Padil: ಪಡೀಲ್ ; ಚಾಲಕನ ನಿಯಂ...
09-04-25 10:57 pm
11-04-25 04:38 pm
Bangalore Correspondent
Davanagere Murder, Suicide, Crime: ಪ್ರೀತಿಸಿ ಮ...
11-04-25 01:52 pm
Mangalore Auto Driver, Kunjathbail, Body, Cri...
11-04-25 11:42 am
Davanagere, Alcohol, Murder: ದಾವಣಗೆರೆ ; ಮದ್ಯ...
10-04-25 08:41 pm
Puttur crime, Sword, Mangalore: ಪುತ್ತೂರಿನಲ್ಲಿ...
10-04-25 02:57 pm