ಬ್ರೇಕಿಂಗ್ ನ್ಯೂಸ್
07-08-20 08:33 am Udupi Reporter ಕರ್ನಾಟಕ
ಉಡುಪಿ, ಆಗಸ್ಟ್ 07: ಕಳೆದ ವರ್ಷದ ಅತಿವೃಷ್ಟಿ ಅನಾಹುತಗಳು ಈ ವರ್ಷ ಮರುಕಳಿಸದಂತೆ ರಾಜ್ಯ ಸರ್ಕಾರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಪಡುಬಿದ್ರಿ ಬೀಚ್ನ ಕಡಲ್ಕೊರೆತ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ನೆರೆ ಸಂದರ್ಭ ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ಪರಿಕರಗಳ ಖರೀದಿಗೆ ಅಗ್ನಿಶಾಮಕ ದಳಕ್ಕೆ ₹ 20 ಕೋಟಿ ಬಿಡುಗಡೆ ಮಾಡಲಾಗಿದೆ. ಪೊಲೀಸ್, ಕಂದಾಯ ಹಾಗೂ ಅಗ್ನಿಶಾಮಕ ದಳ ಒಟ್ಟಾಗಿ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲಿದೆ ಎಂದು ತಿಳಿಸಿದರು.
ಉಸ್ತುವಾರಿ ಸಚಿವರು ತಕ್ಷಣ ಉಸ್ತುವಾರಿ ಜಿಲ್ಲೆಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಕೊಡುಗು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಅತಿವೃಷ್ಟಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸಚಿವರು ತಿಳಿಸಿದರು.
ಪಡುಬಿದ್ರಿ ಬೀಚ್ನಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಎನ್ಡಿಆರ್ಎಫ್ ನಿಧಿಯಿಂದ ಹಣ ಬಿಡುಗಡೆ ಮಾಡಲಾಗುವುದು. ಜಿಲ್ಲೆಯ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಲ್ಲಿ ₹ 3.5 ಕೋಟಿ ಹಣವಿದ್ದು, ಹೆಚ್ಚುವರಿಯಾಗಿ ₹ 5 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm