ಬ್ರೇಕಿಂಗ್ ನ್ಯೂಸ್
30-10-20 12:39 pm Headline Karnataka News Network ಕರ್ನಾಟಕ
ಬೆಂಗಳೂರು, ಅಕ್ಟೋಬರ್ 30 : ತನಗಿಂತ ಕಿರಿಯ ಅಧಿಕಾರಿಗೆ ಡಿಜಿಪಿ ಶ್ರೇಣಿಗೆ ಭಡ್ತಿ ನೀಡಿರುವ ವಿಚಾರದಲ್ಲಿ ಬೇಸರಗೊಂಡ ಹಿರಿಯ ಐಪಿಎಸ್ ಅಧಿಕಾರಿ, ಎಡಿಜಿಪಿ ಡಾ. ರವೀಂದ್ರನಾಥ್ ರಾತ್ರೋರಾತ್ರಿ ಕಂಟ್ರೋಲ್ ರೂಂಗೆ ತೆರಳಿ ರಾಜೀನಾಮೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ತನಗಿಂತ ಕಿರಿಯ ಅಧಿಕಾರಿ ಮತ್ತು ರ್ಯಾಂಕಿಗ್ನಲ್ಲಿ ತನಗಿಂದ ಹಿಂದೆ ಇದ್ದವರಿಗೆ ನಿವೃತ್ತಿ ಅಂಚಿನಲ್ಲಿರುವಾಗ ಬಡ್ತಿ ನೀಡಲಾಗಿದೆ ಎಂದು ಬೇಸರಗೊಂಡು ರವೀಂದ್ರನಾಥ್ ರಾತ್ರಿ 10.30 ರ ವೇಳೆಗೆ ಕಂಟ್ರೋಲ್ ರೂಂ ಕಚೇರಿಗೆ ತೆರಳಿ ಅಲ್ಲಿದ್ದ ಸಿಬ್ಬಂದಿ ಕೈಗೆ ರಾಜಿನಾಮೆ ಪತ್ರ ಇಟ್ಟು ಬಂದಿದ್ದಾರೆ ಎನ್ನಲಾಗುತ್ತಿದೆ.
ಈ ಬಗ್ಗೆ ಬೇಸರ ಹಂಚಿಕೊಂಡಿರುವ ರವೀಂದ್ರನಾಥ್, ಅ.30ಕ್ಕೆ ನಿವೃತ್ತರಾಗಲಿರುವ ಟಿ.ಸುನಿಲ್ ಕುಮಾರ್ ಅವರಿಗೆ 2020ರ ಅಕ್ಟೋಬರ್ 28ರಂದು ಎಡಿಜಿಪಿ ಶ್ರೇಣಿಯಿಂದ ಪೊಲೀಸ್ ಮಹಾ ನೀರ್ದೇಶಕ (ಡಿಜಿಪಿ) ಶ್ರೇಣಿಗೆ ಬಡ್ತಿ ನೀಡಲಾಗಿದೆ. ತನಗಿಂತ ಕಿರಿಯರಾದ ಸುನಿಲ್ ಕುಮಾರ್ ಗೆ ಡಿಜಿಯಾಗಿ ಕಾನೂನು ಬಾಹಿರವಾಗಿ ಬಡ್ತಿ ನೀಡಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ನನ್ನ ಅಪ್ಲಿಕೇಷನ್ ಕಡಗಣಿಸಿ ಸರ್ಕಾರ ಜ್ಯೂನಿಯರ್ ಒಬ್ಬರಿಗೆ ಪ್ರಮೋಷನ್ ಕೊಟ್ಟಿದೆ. ಸೀರಿಯಲ್ ಪ್ರಕಾರ ನಂಬರ್ 2 ನಲ್ಲಿದ್ದೇನೆ. ನಂಬರ್ 5 ಸುನೀಲ್ ಕುಮಾರ್ ಇದ್ದಾರೆ. ಅಲ್ಲದೆ, ನಿವೃತ್ತಿಗೆ ಎರಡು ದಿನ ಇರುವಾಗ ಬಡ್ತಿ ಪಡೆಯುತ್ತಿದ್ದಾರೆ. ಇದರಿಂದಾಗಿ ಡಿಜಿಪಿ ಶ್ರೇಣಿಗೆ ಸಿಗಬೇಕಾದ ಎಲ್ಲ ಸೌಲಭ್ಯ ಸಿಗುತ್ತವೆ, ಅಷ್ಟೇ. ಈಗ ನಾನು ಮಾತಾನಾಡಿದಕ್ಕೆ ನನ್ನ ಸಸ್ಪೆಂಡ್ ಮಾಡಬಹುದು. ರಾಜೀನಾಮೆ ಕೊಟ್ಟ ಮೇಲೆ ನಾಳೆ ಬನ್ನಿ ಮಾತಾಡೋಣ ಎಂದಿದ್ದಾರೆ. ಐಪಿಎಸ್ ಅಧಿಕಾರಿಗಳು ಹೇಳಿದಂತೆ ನಾವು ಕುಣಿಯಬೇಕು. ಇದು ಪರೋಕ್ಷ ಕಿರುಕುಳವಾಗುತ್ತಿದೆ. ಅದಕ್ಕೆ ನಾನು ಪರೇಡ್ ಗೂ ಕೂಡ ಹೋಗಿಲ್ಲ. ನನ್ನದು ಇನ್ನೂ ಮೂರು ವರ್ಷ ಸರ್ವಿಸ್ ಇದೆ. ಹೀಗಾಗಿ ಇವರನ್ನು ನಿಯಂತ್ರಣದಲ್ಲಿಡಬೇಕು ಎಂದು ನನಗೆ ಪರೋಕ್ಷವಾಗಿ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಬೇಸರಗೊಂಡು ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದರು.
1989 ರ ಬ್ಯಾಚಿನ ಅಧಿಕಾರಿಯಾಗಿರುವ ರವೀಂದ್ರನಾಥ್, ಕಳೆದ 12 ವರ್ಷಗಳಲ್ಲಿ ಮೂರು ಬಾರಿ ತನ್ನ ನೀಡಿದ ಪ್ರಸಂಗ ನಡೆದಿತ್ತು.
ಬುಧವಾರ ರಾಜ್ಯ ಸರಕಾರ 1989 ರ ಬ್ಯಾಚಿನ ಅಧಿಕಾರಿಗಳಾದ ಅಮರ್ ಕುಮಾರ್ ಪಾಂಡೆ, ಟಿ.ಸುನಿಲ್ ಕುಮಾರ್ ಅವರನ್ನು ಡಿಜಿಪಿ ಶ್ರೇಣಿಗೆ ಭಡ್ತಿ ನೀಡಿ ಆದೇಶ ಹೊರಡಿಸಿತ್ತು. ಈ ವಿಚಾರವನ್ನು ಪ್ರತಿಭಟಿಸಿ ರವೀಂದ್ರನಾಥ್ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಗೆ ರಾಜಿನಾಮೆ ಪತ್ರ ಸಲ್ಲಿಸಿದ್ದಾರೆ.
Senior IPS officer P Ravindranath on Wednesday resigned from service over alleged harassment in the department by ‘a few individuals’ and being targeted indirectly by giving promotion to his junior officers.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm