ಬ್ರೇಕಿಂಗ್ ನ್ಯೂಸ್
22-06-22 04:06 pm Sources: Oneindia ಉದ್ಯೋಗ
ಬೆಂಗಳೂರು, ಜೂನ್ 21: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 211 ಹುದ್ದೆಗಳಿದ್ದು, ಬೆಂಗಳೂರಿನಲ್ಲಿ 23 ಹುದ್ದೆಗಳಿವೆ.
ದೇಶದ ವಿವಿಧ ನಗರಗಳಲ್ಲಿ ಖಾಲಿ ಇರುವ FLC Counsellors, FLC Directors ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲು 30 ಜೂನ್ ಕೊನೆಯ ದಿನವಾಗಿದೆ.
FLC Counsellors 207 ಮತ್ತು FLC Directors 4 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 35,000 ದಿಂದ 60,000 ರೂ. ವೇತನ ನಿಗದಿ ಮಾಡಲಾಗಿದೆ.
ಅಹಮದಾಬಾದ್ 1, ಅಮರಾವತಿ 2, ಬೆಂಗಳೂರು 23, ಭೋಪಾಲ್ 7, ಭುವನೇಶ್ವರ 6, ಚಂಢೀಗಢ 49, ಗುವಾಹಟಿ 59, ಜೈಪುರ 2, ಕೋಲ್ಕತ್ತಾ 9, ಮಹಾರಾಷ್ಟ್ರ 11, ನವದೆಹಲಿ 11, ಪಾಟ್ನಾ 4, ತಿರುವನಂತಪುರಂ 27 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಸ್ಟೇಟ್ ಬ್ಯಾಂಕ್ ಇಂಡಿಯಾದ ನೇಮಕಾತಿ ನಿಯಮಗಳ ಪ್ರಕಾರ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 60 ವರ್ಷ ಗರಿಷ್ಠ 63 ವರ್ಷಗಳು (15 ಜೂನ್ 2022ಕ್ಕೆ ಅನ್ವಯ).
ಬ್ಯಾಂಕ್ ನೇಮಕಾತಿ ನಿಯಮಗಳ ಪ್ರಕಾರ ವಯೋಮತಿ ಸಡಿಲಿಕೆ ಇರುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿ ಮಾಡಬೇಕಿಲ್ಲ. ಶಾರ್ಟ್ ಲಿಸ್ಟ್, ಮೆರಿಟ್ ಲಿಸ್ಟ್ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ sbi.co.in ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ.
ಅಡುಗೆ ಸಹಾಯಕರ ನೇಮಕಾತಿ: ಕೊಪ್ಪಳ ನಗರಸಭೆ ವತಿಯಿಂದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಅಕ್ಷರದಾಸೋಹ ಯೋಜನೆಯಡಿ ಮಧ್ಯಾಹ್ನದ ಬಿಸಿ ಊಟದ ಅಡುಗೆ ಸಹಾಯಕ ಸಿಬ್ಬಂದಿಗಳನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ನಗರಸಭೆ ವ್ಯಾಪ್ತಿಯಲ್ಲಿ ಬರುವ ವಿವಿಧ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟದ ಅಡುಗೆ ಸಹಾಯಕ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ವಯೋನಿವೃತ್ತಿ ಹೊಂದಿದ ಸಿಬ್ಬಂದಿಗಳನ್ನು ಸರ್ಕಾರದ ಆದೇಶದಂತೆ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.
ಶಾಲೆಯ ಮುಖ್ಯೋಪಾಧ್ಯಾಯರು ನಗರಸಭೆ ಕಾರ್ಯಾಲಯಕ್ಕೆ ಪತ್ರ ಬರೆದು ಖಾಲಿಯಾದ ಹುದ್ದೆಗಳ ಭರ್ತಿ ಮಾಡಿಕೊಳ್ಳುವಂತೆ ಕೋರಿರುತ್ತಾರೆ. ಅದರಂತೆ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೊಪ್ಪಳ ನಗರದ ಸರಕಾರಿ ಕೇಂದ್ರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ (ಸಿ.ಪಿ.ಎಸ್), ವಿಜಯನಗರ ಆಶ್ರಯ ಕಾಲೋನಿಯ ಸರಕಾರಿ ಕಿರಿಯ ಪ್ರಾಧಮಿಕ ಶಾಲೆ, ಕೊಟಗಾರಗೇರಾ ಸರಕಾರಿ ಉರ್ದು ಹಿರಿಯ ಪ್ರಾಧಮಿಕ ಶಾಲೆ, ಗಾಂಧಿಸ್ಮಾರಕ ಸರಕಾರಿ ಹಿರಿಯ ಪ್ರಾಧಮಿಕ ಶಾಲೆ ಹಾಗೂ ಶಾಸಕರ ಮಾದರಿಯ ಹಿರಿಯ ಪ್ರಾಧಮಿಕ ಶಾಲೆಯಲ್ಲಿ ಮುಖ್ಯ ಅಡುಗೆಯವರು ಹಾಗೂ ಅಡುಗೆ ಸಹಾಯಕರನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವವರು ಕೊಪ್ಪಳ ನಗರದ ಖಾಯಂ ನಿವಾಸಿಯಾಗಿರಬೇಕು. ವಾರ್ಡಿನ ಮತದಾರರ ಪಟ್ಟಿಯಲ್ಲಿ ಅರ್ಜಿದಾರರ ಹೆಸರು ಸೇರ್ಪಡೆಯಾಗಿರಬೇಕು. ಚಾಲ್ತಿ ಸಾಲಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಅರ್ಜಿಯ ಜೊತೆ ಲಗತ್ತಿಸಬೇಕು.
ಇತ್ತೀಚಿನ ಭಾವಚಿತ್ರ ಹೊಂದಿರಬೇಕು. ಕುಟುಂಬದ ಪಡಿತರ ಚೀಟಿ, ಆಧಾರ್ ಕಾರ್ಡ ಹಾಗೂ ಚುನಾವಣಾ ಆಯೋಗದ ಗುರುತಿನ ಚೀಟಿಗಳೊಂದಿಗೆ ನಿಗದಿತ ನಮೂನೆಯಲ್ಲಿ ಜೂನ್ 24ರೊಳಗೆ ನಗರಸಭೆ ಕಾರ್ಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು.
ಅವಧಿ ವಿಸ್ತರಣೆ: ಕೊಪ್ಪಳ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಕ್ಲೀನರ್ಸ್ ಮತ್ತು ಲೋಡರ್ಸ್ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆಸಕ್ತರು ಅರ್ಜಿ ಸಲ್ಲಿಸುವ ದಿನಾಂಕವನ್ನು ಜುಲೈ 5 ರವರೆಗೆ ವಿಸ್ತರಿಸಲಾಗಿದೆ.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಕ್ಲೀನರ್ಸ್ ಮತ್ತು ಲೋಡರ್ಸ್ ಹುದ್ದೆಗಳಿಗೆ ಕರ್ನಾಟಕ ಮುನಿಸಿಪಾಲಿಟೀಸ್ (ನಗರಸಭೆ/ ಪುರಸಭೆ/ ಪಟ್ಟಣ ಪಂಚಾಯತಿಗಳಲ್ಲಿ ಕ್ಲೀನರ್ಸ್ ಮತ್ತು ಲೋಡರ್ಸ್ ವಿಶೇಷ ನೇಮಕಾತಿ) ನಿಯಮಗಳು 2021 ಮತ್ತು ಸರ್ಕಾರದ ಆದೇಶ ಸಂಖ್ಯೆ:ಯು.ಡಿ.ಡಿ./150/ಟಿ.ಎಂ.ಎಸ್./2017 ದಿ: 04-02-2022 ರಲ್ಲಿ ತಿಳಿಸಿದಂತೆ ಸ್ಥಳೀಯ ಸಂಸ್ಥೆವಾರು ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿ, ಜೂನ್ 20 ಕೊನೆಯ ದಿನವಾಗಿ ನಿಗದಿಪಡಿಸಲಾಗಿತ್ತು.
ಪ್ರಸ್ತುತ ಅರ್ಜಿ ಸಲ್ಲಿಕೆ ಅವಧಿಯನ್ನು ಜುಲೈ 5ರವರೆಗೆ ವಿಸ್ತರಿಸಲಾಗಿದ್ದು, ಮೀಸಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ಗಳನ್ನು ಸಂಪರ್ಕಿಸಬಹುದು.
SBI Recruitment Apply for 23 post in Bangalore.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
05-08-25 06:59 pm
HK News Desk
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗ...
04-08-25 05:11 pm
ಗೆಳೆಯನೊಂದಿಗೆ ಪತ್ನಿಯ ಸರಸ ; ಪರಿ ಪರಿ ಬೇಡಿಕೊಂಡರೂ...
04-08-25 02:16 pm
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತ...
03-08-25 05:44 pm
05-08-25 08:22 pm
Mangalore Correspondent
T-55 Battle Tank, Kadri, Mangalore: 1975ರ ಪಾಕ...
05-08-25 04:29 pm
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
Mangalore Congress: ಮೆಸ್ಕಾಂ ನೌಕರರ ಪಿಂಚಣಿಗೆ ಗ್...
04-08-25 09:51 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm