ಬ್ರೇಕಿಂಗ್ ನ್ಯೂಸ್
23-09-20 07:39 pm Bangalore Correspondent ಕ್ರೈಂ
ಬೆಂಗಳೂರು, ಸೆಪ್ಟಂಬರ್ 23: ಸಿಸಿಬಿ ಪೊಲೀಸರು ಒಂದೆಡೆ ಡ್ರಗ್ಸ್ ಪ್ರಕರಣದ ಬುಡವನ್ನೇ ಜಾಲಾಡುತ್ತಿದ್ದರೆ, ಸಿಸಿಬಿಯಲ್ಲೇ ಇದ್ದ ಎಸಿಪಿ ದರ್ಜೆಯ ಅಧಿಕಾರಿಯೊಬ್ಬ ತನಿಖೆಯ ಮಾಹಿತಿಗಳನ್ನು ಆರೋಪಿಗಳಿಗೆ ಸೋರಿಕೆ ಮಾಡುತ್ತಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಆರೋಪಿಗಳ ವಿಚಾರಣೆ ವೇಳೆ ಎಸಿಪಿಯ ಕೈವಾಡ ಕಂಡುಬಂದಿತ್ತು. ಇದನ್ನು ತಿಳಿದ ಬೆಂಗಳೂರು ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್, ಸರಕಾರಕ್ಕೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸಿದ್ದರು. ಇದೀಗ ಸಿಸಿಬಿಯ ಎಸಿಪಿ ಆಗಿದ್ದ ಮುದವಿ ಎಂಬವರನ್ನು ರಾಜ್ಯ ಸರಕಾರ ಅಮಾನತುಗೊಳಿಸಿ ಆದೇಶ ಮಾಡಿದೆ.
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಕಿಂಗ್ ಪಿನ್ ಎನ್ನಲಾಗುತ್ತಿರುವ ದೆಹಲಿ ಮೂಲದ ವೀರೇನ್ ಖನ್ನಾ ಜೊತೆಗೆ ಎಸಿಪಿ ಮುದವಿ ಸಂಪರ್ಕ ಹೊಂದಿದ್ದಲ್ಲದೆ, ತನಿಖಾ ಮಾಹಿತಿಯನ್ನು ಆರೋಪಿಗಳಿಗೆ ಸೋರಿಕೆ ಮಾಡುತ್ತಿದ್ದರು. ಈ ವಿಚಾರ ಆರೋಪಿಗಳ ತನಿಖೆ ಸಂದರ್ಭದಲ್ಲಿ ಸಿಸಿಬಿ ಮುಖ್ಯಸ್ಥರಿಗೆ ತಿಳಿದುಬಂದಿತ್ತು. ಖಚಿತ ಮಾಹಿತಿ ಜೊತೆಗೆ ಸಂದೀಪ್ ಪಾಟೀಲ್, ಈ ಬಗ್ಗೆ ಸರಕಾರಕ್ಕೆ ಪತ್ರ ಬರೆದಿದ್ದರು. ಎಸಿಪಿ ಮುದವಿ, ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ತನಿಖಾ ತಂಡದಲ್ಲಿ ಇರಲಿಲ್ಲ. ಸಿಸಿಬಿ ಮಹಿಳಾ ಸುರಕ್ಷತಾ ವಿಭಾಗದಲ್ಲಿ ಎಸಿಪಿ ಆಗಿದ್ದರು. ಆದರೆ, ತಂಡದಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿದ್ದ ಮಲ್ಲಿಕಾರ್ಜುನ ಎಸಿಪಿಗೆ ಮಾಹಿತಿ ನೀಡುತ್ತಿದ್ದರು. ಇವರಿಬ್ಬರು ಡ್ರಗ್ಸ್ ಪ್ರಕರಣದಲ್ಲಿ ಆರೋಪಿಗಳಿಗೆ ತನಿಖೆಯ ಮಾಹಿತಿಗಳನ್ನು ಸೋರಿಕೆ ಮಾಡುತ್ತಿದ್ದ ವಿಚಾರ ವಿಚಾರಣೆಯಲ್ಲಿ ತಿಳಿದುಬಂದಿತ್ತು. ಇದೀಗ ಹೆಡ್ ಕಾನ್ಸ್ ಟೇಬಲ್ ಮತ್ತು ಎಸಿಪಿ ಇಬ್ಬರನ್ನೂ ಸರಕಾರ ಸಸ್ಪೆಂಡ್ ಮಾಡಿದೆ.
ವೀರೇನ್ ಖನ್ನಾ ಬಂಧನವಾದ ನಂತರವೂ ಎಸಿಪಿ ಆತನಿಗೆ ಸಹಕರಿಸುತ್ತಿದ್ದರು. ಕಸ್ಟಡಿಯಲ್ಲಿದ್ದ ಸಂದರ್ಭ ಖನ್ನಾಗೆ ಮೊಬೈಲ್ ನೀಡಿದ್ದ ಆರೋಪವೂ ಎಸಿಪಿ ಮೇಲಿದೆ.
10-05-26 01:04 pm
HK News Staffer
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
IPS Ramachandra Rao: ಸರ್ಕಾರಿ ಕಚೇರಿಯಲ್ಲೇ ತುಂಟಾ...
07-05-26 03:10 pm
10-05-26 12:26 pm
HK News Staffer
ತಮಿಳುನಾಡನ್ನು ದೇವರೇ ಕಾಪಾಡಬೇಕು ; ಟಿವಿಕೆ ಗ್ಯಾರಂಟ...
09-05-26 12:06 pm
ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ; ಶತ್ರುರಾಷ್ಟ...
09-05-26 11:14 am
ಬಂಗಾಳದಲ್ಲಿ ಕೇಸರಿ ಯುಗಾರಂಭ ; ಮೊದಲ ಬಿಜೆಪಿ ಸಿಎಂ ಆ...
08-05-26 06:45 pm
ದ್ರಾವಿಡರ ನಾಡಲ್ಲಿ ದಳಪತಿ ವಿಜಯ್ ಸರ್ಕಾರ್ ! ಮ್ಯಾಜಿ...
08-05-26 06:38 pm
09-05-26 11:51 pm
Mangalore Correspondent
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ ; ಮಂಗಳೂರು...
08-05-26 09:05 pm
09-05-26 10:29 pm
HK News Desk
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm
ಸಾಲ ಕೊಟ್ಟ ಮಹಿಳೆಯ ಜೀವ ತೆಗೆದ ಕಟುಕರು; ಅಪಘಾತದ ನಾಟ...
09-05-26 08:29 pm
ಆರೋಪಿಯಿಂದಲೇ ಲಂಚ ; ಒಂದು ಲಕ್ಷ ಪಡೆಯುತ್ತಿದ್ದಾಗ ಗು...
09-05-26 06:42 pm
ಸ್ನಾನಕ್ಕೆ ತೆರಳಿದ್ದ ಸ್ನೇಹಿತೆಯರು ನದಿಯಲ್ಲಿ ಮುಳುಗ...
09-05-26 09:54 am