ಕಿಶೋರ್ ಸ್ನೇಹಿತೆ ಮಣಿಪುರ ಮೂಲದ ಯುವತಿಯ ಬಂಧನ

22-09-20 11:38 am       Mangalore Correspondent   ಕ್ರೈಂ

ನಟ ಕಿಶೋರ್ ಅಮನ್ ಶೆಟ್ಟಿ ಜೊತೆ ಡ್ರಗ್ ಸೇವಿಸ್ತಿದ್ದ ಮತ್ತು ಬೇರೆ ಯುವತಿಯರಿಗೆ ಡ್ರಗ್ ಪೂರೈಸುತ್ತಿದ್ದ ಆರೋಪದಲ್ಲಿ ಓರ್ವ ಯುವತಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು, ಸೆಪ್ಟಂಬರ್ 22: ಡ್ರಗ್ ಪ್ರಕರಣದಲ್ಲಿ ಬಂಧಿತನಾಗಿರುವ ಡ್ಯಾನ್ಸರ್, ನಟ ಕಿಶೋರ್ ಅಮನ್ ಶೆಟ್ಟಿ (30) ಜೊತೆ ಡ್ರಗ್ ಸೇವಿಸ್ತಿದ್ದ ಮತ್ತು ಬೇರೆ ಯುವತಿಯರಿಗೆ ಡ್ರಗ್ ಪೂರೈಸುತ್ತಿದ್ದ ಆರೋಪದಲ್ಲಿ ಓರ್ವ ಯುವತಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಣಿಪುರ ಮೂಲದ ಆಸ್ಕಾ ಎಂಬ ಯುವತಿಯನ್ನು ಬಂಧಿಸಲಾಗಿದೆ. ಈಕೆ ಮಂಗಳೂರಿನಲ್ಲಿ ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗ್ತಿದೆ. ಈಕೆ ಕಿಶೋರ್ ಜೊತೆಗೆ ಡ್ರಗ್ಸ್ ಸೇವಿಸಿರುವುದಲ್ಲದೆ, ಪೂರೈಕೆ ಜಾಲದಲ್ಲಿ ಇದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಕಿಶೋರ್ ಸಂಪರ್ಕದಲ್ಲಿದ್ದು, ಡ್ರಗ್ಸ್ ಸೇವನೆ ಆರೋಪದಲ್ಲಿ ಇಬ್ಬರು ಯುವತಿಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಅಲ್ಲದೆ ಯುವತಿಯರ ರಕ್ತದ ಮಾದರಿಯನ್ನು ಡ್ರಗ್ಸ್ ಪತ್ತೆಗಾಗಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ಬಂದಿದ್ದು, ಆಸ್ಕಾ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ. ಇನ್ನೊಬ್ಬಳು ಯುವತಿಯ ವರದಿ ನೆಗೆಟಿವ್ ಬಂದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಮಾದಕ ದ್ರವ್ಯ ಹೊಂದಿದ್ದ ಆರೋಪದಲ್ಲಿ ಅಕೀಲ್ ನೌಶೀಲ್ ಮತ್ತು ಡ್ಯಾನ್ಸರ್, ನಟ ಕಿಶೋರ್ ಶೆಟ್ಟಿಯನ್ನು ಸೆ.19ರಂದು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು.

Join our WhatsApp group for latest news updates